newsfirstkannada.com

×

ಕುಡಿದು ಗಲಾಟೆ.. ಯುವಕನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಂದ ಹಂತಕರು..!

Share :

Published November 8, 2023 at 3:37pm

    ಊರ ಹಬ್ಬದ ತಯಾರಿ ವೇಳೆ ನಡೆದ ಗಲಾಟೆ

    ಯುವಕನನ್ನು ಕೊಚ್ಚಿ ಕೊಂದು ಹಾಕಿದ ಹಂತಕರು

    ಸುಂದರ್​ ಮತ್ತಾತನ ಗ್ಯಾಂಗ್​​ನಿಂದ ಭೀಕರ ಕೊಲೆ!

ಬೆಂಗಳೂರು: ಮಾತಿಗೆ ಮಾತು ಬೆಳೆದು ಯುವಕನ ಕೊಲೆಗೈದಿರೋ ಘಟನೆ ಲಿಂಗರಾಜಪುರ ಬಳಿ ನಡೆದಿದೆ. ಪ್ರವೀಣ್ ಕೊಲೆಯಾದ ಯುವಕ.

ಪ್ರವೀಣ್​​​ ಜಾತ್ರೆ ಎಂದು ಡಿಜೆ ಬಾಕ್ಸ್​​ಗಳನ್ನು ಹಾಕಲು ಹೋಗಿದ್ದ. ಈ ವೇಳೆ ಸುಂದರ್​ ಮತ್ತಾತನ ಗ್ಯಾಂಗ್​​ ಪ್ರವೀಣ್​ ಮೇಲೆ ಹಲ್ಲೆ ನಡೆಸಿದೆ. ಗ್ಯಾಂಗ್​ ಪ್ರವೀಣ್​ನನ್ನು ಮಾರಾಕಾಸ್ತ್ರಗಳಿಂದ ಕೊಂದು ಎಸ್ಕೇಪ್​ ಆಗಿದೆ. ಈ ಸಂಬಂಧ ಬಾಣಸವಾಡಿ ಪೊಲೀಸ್​​ ಸ್ಟೇಷನ್​ನಲ್ಲಿ ಕೇಸ್​ ಆಗಿದೆ.

ಅಸಲಿಗೆ ಆಗಿದ್ದೇನು..?

ಸುಂದರ್​ ಮತ್ತಾತನ ಗ್ಯಾಂಗ್​​ ಪ್ರವೀಣ್​ಗೆ ಮೊದಲೇ ಪರಿಚಯ ಇತ್ತು. ಕಳೆದ ರಾತ್ರಿ ಊರ ಹಬ್ಬಕ್ಕೆಂದು ತಯಾರಿ ನಡೆಸಲಾಗುತ್ತಿತ್ತು. ಸುಂದರ್​​ ಮತ್ತಾತನ ಗ್ಯಾಂಗ್​​ ಶಾಮಿಯಾನ ಕೆಲಸ ಮಾಡುತ್ತಿತ್ತು. ಆಗ ಮಾತಿಗೆ ಮಾತು ಬೆಳೆದ ಪ್ರವೀಣ್​​, ಸುಂದರ್​ ಗ್ಯಾಂಗ್​ ಮಧ್ಯೆ ಗಲಾಟೆ ನಡೆದಿದೆ. ಜತೆಗೆ ಸುಂದರ್​​ಗೆ ಪ್ರವೀಣ್​ ಹೊಡೆದು ಅಶ್ಲೀಲವಾಗಿ ಬೈದಿದ್ದಾನೆ. ಇದಕ್ಕೆ ಸುಂದರ್​​ ಮತ್ತು ಗ್ಯಾಂಗ್​​ ಹೆಲ್ಮೆಟ್​ನಿಂದ ಹೊಡೆದಿದ್ದು, ಪ್ರವೀಣ್​ ಸಾವನ್ನಪ್ಪಿದ್ದಾರೆ. ಇವರು ಕುಡಿದು ಗಲಾಟೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಡಿದು ಗಲಾಟೆ.. ಯುವಕನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಂದ ಹಂತಕರು..!

https://newsfirstlive.com/wp-content/uploads/2023/11/Crime.jpg

Load More