newsfirstkannada.com

ಕಂಡ ಕಂಡಲ್ಲಿ ಕಸ ಹಾಕೋ ಬೆಂಗಳೂರಿಗರೇ.. ಇದು ನೀವು ಓದಲೇಬೇಕಾದ ಸ್ಟೋರಿ!

Share :

14-09-2023

    ಈ ಪರಿಸರ ಸ್ನೇಹಿ ಅಪಾರ್ಟ್‌ಮೆಂಟ್‌ನಲ್ಲಿದ್ರೆ ನೋ ಟೆನ್ಷನ್‌

    ಕಸದಿಂದ ರಸ! ಸೋಲಾರ್‌ ಪವರ್‌ ಸಂಪೂರ್ಣ ಸದ್ಬಳಕೆ..!

    ಇಲ್ಲಿರೋ ಒಂದೊಂದು ವ್ಯವಸ್ಥೆಗಳು ಎಲ್ಲರಿಗೂ ಮಾದರಿ

ಬೆಂಗಳೂರು: ಕಂಡ ಕಂಡಲ್ಲಿ ಕಸ ಹಾಕಿ ವಾತವರಣವನ್ನ ಎಷ್ಟಾಗುತ್ತೋ ಅಷ್ಟು ಹದಗೆಡಿಸುವ ಜನರನ್ನ ನಾವು ನೀವು ನೋಡ್ತಾ ಇರ್ತೀವಿ. ಆದ್ರೆ, ಇಂತವ್ರ ಮಧ್ಯೆ ಈ ಅಪಾರ್ಟ್​ಮೆಂಟ್​​ನ ನಿವಾಸಿಗಳ ಚಿಂತನೇ ಅಲ್ಟಿಮೇಟ್​ ಆಗಿದೆ.

ನಗರದ ಪ್ರತಿಷ್ಠಿತ ಅಪಾರ್ಟ್​ಮೆಂಟ್ ​ಆಗಿರುವ ಡಿಎಲ್ಎಫ್ ಅಪಾರ್ಟ್​ಮೆಂಟ್​​ ನಿವಾಸಿಗಳು ಸ್ವಚ್ಛ ಬೆಂಗಳೂರು, ಸ್ವಸ್ಥ ಜೀವನದತ್ತ ಮೊರೆ ಹೋಗಿದ್ದಾರೆ. ಅದಕ್ಕೆ ಅವರು ಕಂಡುಕೊಂಡಿರುವ ಉಪಾಯ ಮಾತ್ರ ಬ್ರಿಲ್ಲಿಯಂಟ್. ಅದನ್ನ ಒಂದೊಂದಾಗಿ ನಿಮಗೆ ತೋರಿಸ್ತೀವಿ

ಇವರು ಸ್ವಚ್ಛತೆ ಕಾಪಾಡಲು ಎಲೆಕ್ಟ್ರಾನಿಕ್ ಚಾರ್ಜರ್ ಪಾಯಿಂಟ್​ಗಳನ್ನ ಸಹ ಅಳವಡಿಸಿದ್ದಾರೆ. ಮಳೆ ನೀರು ಶೇಖರಣೆ ವ್ಯವಸ್ಥೆ, ಬಳಕೆಯಾದ ನೀರನ್ನ ಮರುಬಳಕೆ ಮಾಡುವ ಸಲುವಾಗಿ ಎಸ್​ಟಿಪಿ ವಾಟರ್ ಟ್ರೀಟ್​ಮೆಂಟ್ ವ್ಯವಸ್ಥೆ ಸಹ ಮಾಡಿದ್ದು ಈ ನೀರನ್ನ ಉದ್ಯಾನವನ ಹಾಗೂ ಟಾಯ್ಲೆಟ್ ಫ್ಲಶ್​ಗಾಗಿ ಬಳಸಲಾಗುತ್ತೆ. ಹೀಗಾಗಿ, ಈ ಅಪಾರ್ಟ್​ಮೆಂಟ್ ಎಲ್ಲರಿಗೂ ಮಾದರಿ ಅಪಾರ್ಟ್​ಮೆಂಟ್​ ಅಂತಾನೇ ಹೇಳಬಹುದು.

ಕಸ ಮುಕ್ತ ಬೆಂಗಳೂರಿಗಾಗಿ ಬಿಬಿಎಂಪಿ ಕಟ್ಟಿನಿಟ್ಟಿನ ಆದೇಶ ಹೊರಡಿಸಿದೆ. ಹಸಿ ಹಾಗೂ ಒಣ ಕಸ ಬೇರ್ಪಡಿಸದೇ ತ್ಯಾಜ್ಯ ಕೊಡುವ ಮನೆಗಳಿಗೆ ದಂಡ ವಿಧಿಸಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಬರೋ ಅನಧಿಕೃತ ಕಟ್ಟಡ ಹಾಗೂ ವಾಸ ಯೋಗ್ಯವಲ್ಲದ ಕಟ್ಟಡಗಳನ್ನು ಪತ್ತೆ ಮಾಡಿ ತೆರವುಗೊಳಿಸಬೇಕು. ಇದರಿಂದಲೇ ಕಸ ಹೆಚ್ಚಾಗಿದೆ ಎಂದು ಆದೇಶದ ಪ್ರತಿಯಲ್ಲಿ ಬಿಬಿಎಂಪಿ ಉಲ್ಲೇಖಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಂಡ ಕಂಡಲ್ಲಿ ಕಸ ಹಾಕೋ ಬೆಂಗಳೂರಿಗರೇ.. ಇದು ನೀವು ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2023/09/Kasa.jpg

Load More