newsfirstkannada.com

ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ವಾಹನ.. ಅಪ್ಪನ ಕಳೆದುಕೊಂಡು ಮಕ್ಕಳು ಅನಾಥ

Share :

Published July 5, 2024 at 1:48pm

Update July 5, 2024 at 2:38pm

    ಅವೈಜ್ಞಾನಿಕ ಕೆಲಸಕ್ಕೆ ಸಾಲು ಸಾಲು ಅಪಘಾತ

    ಚಾಲಕನ ನಿಯಂತ್ರಣ ತಪ್ಪಿ ಸಂಭವಿಸಿದ ಅನಾಹುತ

    ಇಬ್ಬರು ಯುವಕರು ಬದುಕಿದ್ದೇ ಒಂದು ಪವಾಡ

ಚಿಕ್ಕೋಡಿ: ಪಿಕಪ್ ವಾಹನವು ನಿಯಂತ್ರಣ ತಪ್ಪಿ ಆಳದ ಕಂದಕಕ್ಕೆ ಉರುಳಿ ಬಿದ್ದು ಓರ್ವ ಸಾವನ್ನಪ್ಪಿರುವ ಘಟನೆ ಹಿಪ್ಪರಗಿ ಆಣೆಕಟ್ಟಿನ ಸಮೀಪ ನಡೆದಿದೆ.

ಇದನ್ನೂ ಓದಿ:ಸೋಲಿನ ಬೆನ್ನಲ್ಲೇ I am sorry ಎಂದ ಸುನಕ್.. ನೂತನ ಪ್ರಧಾನಿಯಿಂದ ಬಸವಣ್ಣನಿಗೆ ಗೌರವ ಸಲ್ಲಿಕೆ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದ ಹೊರವಲಯದಲ್ಲಿ ದುರ್ಘಟನೆ ಸಂಭವಿಸಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ಮೂಲದ ಸಯ್ಯದ್ ನದಾಫ್ (55) ಮೃತ ದುರ್ದೈವಿ. ಪಿಕಪ್ ವಾಹನದಲ್ಲಿದ್ದ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ:ಅಭಿಮಾನಿಗಳಿಗೆ ಟೀಮ್​ ಇಂಡಿಯಾದಿಂದ ಸ್ಪೆಷಲ್​ ಗಿಫ್ಟ್.. ಬೆಲೆ ಕಟ್ಟಲಾಗದ ಐದು ಉಡುಗೊರೆ..!

ಮೃತ ಸಯ್ಯದ್ ಪಿಕಪ್ ವಾಹನದಲ್ಲಿ ಬೀಸುವ ಕಲ್ಲಿನ ವ್ಯಾಪಾರ ಮಾಡುತ್ತಿದ್ದರು. ಅಥಣಿ ಕಡೆಗೆ ಬರುವಾಗ ಹಿಪ್ಪರಗಿ ಆಣೆಕಟ್ಟಿನ ಸಮೀಪ ಅವಘಡ ನಡೆದಿದೆ. ಸರ್ಕಾರದ ಸೋಮಾರಿತನಕ್ಕೆ ತಂದೆಯ ಜೀವ ಕಳೆದುಕೊಂಡು ಮಕ್ಕಳು ಅನಾಥರಾಗಿದ್ದಾರೆ. ಅಪಘಾತಕ್ಕೆ ಅಧಿಕಾರಿಗಳ ಅವೈಜ್ಞಾನಿಕ ರಸ್ತೆಯೇ ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ:ಹಾಸನದಲ್ಲಿ ಮತ್ತೊಂದು ಬಾಲಕಿ ಸಾವು.. ಒಂದೇ ವಾರದಲ್ಲಿ ಶಂಕಿತ ಡೆಂಘೀಗೆ ನಾಲ್ವರು ಬಾಲಕಿಯರು ಬಲಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ವಾಹನ.. ಅಪ್ಪನ ಕಳೆದುಕೊಂಡು ಮಕ್ಕಳು ಅನಾಥ

https://newsfirstlive.com/wp-content/uploads/2024/07/CKD-ACCIDENT.jpg

Load More