newsfirstkannada.com

VIDEO: ಕೇವಲ 1 ರೂಪಾಯಿಗೆ 1 ಬಿರಿಯಾನಿ.. ಬಂಪರ್ ಆಫರ್ ಕೊಟ್ಟ ಹೋಟೆಲ್ ಮಾಲೀಕನಿಗೆ ಏನಾಯ್ತು ಗೊತ್ತಾ?

Share :

17-06-2023

    1 ರೂ. 1 ಬಿರಿಯಾನಿ ಅಂತಾ ಗೊತ್ತಾಗಿದ್ದೇ ತಡ ಹೋಟೆಲ್ ಮುಂದೆ ಜನವೋ ಜನ

    1 ರೂಪಾಯಿಗೆ ಬಿರಿಯಾನಿ ಕೊಟ್ಟು, ಕೊಟ್ಟು ಫುಲ್ ಸುಸ್ತಾದ ಹೋಟೆಲ್ ಮಾಲೀಕ

    1 ರೂಪಾಯಿ ಬಿರಿಯಾನಿ ಸಿಕ್ಕ ಗ್ರಾಹಕರಿಗೆ ಪೊಲೀಸರು 100 ಫೈನ್ ಹಾಕಿದ್ರು ಯಾಕೆ?

ಬಿರಿಯಾನಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಬಿರಿಯಾನಿ ಎಂದರೆ ಅಚ್ಚು ಮೆಚ್ಚು. ಇನ್ನು 1 ರೂಪಾಯಿಗೆ ಬಿರಿಯಾನಿ ಕೋಡ್ತಿವಿ ಎಂದರೆ ಯಾರು ತಾನೇ ಬಿಡ್ತಾರೆ ಹೇಳಿ. ಬಿರಿಯಾನಿ ಪ್ರಿಯರು ಚಪ್ಪರಿಸಿಕೊಂಡು ತಿನ್ನುತ್ತಾರೆ.

ಹೀಗೆ ತೆಲಂಗಾಣ ಉದ್ಯಮಿಯೊಬ್ಬರು ಹೊಸ ಹೋಟೆಲ್​ ಆರಂಭಿಸಿದ್ದರು. ತನ್ನ ಹೋಟೆಲ್​ ಬಗ್ಗೆ ಜನಕ್ಕೆ ತಿಳಿಯಲೆಂದು 1 ರೂಪಾಯಿ ನೋಟ್​ಗೆ ಒಂದು ಬಿರಿಯಾನಿ ಕೊಡುವುದಾಗಿ ಪ್ರಚಾರ ನಡೆಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಬಿರಿಯಾನಿ ಪ್ರಿಯರು ಹೊಟೇಲ್ ಮುಂದೆ ಮುಗಿಬಿದ್ದಿದ್ದಾರೆ. ಇನ್ನು ಕೆಲವರು ತಮ್ಮ ತಮ್ಮ ವಾಹನಗಳಲ್ಲಿ ಬಿರಿಯಾನಿ ಕೊಂಡೊಯ್ಯಲು ಬಂದಿದ್ದಾರೆ. ಹೀಗಾಗಿ ರಸ್ತೆಯುದ್ದಕ್ಕೂ ಟ್ರಾಫಿಕ್​ ಜಾಮ್​ ಸಮಸ್ಯೆ ಉಂಟಾಗಿದೆ.  ಬಿರಿಯಾನಿ ಘೋಷಿಸಿದ್ದು ಜನರ ದಂಡೇ ಬಿರಿಯಾನಿ ಕೊಂಡೊಯ್ಯಲು ಹರಿದು ಬಂದಿತ್ತು.

ಒಂದು ರೂಪಾಯಿಗೆ ಬಿರಿಯಾನಿ ಕೊಡುವುದಾಗಿ ಪ್ರಚಾರ ಮಾಡಿದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹೋಟೆಲ್​ಗೆ ಆಗಮಿಸಲು ಪ್ರಾರಂಭಿಸಿದರು. ಹೋಟೆಲ್​ ಮಾಲೀಕ ಕೊಟ್ಟ ಜಾಹೀರಾತಿನಿಂದ ಕೆಲವೇ ಗಂಟೆಗಳಲ್ಲಿ ಸುಮಾರು 800 ಪಾರ್ಸೆಲ್‌ಗಳನ್ನು ಮಾರಾಟ ಮಾಡಿದರು. ಬಿರಿಯಾನಿ ಎಲ್ಲವೂ ಕೆಲವೇ ಗಂಟೆಗಳಲ್ಲಿ ಖಾಲಿಯಾಗಿದ್ದು, ಗ್ರಾಹಕರಿಗೆ ಬಿರಿಯಾನಿ ಇಲ್ಲ, ಖಾಲಿಯಾಗಿದೆ ಎಂದು ಅಂಗಡಿಯವರು ತಿಳಿಸಿದ್ದಾರೆ.

ಆದರೆ ಇದಕ್ಕೆ ಆಕ್ರೋಶಗೊಂಡ ಬಿರಿಯಾನಿ ಪ್ರಿಯರು ಹೋಟೆಲ್ ಮಾಲೀಕರ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ. ಈ ಜಗಳ ವಿಕೋಪಕ್ಕೆ ತಿರುಗಿ ಹೋಟೆಲ್​ ಸಿಬ್ಬಂದಿ ಹಾಗೂ ಜನರು ನಡುವೆ ಮಾರಾಮಾರಿ ನಡೆದಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡಿದ್ದಾರೆ‌‌. ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ವಾಹನ ಸವಾರರಿಗೆ 100 ರೂಪಾಯಿ ದಂಡ ವಿಧಿಸಿದ್ದಾರೆ. 1 ರೂಪಾಯಿ ಬಿರಿಯಾನಿಯನ್ನು ತೆಗೆದುಕೊಂಡು ಹೋಗಲು ಬಂದ ಜನರು 100 ರೂಪಾಯಿ ಪೊಲೀಸ್​ ಅಧಿಕಾರಿಗಳಿಗೆ ಕೊಟ್ಟು ಹೋಗುವಂತಹ ಸ್ಥಿತಿ ಎದುರಾಯಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಕೇವಲ 1 ರೂಪಾಯಿಗೆ 1 ಬಿರಿಯಾನಿ.. ಬಂಪರ್ ಆಫರ್ ಕೊಟ್ಟ ಹೋಟೆಲ್ ಮಾಲೀಕನಿಗೆ ಏನಾಯ್ತು ಗೊತ್ತಾ?

https://newsfirstlive.com/wp-content/uploads/2023/06/biriyani-4.jpg

Load More