newsfirstkannada.com

ಯಾರಿಗುಂಟು, ಯಾರಿಗಿಲ್ಲ.. ಈ ಅವಕಾಶ ಮಿಸ್​ ಮಾಡ್ಬೇಡಿ.. ಇಲ್ಲಿ 5 ಲಕ್ಷ ವಿಮಾನ ಟಿಕೆಟ್ ಉಚಿತ..!

Share :

25-02-2023

    ‘ಹಲೋ, ಹಾಂಗ್ ಕಾಂಗ್’ ಹೆಸರಿನಲ್ಲಿ ಉಚಿತ ವಿಮಾನ ಟಿಕೆಟ್

    ಹಾಂಗ್ ಕಾಂಗ್​ಗೆ ಹೋಗಲು ಭಯ ಪಡ್ತಿರೋದೇಕೆ ಜನ..?

    ಮೂರು ವರ್ಷಗಳಲ್ಲಿ ನಷ್ಟ ಅನುಭವಿಸ್ತಿದೆ ಹಾಂಕ್​-ಕಾಂಗ್ ಪ್ರವಾಸೋದ್ಯಮ

ಚೀನಾ ನಿರ್ಮಿತ ಕೊರೊನಾದಿಂದ ಇಡೀ ವಿಶ್ವವೇ ತತ್ತರಿಸಿದ್ದು, ನಿಧಾನವಾಗಿ ಒಂದೊಂದೇ ರಾಷ್ಟ್ರಗಳು ಚೇತರಿಸಿಕೊಳ್ಳುತ್ತಿವೆ. ಇದಕ್ಕೆ ಹಾಂಕ್​ ಕಾಂಗ್​ ಕೂಡ ಹೊರತಾಗಿಲ್ಲ. ಮಹಾಮಾರಿ ಕೊರೊನಾದಿಂದ ಪ್ರವಾಸೋದ್ಯಮ ಜರ್ಜರಿತಗೊಂಡಿತ್ತು, ಇದೀಗ ಹಂತ-ಹಂತವಾಗಿ ಚೇತರಿಸಿಕೊಳ್ಳುತ್ತಿದ್ದು, ಪ್ರವಾಸಿಗರೇ ಸ್ಪೆಷಲ್ ಆಫರ್ ಒಂದನ್ನು ಹಾಂಗ್​ ಕಾಂಗ್ ಸರ್ಕಾರ ನೀಡಿದೆ.

ವಿದೇಶಿ ಪ್ರಯಾಣಿಕರು ಮತ್ತು ಪ್ರವಾಸಿಗರನ್ನು ತಮ್ಮ ದೇಶದಕ್ಕೆ ಭೇಟಿ ನೀಡುವಂತೆ ಬಹಿರಂಗವಾಗಿ ಓಲೈಸುವ ಪ್ರಯತ್ನಕ್ಕೆ ಮುಂದಾಗಿದೆ. ಅಂತೆಯೇ ಹಾಂಗ್ ಕಾಂಗ್ ಪ್ರವಾಸೋದ್ಯಮ ಮಂಡಳಿಯು ‘ಹಲೋ, ಹಾಂಗ್ ಕಾಂಗ್’ ಹೆಸರಿನಲ್ಲಿ ಉಚಿತ ವಿಮಾನ ಟಿಕೆಟ್ ನೀಡೋದಾಗಿ ಘೋಷಣೆ ಮಾಡಿದೆ. ಬರೋಬ್ಬರಿ 5 ಲಕ್ಷ ಮಂದಿಗೆ ಉಚಿತ ವಿಮಾನ ಟಿಕೆಟ್ ನೀಡಲು ನಿರ್ಧರಿಸಿದೆ. ಈ ಮೂಲಕ ಪ್ರವಾಸಿಗರನ್ನು ಆಕರ್ಷಿಸಿ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ.

ಹಾಂಗ್ ಕಾಂಗ್ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಡಾನ್ ಚೆಂಗ್ ನೀಡಿರುವ ಮಾಹಿತಿ ಪ್ರಕಾರ.. ಕೊರೊನಾ ಮಹಾಮಾರಿ ನಿಧಾನವಾಗಿ ಕೊನೆಗೊಳ್ಳುತ್ತಿದೆ. ‘ಹಲೋ, ಹಾಂಗ್ ಕಾಂಗ್’ ಮೂಲಕ ನಿಮ್ಮನ್ನು ಮತ್ತೆ ಸ್ವಾಗತಿಸಲು ಎದುರು ನೋಡುತ್ತಿದ್ದೇವೆ. ವಿಮಾನ ಯಾನ ಸಂಸ್ಥೆಗಳನ್ನು ಬೆಂಬಲಿಸಲು ಉಚಿತ ಟಿಕೆಟ್‌ಗಳನ್ನು ಈಗಾಗಲೇ ಖರೀದಿಸಲಾಗಿದೆ ಎಂದು ತಿಳಿಸಿದ್ದಾರೆ.

ಹಾಂಗ್ ​ಕಾಂಗ್​ಗೆ ಹೋಗಲು ಭಯ
ಕೊರೊನಾ ಹಿನ್ನೆಲೆಯಲ್ಲಿ ಹಾಂಕ್​-ಕಾಂಗ್​ನಲ್ಲಿ ದೀರ್ಘಕಾಲದವರೆಗೆ ಲಾಕ್​ಡೌನ್ ವಿಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿಗೆ ಭೇಟಿ ನೀಡಲು ಈಗಲೂ ವಿದೇಶಗರು ಹೆದರುತ್ತಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ಕೊರೊನಾ ಪ್ರೋಟೋಕಾಲ್​ಗಳನ್ನು ಹಿಂಪಡೆಯಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಹಾಂಕಾಂಗ್‌ನ ಪ್ರವಾಸೋದ್ಯಮ ಸಾಕಷ್ಟು ನಷ್ಟವನ್ನು ಅನುಭವಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯಾರಿಗುಂಟು, ಯಾರಿಗಿಲ್ಲ.. ಈ ಅವಕಾಶ ಮಿಸ್​ ಮಾಡ್ಬೇಡಿ.. ಇಲ್ಲಿ 5 ಲಕ್ಷ ವಿಮಾನ ಟಿಕೆಟ್ ಉಚಿತ..!

https://newsfirstlive.com/wp-content/uploads/2023/02/HONK_KONG_03022023.jpg

Load More