ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ ಈರುಳ್ಳಿ ಬೆಲೆ
70 ರೂ. ಇರೋ ಈರುಳ್ಳಿ ಇನ್ನಷ್ಟು ಬೆಲೆ ಏರಿಕೆ ಸಾಧ್ಯತೆ!
ಈರುಳ್ಳಿ ಪೂರೈಕೆಯಲ್ಲಿ ವ್ಯತ್ಯಯ, ಜನ ಸಾಮಾನ್ಯರು ದಿಗ್ಭ್ರಾಂತ
ಬೆಂಗಳೂರು: ಇಷ್ಟು ದಿನ ಈರುಳ್ಳಿ ಕಟ್ ಮಾಡುವಾಗ ಕಣ್ಣಲ್ಲಿ ನೀರು ಬರುತ್ತಿತ್ತು. ಆದರೆ ಈಗ ಈರುಳ್ಳಿ ಕೊಳ್ಳುವಾಗಲೇ ಕಣ್ಣಲ್ಲಿ ನೀರು ಬರುತ್ತಿದೆ. ಎಗ್ ರೈಸ್, ಗೋಬಿ, ಚಾಟ್ಸ್ ಮೇಲೆ ಕಾಣಿಸಿಕೊಳ್ಳುವ ಈ ಉಳ್ಳಾಗಡ್ಡಿ ಇನ್ನೂ ಸ್ವಲ್ಪ ದಿನ ಕಾಣೇ ಆಗೋ ಚಾನ್ಸಸ್ ಜಾಸ್ತಿ ಇದೆ.
ಮಳೆ ಹೆಚ್ಚಾಗಿ ಬಂದ್ರೂ ಕಷ್ಟ. ಮಳೆ ಬರದೆ ಇದ್ದರೂ ಕಷ್ಟ ಅನ್ನೋ ಪರಿಸ್ಥಿತಿ ಅನುಭವ ಇತ್ತೀಚಿನ ದಿನಗಳಗಲ್ಲಿ ಹೆಚ್ಚಾಗಿ ಜನರಿಗೆ ಕಾಡಲಾರಂಭಿಸಿದೆ. ಹೌದು, ಕಳೆದ ತಿಂಗಳಷ್ಟೇ ಟೊಮ್ಯಾಟೋ ಬೆಲೆ ಇಳಿಕೆಯಿಂದ ನಿಟ್ಟುಸಿರು ಬಿಟ್ಟ ಜನರಿಗೆ ಇದೀಗ ಡಬಲ್ ಆಗುತ್ತಿರೋ ಈರುಳ್ಳಿ ಬೆಲೆ ಕೇಳಿ ಜನರು ದಿಗ್ಭ್ರಾಂತರಾಗಿ ಹೋಗಿದ್ದಾರೆ. ಕಳೆದ ವಾರ ಕೆಜಿಗೆ 30-35 ರೂಪಾಯಿ ಇದ್ದ ಈ ಈರುಳ್ಳಿ ಈಗ ಇದ್ದಕ್ಕಿದ್ದಂತೆ 70 ರೂಪಾಯಿಗಳಿಗೆ ಏರಿಕೆ ಕಂಡಿದೆ. ಇಳುವರಿ ಕಡಿಮೆಯಾದ ಕಾರಣ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಸರಿಯಾದ ಪ್ರಮಾಣದಲ್ಲಿ ಈರುಳ್ಳಿ ಸರಬರಾಜು ಆಗದ ಹಿನ್ನೆಲೆ ರಾಜ್ಯದಲ್ಲಿ ಈರುಳ್ಳಿ ಬೆಲೆ ಏರಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ 100ರ ಗಡಿ ದಾಟುವ ಸಾಧ್ಯತೆ ಕೂಡ ಹೆಚ್ಚಾಗಿದೆ. ಆದ್ರೆ ಈ ಬೆಲೆ ಏರಿಕೆಗೆ ರೈತರ ಮುಖದಲ್ಲಿ ಮಾತ್ರ ಮಂದಹಾಸ ಮೂಡಿಸಿದೆ.
ಈರುಳ್ಳಿ ಬೆಲೆ ಬಲು ದುಬಾರಿಯಾಗಲು ಕಾರಣವೇನು..?
ಇನ್ನೂ, ಜನರ ಡಿಮ್ಯಾಂಡ್ ಜಾಸ್ತಿ ಆಗ್ತಾ ಇದ್ದು ಬೇಡಿಕೆಗೆ ತಕ್ಕುವುದಾಗಿ ಪೂರೈಕೆ ಆಗದೇ ಇರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಮಳೆಯ ಕೊರತೆಯಿಂದ ರಾಜ್ಯದಲ್ಲಿ ಬೆಳೆದ ಬೆಳೆಯ ಪ್ರಮಾಣ ಕಡಿಮೆ ಇರೋದು ಒಂದು ಕಡೆ ಆದ್ರೆ, ಇನ್ನೊಂದು ಕಡೆ ಹೊರ ರಾಜ್ಯದ ಈರುಳ್ಳಿ ಕೂಡ ನಗರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಬರುತ್ತಿಲ್ಲ ಮಳೆ ವಿಳಂಬ ಹಿನ್ನಲೆ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶದ ಕಡೆಯಿಂದ ಮುಂದಿನ ತಿಂಗಳು ಪೂರೈಕೆ ಸಾಧ್ಯತೆ ಇದೆ. ಅಲ್ಲಿಯವರೆಗೂ ದರ ಏರಿಕೆಯ ಬಿಸಿ ಜನರನ್ನ ತಟ್ಟೋದು ಬಹುತೇಕ ಖಚಿತವಾಗಿದೆ.
ಇತ್ತ ಮಾರ್ಕೆಟ್ಗೆ ಬಂದರೆ ಜೇಬು ಸುಡುತ್ತೆ ಅನ್ನೋ ಆತಂಕದಲ್ಲಿ ಸಿಲಿಕಾನ್ ಸಿಟಿ ಮಂದಿ ಇದ್ದಾರೆ. ಬೆಲೆ ಏರಿಕೆಯ ಬಿಸಿಗೆ ಬಸವಳಿದು ಹೋಗಿರುವ ಜನ ರೇಟ್ ಕಮ್ಮಿ ಆದ್ರೆ ಸಾಕು ಅಂತ ಬೇಡಿ ಕೊಳ್ತಾ ಇದ್ದಾರೆ. ಒಟ್ಟಿನಲ್ಲಿ ಪ್ರತಿದಿನ ಒಂದಾಲ್ಲ ಒಂದು ಬೆಲೆ ಏರಿಕೆಯಿಂದ ತತ್ತರಿಸುವ ಜನರಿಗೆ ಇದೀಗಾ ಈರುಳ್ಳಿ ಬೆಲೆ ಏರಿಕೆಯು ಕಣ್ಣಲ್ಲಿ ನೀರು ತರಿಸಿತ್ತಿದ್ದು, ಮುಂದಿನ ದಿನಗಳಲ್ಲಿ ಇದೇ ರೀತಿ ಬೆಲೆ ಏರಿಕೆಯಾಗುತ್ತಿದ್ದರೆ, ಜನರು ಮತ್ತಷ್ಟು ಕಂಗಾಲಾಗದಂತೂ ನಿಜ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ