ಶ್ರಾವಣ ಮಾಸ ಹಿನ್ನೆಲೆ ಬಾಳೆ ಹಣ್ಣಿಗೂ ಡಿಮ್ಯಾಂಡ್
ಕೈಕೊಟ್ಟ ಮುಂಗಾರು ಈರುಳ್ಳಿ ದರದಲ್ಲಿ ದಿಢೀರ್ ಏರಿಕೆ
ಈರುಳ್ಳಿ ಬೆಲೆ ಏರಿಕೆಯಿಂದ ಕಂಗಾಲಾದ ಗ್ರಾಹಕರು
ಬೆಂಗಳೂರು: ಟೊಮ್ಯಾಟೋ ದರ ಇಳಿಕೆ ಆಯ್ತು ಎಂದು ನಿಟ್ಟುಸಿರು ಬಿಟ್ಟಿದ್ದ ಗ್ರಾಹಕರು ಮತ್ತೆ ಶಾಕ್ ಎದುರಾಗಿದೆ. ರಾಜಧಾನಿಯಲ್ಲಿ ಒಂದೇ ವಾರದಲ್ಲಿ ಈರುಳ್ಳಿ ದರದಲ್ಲಿ ದಿಢೀರ್ ಏರಿಕೆಯಾಗಿದೆ. ಮತ್ತೊಂದೆಡೆ ಶ್ರಾವಣ ಮಾಸ ಶುರುವಾಗ್ತಿರೋದ್ರಿಂದ ಏಲಕ್ಕಿ ಬಾಳೆಹಣ್ಣಿಗೆ ಡಿಮ್ಯಾಂಡ್ ಹೆಚ್ಚಾಗಿದ್ದು, ಬೆಲೆಯೂ ಕೂಡ ಶತಕದ ಗಡಿದಾಟುವ ಸಾಧ್ಯತೆ ಇದೆ.
ಟೊಮ್ಯಾಟೋ ಬೆಲೆ ಇಳಿಕೆ ಖುಷಿಯಲ್ಲಿದ್ದವರ ಕಣ್ಣಲ್ಲಿ ನೀರು
ಈರುಳ್ಳಿ ಬೆಲೆ ಏರಿಕೆಯಿಂದ ಕಂಗಾಲಾದ ಗ್ರಾಹಕರು
ಇನ್ನೆರಡು ದಿನಗಳ ಶ್ರಾವಣ ಮಾಸ ಆರಂಭವಾಗುತ್ತಿದೆ. ಸಾಲು ಸಾಲು ಹಬ್ಬಗಳು ಬರಲಿವೆ. ಇದರ ನಡುವೆ ಗಗನಕ್ಕೇರಿದ್ದ ಟೊಮ್ಯಾಟೋ ದರ ಕೆಲ ದಿನಗಳಿಂದ ಕೊಂಚ ಇಳಿಕೆಯಾಗಿದೆ. ಅಬ್ಬಾ ಟೊಮ್ಯಾಟೋ ಬೆಲೆ ಇಳಿಕೆ ಆಯ್ತಲ್ಲಪ್ಪ ಎಂದು ಖುಷಿಯಲ್ಲಿದ್ದ ಗ್ರಾಹಕರಿಗೆ ಈರುಳ್ಳಿ ಕಣ್ಣಲ್ಲಿ ನೀರು ತರಿಸಿದೆ. ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದೆ. ಜುಲೈನಲ್ಲಿ ಅಬ್ಬರಿಸಿದ್ರೂ ಬಂದಷ್ಟೇ ವೇಗದಲ್ಲಿ ಮಾಯವಾಗಿದೆ. ಹೀಗಾಗಿ ರಾಜ್ಯದಲ್ಲಿ ಮಳೆಯ ಅಭಾವದಿಂದ ಈರುಳ್ಳಿ ಇಳುವರಿ ಕುಂಠಿತವಾಗಿದೆ. ಹೀಗಾಗಿ ರಾಜಧಾನಿ ಬೆಂಗಳೂರಿನಲ್ಲಿ ಒಂದೇ ವಾರದ ಅಂತರದಲ್ಲಿ ಉಳ್ಳಾಗಡ್ಡಿಯ ರೇಟ್ ಏಕಾಏಕಿ ಏರಿಕೆಯಾಗಿದ್ದು, ಗ್ರಾಹಕರು ಶಾಕ್ ಆಗಿದ್ದಾರೆ. ಕಳೆದ ವಾರ ಒಂದು ಕೆ.ಜಿ ಈರುಳ್ಳಿಗೆ 25 ರೂಪಾಯಿ ಇತ್ತು. ಈಗ ಏಕಾಏಕಿ 10ರಿಂದ 15 ರೂಪಾಯಿವರೆಗೆ ದರ ಹೆಚ್ಚಳವಾಗಿದೆ. ಅಂದ್ರೆ, ಕಳೆದ ವಾರಕ್ಕೆ ಹೋಲಿಸಿದರೆ, ಈ ವಾರ ಉಳ್ಳಾಗಡ್ಡಿಯ ಬೆಲೆ, 35 ರಿಂದ 40 ರೂಪಾಯಿಗೆ ತಲುಪಿದೆ. ಹೀಗೆ ಈರುಳ್ಳಿ ಬೆಲೆ ಏಕಾಏಕಿ ಹೆಚ್ಚಳವಾಗಿದ್ರಿಂದ ಗ್ರಾಹಕರು ಈರುಳ್ಳಿ ಖರೀದಿಗೆ ಹಿಂದೆ ಮುಂದೆ ನೋಡುತ್ತಿದ್ದಾರಂತೆ.
ಶ್ರಾವಣ ಬಂತು.. ಏಲಕ್ಕಿ ಬಾಳೆ ಹಣ್ಣಿಗೂ ಡಿಮ್ಯಾಂಡ್ ಹೆಚ್ಚಾಯ್ತು
ಶ್ರಾವಣ ಮಾಸ ಹಿಂದೂಗಳ ಪಾಲಿಗೆ ಅತ್ಯಂತ ಶುಭಕರವಾದ ಮಾಸ. ಹೀಗಾಗಿ, ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳು ಬರುತ್ತವೆ. ಜೊತೆಗೆ ಶುಭಸಮಾರಂಭಗಳು ಕೂಡ ನಡೆಯುತ್ತವೆ. ಆದ್ದರಿಂದ ಏಲಕ್ಕಿ ಬಾಳೆ ಹಣ್ಣಿಗೆ ಎಲ್ಲಿದ್ದ ಡಿಮ್ಯಾಂಡ್ ಬಂದಿದೆ. ಇದರ ಪರಿಣಾಮ ಮಾರುಕಟ್ಟೆಯಲ್ಲಿ ದರವೂ ಕೂಡ ಹೆಚ್ಚಳವಾಗಿದೆ. ಶ್ರಾವಣ ಮಾಸ ಆಗಿರೋದ್ರಿಂದ ಎಲ್ಲ ಹಬ್ಬ, ಶುಭಸಮಾರಂಭಗಳಿಗೆ ಬಾಳೆ ಹಣ್ಣು ಬೇಕೇ ಬೇಕು. ಆದ್ದರಿಂದ ಮೊನ್ನೆ ಮೊನ್ನೆಯಷ್ಟೇ 40ರಿಂದ 50 ರೂಪಾಯಿ ಇದ್ದ ಏಲಕ್ಕಿ ಬಾಳೆ ಹಣ್ಣಿನ ಬೆಲೆ 80 ರೂಪಾಯಿ ತಲುಪಿದೆ. ಮುಂದಿನ ದಿನಗಳಲ್ಲಿ ಏಲಕ್ಕೆ ಬಾಳೆ ಹಣ್ಣು ಶತಕದ ಗಡಿ ದಾಟಿದ್ರೂ ಅಚ್ಚರಿ ಇಲ್ಲ ಅಂತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ