ಗೂಗಲ್ ಸರ್ಚ್ ಮಾಡೋ ಮುನ್ನ ಹುಷಾರ್
ವಂಚಕರಿಂದ ಪಕ್ಕಾ ಮೋಸ ಹೋಗ್ತೀರಾ..!
1 ಲಕ್ಷ ಹಣ ಕಳೆದುಕೊಂಡ ನಿವೃತ್ತ ಯೋಧ
ಬೆಂಗಳೂರು: ಎಚ್ಚರ ಎಚ್ಚರ! ಗೂಗಲ್ನಲ್ಲಿ ಸಿಗೋ ಹೆಲ್ಪ್ಲೈನ್ ನಂಬರ್ಗೆ ಕಾಲ್ ಮಾಡೋ ಮುನ್ನ ಬಿ ಅಲರ್ಟ್. ಆನ್ಲೈನ್ನಲ್ಲಿ ಬುಕ್ ಮಾಡಿದ್ದ ಐಟಮ್ ಕ್ಯಾನ್ಸಲ್ ಆಯ್ತು ಎಂದು ಗೂಗಲ್ ಮೊರೆ ಹೋಗುವ ಜನ ಹುಷಾರಾಗಿರಿ. ಏಕೆಂದರೆ ಹಣಕ್ಕಾಗಿ ಗೂಗಲ್ನಲ್ಲೂ ಜನರನ್ನು ದಿಕ್ಕು ತಪ್ಪಿಸಿ ಆನ್ಲೈನ್ ವಂಚನೆ ಮಾಡೋ ಕೆಲಸ ಶುರುವಾಗಿದೆ.
ಹೆಸರು ಮಹೇಶ್, ನಿವೃತ್ತ ಯೋಧರು. ಅಮೇಜಾನ್ನಲ್ಲಿ ಸ್ಪೀಕರ್ ಬುಕ್ ಮಾಡಿ ಅದನ್ನ ಕ್ಯಾನ್ಸಲ್ ಮಾಡಿದ್ರು. ಕಟ್ ಆಗಿದ್ದ ಹಣ ವಾಪಸ್ ಪಡೆಯಲು ಹೋಗಿ ಲಕ್ಷ ಲಕ್ಷ ಕಳೆದುಕೊಂಡಿದ್ದಾರೆ. ಅದು ರಸ್ಕ್ ಡೆಸ್ಕ್ (RUSKDESK) ಎಂಬ ಅಪ್ಲಿಕೇಶನ್ನಿಂದ ವಂಚನೆಗೆ ಒಳಗಾಗಿದ್ದಾರೆ.
ಮೋಸ ಮಾಡೋರೆ ಹೆಚ್ಚು ಹುಷಾರ್!
ಮಹೇಶ್ ಅವರು ಬುಕ್ ಮಾಡಿದ್ದ 5499 ರೂಪಾಯಿ ಮೌಲ್ಯದ ಸ್ಪೀಕರ್ ಆರ್ಡರ್ ಕ್ಯಾನ್ಸಲ್ ಆಗಿತ್ತು. ಇದಕ್ಕೆ ಮಹೇಶ್ ಮೊದಲೇ ಹಣ ಕಟ್ಟಿದ್ರು. ಹೀಗಾಗಿ 3 ದಿನದಲ್ಲಿ ಖಾತೆಗೆ ಹಣ ಜಮೆ ಆಗುತ್ತೆ ಅನ್ನೋ ಸಂದೇಶ ಕೂಡ ಬಂದಿತ್ತು. ಆದ್ರೆ ಮೂರು ದಿನವಾದ್ರೂ ಹಣ ಜಮಾ ಆಗಿರ್ಲಿಲ್ಲ. ಹೀಗಾಗಿ ಮಹೇಶ್ ಗೂಗಲ್ ಮೊರೆ ಹೋಗಿದ್ರು. ಈ ವೇಳೆ ಗೂಗಲ್ನಲ್ಲಿ ಸಿಕ್ಕ ನಕಲಿ ಹೆಲ್ಪ್ಲೈನ್ಗೆ ಕರೆ ಮಾಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರು ಮಹೇಶ್‌ಗೆ ಮತ್ತೊಂದು ನಂಬರ್‌ನಿಂದ ಕರೆ ಮಾಡಿದ್ರು. ಬಳಿಕ RUSKDESK ಡೌನ್ಲೋಡ್ ಮಾಡಿ ಓಕೆ ಒತ್ತಲು ಹೇಳಿದ್ರು. ಮಹೇಶ್ ಬಟನ್ ಒತ್ತಿದ ತಕ್ಷಣ ಅಕೌಂಟ್ನಿಂದ ಹಣ ಕಟ್ ಆಗಿದ್ದು, ಯುಪಿಐ ಐಡಿಗೆ ಬರೋಬ್ಬರಿ 81 ಸಾವಿರ ಹಣ ಹೋಗಿದೆ.
ಮತ್ತೆ ಕರೆ ಮಾಡಿ ವಿಚಾರಿಸಿದಾಗ ತಪ್ಪಾಗಿ ನಂಬರ್ ಟೈಪ್ ಮಾಡಿದ್ದೀರಿ ಅಂತ ಕಥೆ ಕಟ್ಟಿ, ಪದೇ ಪದೇ ಅಕೌಂಟ್ ಚೆಕ್ ಮಾಡಲು ಹೇಳಿ ಬ್ಯಾಂಕ್ ಖಾತೆಯಲ್ಲಿದ್ದ 1 ಲಕ್ಷದ 8 ಸಾವಿರದ 366 ಹಣ ಮಂಗಮಾಯ ಮಾಡಿದ್ದಾರೆ. ಸದ್ಯ ಘಟನೆ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಮಹೇಶ್ ದೂರು ದಾಖಲಿಸಿದ್ದಾರೆ. ನೀವೆಷ್ಟೇ ಎಚ್ಚರ ವಹಿಸಿದ್ರೂ ಈ ಆನ್ಲೈನ್ ವಂಚನೆ ಜಾಲ ಆನೆ ಗಾತ್ರದಲ್ಲಿ ಬೆಳೆಯುತ್ತಿದೆ. ಸ್ವಲ್ಪ ಯಾಮಾರಿದ್ರೂ ಪಾಪರ್ ಆಗ್ಬೇಕಷ್ಟೇ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ