newsfirstkannada.com

ಆನ್​ಲೈನ್​ ಗೇಮ್​.. ಉದ್ಯಮಿಗೆ 58 ಕೋಟಿ ದೋಖಾ.. ಆರೋಪಿ ಮನೆಯಲ್ಲಿ ಸಿಕ್ಕಿತು ರಾಶಿ ರಾಶಿ ಹಣ, ಕೆಜಿಗಟ್ಟಲೇ ಚಿನ್ನ

Share :

23-07-2023

    ಉದ್ಯಮಿಯೊಬ್ಬರಿಗೆ ಕೋಟಿ, ಕೋಟಿ ಪಂಗನಾಮ ಹಾಕಿದ

    ಆನ್​ಲೈನ್ ಗೇಮ್, ಗ್ಯಾಂಬ್ಲಿಂಗ್ ಹೆಸರಲ್ಲಿ ಮಹಾವಂಚನೆ..!

    ಆರೋಪಿ ಮನೆ ಮೇಲೆ ದಾಳಿ ಹಣ ಬಂಗಾರ ನೋಡಿ ಶಾಕ್

ಮುಂಬೈ: ಓರ್ವ ಬ್ಯುಸಿನೆಸ್ ಮೆನ್​ಗೆ 58 ಕೋಟಿ ರೂ.ಗಳನ್ನ ವಂಚಿಸಿದ ಖದೀಮನ ಮನೆ ಮೇಲೆ ಪೊಲೀಸರು ದಾಳಿ ನಡೆಸಿ 14 ಕೋಟಿ ರೂಪಾಯಿ ನಗದು, 4 ಕೆಜಿ ಚಿನ್ನ ವಶಕ್ಕೆ ಪಡೆದಿದ್ದಾರೆ.

ಆರೋಪಿ ಅನಂತ್ ಅಲಿಯಾಸ್ ಸೊಂಟು‌ ನವರತನ್ ಜೈನ್, ಇವರು ಮಹಾರಾಷ್ಟ್ರದ ನಾಗಪುರದಲ್ಲಿನ ಓರ್ವ ಬ್ಯುಸಿನೆಸ್ ಮೆನ್​ಗೆ ಕೋಟ್ಯಂತರ ರೂಪಾಯಿಗಳನ್ನು ವಂಚನೆ ಮಾಡಿದ್ದಾರೆ. ಸದ್ಯ ಪೊಲೀಸರು ಮನೆ ಮೇಲೆ ದಾಳಿ ಮಾಡಿದಾಗ ಆರೋಪಿ ಜೈನ್ ದುಬೈಗೆ ಎಸ್ಕೇಪ್ ಆಗಿದ್ದಾನೆ ಎಂದು ಹೇಳಲಾಗಿದೆ.

ಪ್ರಚೋದನೆಯಿಂದ ಆಡಾಡುತ್ತಾ ₹58 ಕೋಟಿ ಲಾಸ್

ಆರೋಪಿ ಜೈನ್ ಆನ್​ಲೈನ್ ಗೇಮ್, ಗ್ಯಾಂಬ್ಲಿಂಗ್ ಆಡಿದರೇ ಭಾರೀ ಲಾಭ ಸಿಗುತ್ತೆ ಎಂದು ಉದ್ಯಮಿಯೊಬ್ಬರಿಗೆ ಪ್ರಚೋದನೆ ನೀಡಿ ಉದ್ಯಮಿಯಿಂದ ಹವಾಲಾ ಮೂಲಕ 8 ಲಕ್ಷ ರೂ.ಗಳನ್ನು ಪಡೆದು ಆಲ್​ಲೈನ್​ ಗೇಮ್​ ಆಡಲು ವ್ಯಾಟ್ಸ್​ ಆಪ್​ನಲ್ಲಿ ಲಿಂಕ್​ ಕಳಿಸಿದ್ದನು. ಗೇಮ್​ಗೆ 8 ಲಕ್ಷ ರೂ.ಗಳನ್ನು ಠೇವಣಿ ಇರಿಸಿದ್ದನ್ನು ನಂಬಿ ಉದ್ಯಮಿ ಆನ್​ಲೈನ್ ಗೇಮ್ ಆಡಲು ಶುರು ಮಾಡಿದ್ದಾನೆ ಎಂದು ಹೇಳಲಾಗಿದೆ.

ಈ ಗೇಮ್​ ಆಡುತ್ತಾ.. ಆಡುತ್ತಾ.. ಉದ್ಯಮಿ ಬರೋಬ್ಬರಿ 58 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾನೆ. ಆದರೆ ಯಾವುದೇ ಹಣ ಬಂದಿಲ್ಲ. ಈ ವೇಳೆ ಈತನಿಗೆ ಕೇವಲ 5 ಕೋಟಿ ರೂ. ಮಾತ್ರ ಲಾಭದ ರೀತಿಯಲ್ಲಿ ಗೇಮ್​ ಮೂಲಕ ವಾಪಸ್ ಬಂದಿದೆ. ಇದರಿಂದ ಅನುಮಾನಗೊಂಡ ಉದ್ಯಮಿ ಹಣ ವಾಪಸ್ ನೀಡುವಂತೆ ಆರೋಪಿ ಜೈನ್​ಗೆ ಕೇಳಿದ್ರೆ ಇದಕ್ಕೆ ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ.

150 ಕಿ.ಮೀ ದೂರದ ಆರೋಪಿ ಮನೆ ರೇಡ್

ಹಣ ಕಳೆದುಕೊಂಡ ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದಾನೆ. ದೂರಿನ ಆಧಾರದ ಮೇಲೆ ನಾಗಪುರದಿಂದ 150 ಕಿ.ಮೀ ದೂರದ ಗೊಂಡಿಯಾದಲ್ಲಿನ ಆರೋಪಿ ಜೈನ್​ ಮನೆಯನ್ನು ಪೊಲೀಸರು ರೇಡ್ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿ 14 ಕೋಟಿ ರೂಪಾಯಿ ನಗದು, 4 ಕೆ.ಜಿ ಬಂಗಾರ ಪತ್ತೆಯಾಗಿದೆ. ಹಣ, ಚಿನ್ನ ಸಿಗುತ್ತಿದ್ದಂತೆ ಆರೋಪಿಯು ದುಬೈಗೆ ಎಸ್ಕೇಪ್ ಆಗಿದ್ದಾನೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆನ್​ಲೈನ್​ ಗೇಮ್​.. ಉದ್ಯಮಿಗೆ 58 ಕೋಟಿ ದೋಖಾ.. ಆರೋಪಿ ಮನೆಯಲ್ಲಿ ಸಿಕ್ಕಿತು ರಾಶಿ ರಾಶಿ ಹಣ, ಕೆಜಿಗಟ್ಟಲೇ ಚಿನ್ನ

https://newsfirstlive.com/wp-content/uploads/2023/07/MH_ACCUSED_14_CR.jpg

Load More