ಸತತ 3 ದಿನ ಹಿಮಾಚಲ ಪ್ರದೇಶದಲ್ಲಿ ಸುರಿದ ಮಹಾಮಳೆ
ಮಳೆ ನಿಲ್ಲೋದಿಲ್ಲ ಅಂತಾ ಗೊತ್ತಾದ ಮೇಲೆ ಹೈಟೆಕ್ ಐಡಿಯಾ
ನಿಗದಿಯಾಗಿದ್ದ ಮುಹೂರ್ತದಲ್ಲೇ ದಾಂಪತ್ಯ ಜೀವನ ಆರಂಭ
ಶಿಮ್ಲಾ: ಧಾರಾಕಾರವಾಗಿ ಸುರಿದ ಮಳೆಗೆ ಹಿಮನಾಡು ಹಿಮಾಚಲ ಪ್ರದೇಶ ಅಕ್ಷರಶಃ ತತ್ತರಿಸಿ ಹೋಗಿದೆ. ಸತತ 3 ದಿನ ಸುರಿದ ಭಾರೀ ವರ್ಷಧಾರೆಗೆ ಮನೆ, ಸೇತುವೆ, ಹೆದ್ದಾರಿಗಳೆಲ್ಲಾ ಕೊಚ್ಚಿಕೊಂಡು ಹೋಗಿವೆ. ಪ್ರವಾಹದ ಅಬ್ಬರಿಗೆ ನೂರಾರು ಜನ ನಿರಾಶ್ರಿತರಾಗಿದ್ರೆ ಹಿಮಾಚಲ ಪ್ರದೇಶ ರಾಜ್ಯವೊಂದರಲ್ಲೇ 31 ಜನ ಪ್ರಾಣ ಕಳೆದುಕೊಂಡಿದ್ದಾರೆ. ಮಳೆರಾಯನ ಆರ್ಭಟಕ್ಕೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ.
ಕಳೆದ ಶನಿವಾರದಿಂದ ಸತತ 3 ದಿನಗಳ ಕಾಲ ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಸುರಿದಿದೆ. ಈ ಮಳೆಯ ಮಧ್ಯೆ ಹಿಮಾಚಲ ಪ್ರದೇಶದಲ್ಲಿ ನಿಗದಿಯಾಗಿದ್ದ ಮದುವೆಯೊಂದು ಆನ್‌ಲೈನ್‌ನಲ್ಲಿ ನಡೆದಿದೆ. ಶಿಮ್ಲಾದಲ್ಲಿ ಮಳೆ ಬರೋದಕ್ಕೂ ಮುಂಚೆ ಮದುವೆ ಮುಹೂರ್ತ ನಿಶ್ಚಯಿಸಲಾಗಿತ್ತು. ಆದ್ರೆ ಮಳೆಯಿಂದ ಮಂಟಪಕ್ಕೆ ಹೋಗಲಾಗದ ನವವಧು ವರರು ಕೊನೆಗೆ ಆನ್‌ಲೈನ್‌ನಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಶಿಮ್ಲಾದ ಆಶಿಶ್ ಸಿಂಘಾ, ಶಿವಾನಿ ಠಾಕೂರ್ ಅವರ ಮದುವೆ ಶಿಮ್ಲಾದ ಭುಂಟರ್‌ನಲ್ಲಿ ನಿಶ್ಚಯವಾಗಿತ್ತು. ಆದರೆ ಮಳೆಯಿಂದಾಗಿ ಭೂಕುಸಿತ ಸಂಭವಿಸಿ, ರಸ್ತೆಗಳಲ್ಲಿ ಸಂಚಾರ ಕೂಡ ಬಂದ್ ಆಗಿತ್ತು. ಈ ಹಿನ್ನೆಲೆ ರಾಜ್ಯ ಸರ್ಕಾರ ಯಾರೂ ಕೂಡ ಮನೆಯಿಂದ ಹೊರಗಡೆ ಬಾರದಂತೆ ಸೂಚನೆ ನೀಡಿತ್ತು. ಈ ಸಂದರ್ಭದಲ್ಲಿ ಮದುವೆ ಮಂಟಪಕ್ಕೆ ಗಂಡು, ಹೆಣ್ಣನ್ನೇ ಕರೆದುಕೊಂಡು ಹೋಗೋದು ಕಷ್ಟವಾಗಿತ್ತು. ಇನ್ನು ಸಂಬಂಧಿಕರು ಕಲ್ಯಾಣ ಮಂಟಪಕ್ಕೆ ಬಂದು ಆಶೀರ್ವಾದ ಮಾಡೋದು ಕನಸಿನ ಮಾತಾಗಿತ್ತು.
ಈ ಕಷ್ಟದ ಪರಿಸ್ಥಿತಿಯನ್ನು ಎದುರಿಸಲು ಯೋಚನೆ ಮಾಡಿದ ಕುಟುಂಬಸ್ಥರು ಕೊನಗೆ ಆನ್‌ಲೈನ್ ಮ್ಯಾರೇಜ್‌ನ ಮೊರೆ ಹೋಗಿದ್ದಾರೆ. ವಿಡಿಯೋ ಕಾನ್ಫರೆನ್ಸ್‌ನಲ್ಲಿ ಆಶಿಶ್ ಸಿಂಘಾ, ಶಿವಾನಿ ಠಾಕೂರ್ ಅವರ ಮದುವೆ ನೆರವೇರಿದೆ. ಅದ್ಧೂರಿಯಾಗಿ ಕಲ್ಯಾಣ ಮಂಟಪದಲ್ಲಿ ಹಸೆಮಣೆ ಏರುವ ಕನಸು ಕಂಡಿದ್ದ ಈ ಜೋಡಿ ಇದೀಗ ಆನ್‌ಲೈನ್‌ನಲ್ಲಿ ಮದುವೆಯಾಗಿ ದಾಂಪತ್ಯ ಜೀವನ ಆರಂಭಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ