/newsfirstlive-kannada/media/post_attachments/wp-content/uploads/2024/11/Karwar-Library.jpg)
ಪಾರ್ಕಿನಲ್ಲಿ ಕುಳಿತು ಸಿಗರೇಟ್ ಸೇದುವುದನ್ನು ನೋಡಿದ್ದೀರಾ, ಯುವಕ ಯುವತಿಯರ ಸಲ್ಲಾಪವೂ ಹೊಸದಲ್ಲ. ಹರಟೆ ಹೊಡೆಯುವುದೂ ಗೊತ್ತು. ಆದರೆ ಕಾರವಾರದ ಈ ಪಾರ್ಕಿಗೆ ಭಾನುವಾರ ಬಂದ್ರೆ ಸಾಕು. ಇಲ್ಲಿ ಎಲ್ಲಿ ನೋಡಿದರು ಅಲ್ಲಿ ಜನರು ಇರ್ತಾರೆ. ಇಲ್ಲಿಗೆ ಬಂದ ಜನರು ತಮಗೆ ಬೇಕಾದ ಪುಸ್ತಕವನ್ನು ತೆಗೆದುಕೊಂಡು ಓದುತ್ತಾ ಕುಳಿತಿರುತ್ತಾರೆ
ಕಾರವಾರದಲ್ಲಿ ಒಂದು ಪಾರ್ಕ್ ಇದೆ. ಇಲ್ಲಿ ಪ್ರತಿ ಭಾನುವಾರ ಬರುವವರು ಕೇವಲ ವಾಯು ವಿಹಾರ ಮಾಡಿ ಮನೆಗೆ ಹೋಗುವುದಿಲ್ಲ. ತಮ್ಮ ಇಷ್ಟದ ಪುಸ್ತಕವನ್ನು ತೆಗೆದುಕೊಂಡು ಓದುತ್ತಾ ಕುಳಿತು ಹೊಸ ಅನುಭವ ಪಡೆಯುತ್ತಾರೆ. ಹಾಗಂತ ಅವರೇನು ಮನೆಯಿಂದ ಪುಸ್ತಕಗಳನ್ನು ತೆಗೆದುಕೊಂಡು ಬಂದಿರುವುದಿಲ್ಲ ಈ ಪಾರ್ಕ್​ನಲ್ಲಿಯೇ ಒಂದು ಓಪನ್ ಲೈಬ್ರರಿ ಇದೆ. ಅಲ್ಲಿ ಹಲವು ಪುಸ್ತಕಗಳನ್ನು ಇಡಲಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಓದುವಂತಹ ಪುಸ್ತಕಗಳು ಅಲ್ಲಿ ಲಭ್ಯವಿವೆ
ಇದನ್ನೂ ಓದಿ:ಸೋಲಿಲ್ಲದ ಸರದಾರ.. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಕಾಳಿ ಇನ್ನಿಲ್ಲ; ಅಭಿಮಾನಿಗಳ ಕಂಬನಿ
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ರೀಡ್ಸ್ ಎಂಬ ಹೊಸ ಯೋಚನೆಯನ್ನ ಜಿಲ್ಲಾಡಳಿತ ಜಾರಿಗೆ ತಂದಿದೆ. ಪ್ರತಿ ಭಾನುವಾರ ಬೆಳಗ್ಗೆ 9 ಗಂಟೆಯಿಂದ 11 ಗಂಟೆ ತನಕ ಎರಡು ಗಂಟೆಗಳ ಕಾಲ ನಿಶ್ಚಿಂತೆಯಿಂದ ನಿಮ್ಮಿಷ್ಟದ ಪುಸ್ತಕ ತಂದು ಪ್ರಕೃತಿಯ ಮಡಿಲಲ್ಲಿ ಓದುವುದು ಈ ಕಾರವಾರ ರೀಡ್ಸ್ ನ ಯೋಚನೆಯಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಳಿತು ಪುಸ್ತಕ ಓದುವ ಹವ್ಯಾಸವನ್ನ ಜನರಲ್ಲಿ ತರಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಕಾರವಾರದಲ್ಲಿ ಇಂತಹ ಸಂಸ್ಕೃತಿಯನ್ನು ಹುಟ್ಟುಹಾಕಿದ್ದು ಇದು ಸಾಕಷ್ಟು ಮೆಚ್ಚುಗೆಗೆ ಕಾರಣವಾಗಿದೆ.
/newsfirstlive-kannada/media/post_attachments/wp-content/uploads/2024/11/Karwar-Library-1.jpg)
ಕಾರವಾರ ರೀಡ್ಸ್‌ಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಯಾವುದೇ ನೋಂದಣಿ ಶುಲ್ಕವೂ ಇಲ್ಲ. ಪ್ರತಿಯೊಬ್ಬರೂ ಭಾಗವಹಿಸಬಹುದಾಗಿದ್ದು, ಕುಡಿಯುವ ನೀರು, ಕುಳಿತುಕೊಳ್ಳಲು ಮ್ಯಾಟ್ ಮತ್ತು ತಮ್ಮಿಷ್ಟದ ಪುಸ್ತಕದೊಂದಿಗೆ ಬಂದು ಪುಸ್ತಕ ಪ್ರಿಯರೊಂದಿಗೆ ಬೆರೆಯಬಹುದಾಗಿದೆ. ಓದಿನ ಜತೆಗೆ ಒಂದಷ್ಟು ಮಾತು ಕಥೆ ಮತ್ತು ಕೊನೆಗೆ ಗ್ರೂಪ್ ಫೋಟೋ ಕೂಡಾ ತೆಗೆದುಕೊಳ್ಳಬಹುದು. ಪುಸ್ತಕಪ್ರಿಯರಿಗೆ ಇದೊಂದು ಉತ್ತಮ ಆಯ್ಕೆಯಾಗಿದ್ದು ಇದು ನಿರಂತರವಾಗಿ ಮುಂದುವರೆಯಬೇಕು ಎನ್ನುತ್ತಾರೆ ಪುಸ್ತಕ ಪ್ರಿಯರು.
/newsfirstlive-kannada/media/post_attachments/wp-content/uploads/2024/11/Karwar-Library-2.jpg)
ಇನ್ನು ಕಾರವಾರದಲ್ಲಿ ಅಗಾಧವಾದ ಪ್ರಕೃತಿ ಸೌಂದರ್ಯ ಇದೆ. ಇಂತಹ ಪರಿಸರದಲ್ಲಿ ಓದುವ ಮೂಲಕ ಹೆಚ್ಚು ಜ್ಞಾನ ಗಳಿಸಬಹುದು. ಇದು ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ ಎನ್ನುವುದು ಜಿಲ್ಲಾಡಳಿತದ ಉದ್ದೇಶ. ಒಟ್ಟಿನಲ್ಲಿ ಮೊಬೈಲ್ ಮೋಡಿಗೆ ಬಿದ್ದಿರುವ ಸಮಯದಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಲು ಉತ್ತರ ಕನ್ನಡ ಜಿಲ್ಲಾಡಳಿತ ಪ್ರಾರಂಭಿಸಿರುವ ಕಾರವಾರ ರೀಡ್ಸ್ ಉತ್ತಮ ಯೋಚನೆಯಾಗಿದ್ದು ಜನತೆ, ಸಂಘ ಸಂಸ್ಥೆಗಳು ಇದನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us