newsfirstkannada.com

ಬಿಜೆಪಿ ಬಿಟ್ಟು ಹೋಗ್ತಾರಾ ಶಾಸಕ ST ಸೋಮಶೇಖರ್.. ಕಾಂಗ್ರೆಸ್​ ಆಪರೇಷನ್ ಬಗ್ಗೆ ಅಶೋಕ್ ಹೇಳಿದ್ದೇನು?

Share :

24-08-2023

    ಸಿದ್ದರಾಮಯ್ಯ, ಶಿವಕುಮಾರ್ ಬಳಿ ಮಾತಾಡೋದು ತಪ್ಪಲ್ಲ

    ‘ಸೋಮಶೇಖರ್​ನ ಬಿಜೆಪಿಗೆ ಕರ್ಕೊಂಡು ಬಂದಿದ್ದು ನಾನೇ’

    ಕ್ಷೇತ್ರದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ- S.T ಸೋಮಶೇಖರ್

ಬೆಂಗಳೂರು: ಬಿಜೆಪಿ ಸರ್ಕಾರ ರಚನೆ ವೇಳೆ ಬಿಎಸ್​ವೈ 10 ಜನರನ್ನ ಕರೆದುಕೊಂಡು ಬಂದ್ರೆ, ನಾನು 5 ಜನರನ್ನು ಕರೆತಂದಿದ್ದೆ. ಅದರಲ್ಲಿ ಎಸ್​.ಟಿ‌ ಸೋಮಶೇಖರ್ ಕೂಡ ಒಬ್ಬರು. ಅವರು ಬಿಜೆಪಿ ಬಿಟ್ಟು ಎಲ್ಲೂ ಹೋಗಲ್ಲ ಎಂದು ಮಾಜಿ ಸಚಿವ ಆರ್​. ಅಶೋಕ್ ಸ್ಪಷ್ಟ ಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಆರ್. ಅಶೋಕ್, ಬಿಜೆಪಿಗೆ ಸೋಮಶೇಖರ್​ರನ್ನ ಕರೆತಂದಿದ್ದು ನಾನೇ. ಮಾಧ್ಯಮಗಳಲ್ಲಿ ಕಾಂಗ್ರೆಸ್​​ಗೆ ಹೋಗುತ್ತಾರೆ ಎಂಬ ಸುದ್ದಿ ಹರಡುತ್ತಿದೆ. ಆದ್ರೆ ಅವೆಲ್ಲ ಊಹಾಪೋಹ ಆಗಿದ್ದು ಅವರು ಬಿಜೆಪಿಯಲ್ಲೇ ಇರುತ್ತಾರೆ. ಅವರ ಕ್ಷೇತ್ರದ ಭಾಗದಲ್ಲಿ 3 ಬಾರಿ ಶಾಸಕ‌ನಾಗಿದ್ದೆ. ಹೀಗಾಗಿ ಅವರ ಮತ್ತು ನನ್ನ ನಡುವೆ ಒಳ್ಳೆಯ ಒಡನಾಟವಿದ್ದು ನಿತ್ಯ ಎರಡು ಟೈಮ್​ ಕಾಲ್​ ಮಾಡುತ್ತಾರೆ. ಜಸ್ಟ್​ ಈಗಲೂ ಮಾತನಾಡಿ ಬಂದು ಭೇಟಿಯಾಗುವಂತೆ ಸೂಚಿಸಿದ್ದೇನೆ. ಮುಂದೆ ಏನಾಗುತ್ತೆಂದು ಕಾದು‌ ನೋಡೋಣ ಎಂದು ಆರ್ ಅಶೋಕ್ ಹೇಳಿದ್ದಾರೆ.

ಮಾಜಿ ಸಚಿವ ಆರ್. ಅಶೋಕ್

ಇನ್ನು ಈ ಬಗ್ಗೆ ಸ್ವತಹ ಶಾಸಕ ಎಸ್​.ಟಿ ಸೋಮಶೇಖರ್ ಅವರು ಪ್ರತಿಕ್ರಿಯೆ ನೀಡಿದ್ದು ನನಗೆ ಬಿಜೆಪಿ ಬಿಟ್ಟು ಹೋಗುವ ಮನಸ್ಸಿಲ್ಲ. ಆದ್ರೆ ಕೆಲವರು ಪಕ್ಷ ಬಿಟ್ಟು ಹೋಗುತ್ತೇವೆಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ರೀತಿ ಮಾಡುತ್ತಿರುವುದು ಇದೇ ಮೊದಲೇನು ಅಲ್ಲ. ಈ ಹಿಂದೆ ಎಲೆಕ್ಷನ್​ ವೇಳೆಯು ಅಪಪ್ರಚಾರ ಮಾಡಿದ್ದರು. ಇದರ ಹಿಂದೆ ಅಮಾನತು ಆದ ವ್ಯಕ್ತಿ ಕೆಲಸ ಮಾಡಿದ್ದು ಕ್ಷೇತ್ರದಲ್ಲಿ ಕೆಲವರು ಈ ಬಗ್ಗೆ ಮಾತನಾಡುತ್ತಿದ್ದಾರೆ. ಸದ್ಯಕ್ಕೆ ಲೋಕಸಭಾ ಎಲೆಕ್ಷನ್​ಗೆ ಹೋಗುವ ಆಸಕ್ತಿಯೇನು ಇಲ್ಲ. ನನ್ನ ಮಗ ಕೂಡ ರಾಜಕೀಯಕ್ಕೆ ಬರಲ್ಲ. ದೆಹಲಿಯಿಂದ ಯಾವುದೇ ಫೋನ್​ ಕರೆ ಬಂದಿಲ್ಲ. ಬಂದ್ರೆ ದೆಹಲಿಗೆ ಹೋಗ್ತೀನಿ ಎಂದು ಹೇಳಿದರು.

ಇದೇ ವೇಳೆ ತಮ್ಮ ಬೆಂಬಲಿಗರು ಕಾಂಗ್ರೆಸ್​ಗೆ ಸೇರಿದ ಬಗ್ಗೆ ಮಾತನಾಡಿದ ಶಾಸಕರು, ಬಿಜೆಪಿಯಲ್ಲಿ ಯಾವುದೇ ಸಮಸ್ಯೆಯಿಲ್ಲ. ವಾರ್ಡ್​ಗೆ ಒಬ್ಬರೋ, ಇಬ್ಬರೋ ಹೋದರೆ ಏನು ಆಗಲ್ಲ. ನಾನೇನು ರಾಜ್ಯಮಟ್ಟದ ನಾಯಕನಾಗಬೇಕು ಎಂದು ನನಗೇನು ಇಲ್ಲ. ಹೀಗಾಗಿ ಬಿಜೆಪಿಯಲ್ಲಿ ಯಾರೂ ತುಳಿಯಲ್ಲ. ನನ್ನ ಕ್ಷೇತ್ರದ ಬಗ್ಗೆ ನಾನು ಮಾತನಾಡುತ್ತೇನೆ. ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಬಗ್ಗೆ ಒಳ್ಳೆಯ ಮಾತನಾಡಿದ್ರೆ ಅದನ್ನು ಯಾರು ರಿಸ್ಟ್ರಿಕ್ಸನ್​ ಮಾಡೋ ಆಗಿಲ್ಲ. ಈಗ ಕ್ಷೇತ್ರದಲ್ಲಿ ನೀರಿನ ಸಮಸ್ಯೆಯಿದೆ. ಆ ಬಗ್ಗೆ ಮಾತನಾಡಿದ್ರೆ ತಪ್ಪು ಎಂದರೆ ಹೇಗೆ ಎಂದು ಪ್ರಶ್ನೆ ಮಾಡಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ಬಿಟ್ಟು ಹೋಗ್ತಾರಾ ಶಾಸಕ ST ಸೋಮಶೇಖರ್.. ಕಾಂಗ್ರೆಸ್​ ಆಪರೇಷನ್ ಬಗ್ಗೆ ಅಶೋಕ್ ಹೇಳಿದ್ದೇನು?

https://newsfirstlive.com/wp-content/uploads/2023/08/R_ASHOK_STS.jpg

Load More