newsfirstkannada.com

ಮದ್ಯ, ಪೆಟ್ರೋಲ್ ಬೆನ್ನಲ್ಲೇ ಹಾಲಿನ ದರ ಏರಿಕೆ ಶಾಕ್‌.. ಆರ್‌. ಅಶೋಕ್ ಖಡಕ್ ಎಚ್ಚರಿಕೆ; ಏನಂದ್ರು?

Share :

Published June 25, 2024 at 3:12pm

  ಸರ್ಕಾರದ ನಿರ್ಧಾರಕ್ಕೆ ವಿಪಕ್ಷ ನಾಯಕ R ಅಶೋಕ್ ಆಕ್ರೋಶ

  ಮದ್ಯ, ಪೆಟ್ರೋಲ್, ಡಿಸೇಲ್ ಬೆನ್ನಲ್ಲೇ ಈಗ ಹಾಲಿನ ದರ ಏರಿಕೆ

  2 ಸಾವಿರ ರೂ. ಕೊಟ್ಟು, ತೆರಿಗೆ ರೂಪದಲ್ಲಿ 4 ಸಾವಿರ ವಸೂಲಿ

ಬೆಳಗಾವಿ: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ಹಾಲಿನ ದರ ಕೂಡ ಹೆಚ್ಚಳ ಮಾಡಲಾಗಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ವಿಪಕ್ಷ ನಾಯಕ ಆರ್​. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Breaking: ರಾಜ್ಯದ ಜನರಿಗೆ ಮತ್ತೊಂದು ಬಿಗ್ ಶಾಕ್.. ನಂದಿನಿ ಹಾಲಿನ ದರ ಮತ್ತಷ್ಟು ಏರಿಕೆ!

ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಬೆಲೆ ಏರಿಕೆ ಖಂಡಿಸಿ ವಿಧಾನಸಭೆಯಿಂದ ಪ್ರತಿಭಟನೆ ಮೂಲಕ ಸಿಎಂ ಮನೆಗೆ ತೆರಳಿ ಮುತ್ತಿಗೆ ಹಾಕುತ್ತೇವೆ. ಜುಲೈ 3 ಅಥವಾ 4 ರಂದು ಸಿಎಂ ಮನೆಗೆ ಮುತ್ತಿಗೆ ಹಾಕಿ ಸಿದ್ದರಾಮಯ್ಯ ಮನೆಯಿಂದ ಆಚೆ ಬರದಂತೆ ದಿಗ್ಭಂಧನ ಹಾಕುತ್ತೇವೆ. ಬಡವರಿಗೆ 2 ಸಾವಿರ ಕೊಟ್ಟು, ಟ್ಯಾಕ್ಸ್​ ರೂಪದಲ್ಲಿ 4 ಸಾವಿರ ವಸೂಲಿ ಮಾಡುತ್ತಿದ್ದಾರೆ. ಬಡವರ ರಕ್ತವನ್ನು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಹೀರುತ್ತಿದ್ದಾರೆ ಎಂದು ಅವರು ಕಿಡಿ ಕಾರಿದರು.

ಇದನ್ನೂ ಓದಿ: ಅನೈತಿಕ ಸಂಬಂಧ ಪ್ರಶ್ನೆ ಮಾಡಿದ್ದ ಪತಿ.. ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಮುಗಿಸಿದ ಹೆಂಡತಿ

ಲೋಕಸಭೆಯಲ್ಲಿ ಕಾಂಗ್ರೆಸ್ ಡಬಲ್ ಡಿಜಿಟ್ ಸ್ಥಾನ ಬರದಿದ್ದಕ್ಕೆ ಸರ್ಕಾರ ಮನ ಬಂದಂತೆ ಬೆಲೆ ಏರಿಸುತ್ತಿದೆ. ಇನ್ಮುಂದೆ ಅಭಿವೃದ್ಧಿ ಇರಲ್ಲ, ಕೇವಲ ಬೆಲೆ ಏರಿಕೆ ಮಾತ್ರ ಇರುತ್ತದೆ. ಕಳೆದ ವರ್ಷ 3 ರೂ. ಏರಿಸಿದ್ದರು. ಈಗ ಹಾಲಿನ ದರದಲ್ಲಿ 2 ರೂ. ಹೆಚ್ಚಳ ಮಾಡಿದ್ದಾರೆ. ಮಕ್ಕಳು ಕುಡಿಯುವ ಹಾಲಿಗೂ ಸರ್ಕಾರ ಕನ್ನ ಹಾಕಿದೆ. ಮದ್ಯದ ದರವನ್ನು ಇತ್ತೀಚೆಗೆ ಹೆಚ್ಚಳ ಮಾಡಿತ್ತು. ಇದರ ಬೆನ್ನಲ್ಲೇ ಸಾಮಾನ್ಯ ಜನರಿಗೆ ಮತ್ತೊಂದು ಷಂಕಷ್ಟವನ್ನು ಸರ್ಕಾರ ಕೊಟ್ಟಿದೆ ಎಂದು ಆರ್.ಅಶೋಕ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ಜೈಲೂಟ ತಿನ್ನದೆ ಪರದಾಟ.. ಹೆಂಡತಿ, ಮಗನನ್ನು ನೋಡಿ ಇನ್ನಷ್ಟು ಮಂಕಾದ ದರ್ಶನ್..!

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಈ ಹಿಂದೆ ಬೆಲೆ ಕಡಿಮೆ ಮಾಡುತ್ತೇವೆ ಎಂದು ಈಗ ಏಕಾಏಕಿ ಎಲ್ಲ ಬೆಲೆಗಳನ್ನು ಏರಿಕೆ ಮಾಡಲಾಗುತ್ತಿದೆ. ಮಕ್ಕಳ ಕುಡಿಯುವ ಹಾಲಿನ ದರ ಹೆಚ್ಚಳ ಮಾಡಿದ್ದೀರಿ. ನಿಮ್ಮ ಸರ್ಕಾರಕ್ಕೆ ಜನರ ಶಾಪ ತಟ್ಟುತ್ತದೆ. ಕೆಲವೇ ದಿನಗಳಲ್ಲಿ 4 ರಾಜ್ಯಗಳ ಚುನಾವಣೆ ನಡೆಯಲಿದೆ. ಇದಕ್ಕೆ ನಮ್ಮ ರಾಜ್ಯದಲ್ಲಿ ಲೂಟಿ ಮಾಡಿ ರಾಹುಲ್​ ಗಾಂಧಿಗೆ ಎಲೆಕ್ಷನ್​ ಖರ್ಚು ಅನ್ನು ಕಪ್ಪದ ರೀತಿ ಕೊಡಲಿದ್ದೀರಿ ಎಂದು ಆಶೋಕ್ ಸಿಡಿಮಿಡಿಗೊಂಡರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದ್ಯ, ಪೆಟ್ರೋಲ್ ಬೆನ್ನಲ್ಲೇ ಹಾಲಿನ ದರ ಏರಿಕೆ ಶಾಕ್‌.. ಆರ್‌. ಅಶೋಕ್ ಖಡಕ್ ಎಚ್ಚರಿಕೆ; ಏನಂದ್ರು?

https://newsfirstlive.com/wp-content/uploads/2024/06/ASHOK_SIDDU_DKS.jpg

Load More