ಮಣಿಪುರದಲ್ಲಿ ನಿನ್ನೆಯೂ ಹಿಂಸಾಚಾರ, ಶಾಂತಿಯೇ ಇಲ್ಲ..!
16 ಪಕ್ಷಗಳ 20 ನಾಯಕರಿಂದ ಮಾಹಿತಿ ಸಂಗ್ರಹ
ಸಂಸತ್ನಲ್ಲಿ ಮೋದಿ ಮಾತಾಡಿಸಲು ಪಟ್ಟು ಹಿಡಿದಿರುವ ವಿಪಕ್ಷ
ಮಣಿಪುರ ಹಿಂಸಾಚಾರ ಪ್ರಕರಣದ ಬಗ್ಗೆ ಸಂಸತ್ ಕಲಾಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಬೇಕು ಎಂದು ಪಟ್ಟು ಹಿಡಿದು ಕೂತಿರುವ ವಿಪಕ್ಷಗಳ ಕೂಟ INDIA, ವಾಸ್ತವ ಸ್ಥಿತಿ ಅರಿತುಕೊಳ್ಳಲು ಗಲಭೆಗಳು ನಡೆದ ಪ್ರದೇಶಗಳತ್ತ ಹೊರಟಿದೆ.
ಇವತ್ತು ಮತ್ತು ನಾಳೆ ಮುಂಗಾರು ಅಧಿವೇಶನಕ್ಕೆ ರಜೆ ಹಿನ್ನೆಲೆಯಲ್ಲಿ ಮಣಿಪುರದತ್ತ ಮುಖ ಮಾಡಿದೆ. ಒಟ್ಟು 16 ರಾಜಕೀಯ ಪಕ್ಷಗಳ 20 ನಾಯಕರು ಮಣಿಪುರಕ್ಕೆ ಹೊರಟಿದ್ದಾರೆ. ಮಣಿಪುರದ ಕಣಿವೆ, ಗುಡ್ಡಗಾಡು ಪ್ರದೇಶಗಳಿಗೆ ಇವರು ಭೇಟಿ ನೀಡಲಿದ್ದಾರೆ.
ಇಲ್ಲಿ ಮೈತೇಯಿ, ಕುಕಿ ಸಮುದಾಯದ ಜನರ ಭೇಟಿಯಾಗಿ ವಸ್ತುಸ್ಥಿತಿ ಅರಿತುಕೊಳ್ಳುವ ಪ್ರಯತ್ನ ಮಾಡಲಿದ್ದಾರೆ. ಹಿಂಸಾಚಾರದ ಸಂತ್ರಸ್ತರಿರುವ ಕ್ಯಾಂಪ್ಗಳಿಗೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ.
ಅಂದ್ಹಾಗೆ ನಿನ್ನೆ ಕೂಡ ಮಣಿಪುರದಲ್ಲಿ ಹಿಂಸಾಚಾರ ನಡೆದಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಜನರೇ ಶಸ್ತ್ರಾಸ್ತ್ರಗಳನ್ನು ಹಿಡಿದು ತಮ್ಮ ಊರುಗಳ ರಕ್ಷಣೆಗೆ ನಿಂತ ದೃಶ್ಯ ಸಾಮಾನ್ಯವಾಗಿದೆ. ಮೈತೇಯಿ- ಕುಕಿ ಸಮುದಾಯಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಯಾರೆಲ್ಲ ಹೋಗ್ತಿದ್ದಾರೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ