newsfirstkannada.com

ಬಿಜೆಪಿ ಸೋಲಿಸಲು ಒಂದಾದ ವಿಪಕ್ಷಗಳು: ಕಾಂಗ್ರೆಸ್​ಗೆ ಸಿಗುತ್ತಾ ಕ್ಯಾಪ್ಟನ್ಸಿ? ಎಷ್ಟು ಸೀಟ್​ ಗೆಲ್ಲೋ ಪ್ಲಾನ್​​?

Share :

18-07-2023

    ‘ಲೋಕ’ ಗೆಲ್ಲಲು ವಿಪಕ್ಷಗಳ ಮಹಾಘಟಬಂಧನ್!

    2 ದಿನ ಬೆಂಗಳೂರಿಗೆ ಶಿಫ್ಟ್ ಆದ ದಿಲ್ಲಿ ರಾಜಕಾರಣ!

    ಮೋದಿ ವಿರೋಧಿ ಕೂಟ.. ಕೈಗೆ ಕ್ಯಾಪ್ಟನ್​​ಶಿಪ್..?

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಓಟಕ್ಕೆ ಲಗಾಮು ಹಾಕಲು ವಿರೋಧಿ ಕೂಟ ರಣತಂತ್ರ ಸಿದ್ಧಪಡಿಸಿದೆ. ಪಾಟ್ನಾ ಸಭೆ ಬಳಿಕ ಒಂದೇ ವೇದಿಕೆಯಡಿ ವಿಪಕ್ಷಗಳು ಸೇರುತ್ತಿವೆ. ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದು, ಬೆಂಗಳೂರಿನಲ್ಲಿ ಒಗ್ಗಟಿನ ಮಂತ್ರ ಪಠಿಸಿವೆ. 400 ಕ್ಷೇತ್ರಗಳ ಮೇಲೆ ಈ ನವಕೂಟ ಕಣ್ಣಿಟ್ಟಿದೆ.

ಹೌದು, ಮೋದಿ ಸುನಾಮಿ ತಡೆ ಹಿಡಿಯಲು ವಿಪಕ್ಷಗಳು ಒಗ್ಗಟ್ಟಿನ ಗೋಡೆ ಕಟ್ಟುತ್ತಿವೆ. ಪ್ರಧಾನಿ ಮೋದಿ ಓಟಕ್ಕೆ ಲಗಾಮು ಹಾಕೋದೇ ಒನ್​​ಲೈನ್​ ಅಜೆಂಡಾ ಹೊಂದಿರುವ ವಿರೋಧಿ ಕೂಟ, ಒಂದೇ ವೇದಿಕೆ ಅಲ್ಲಿ ಹೆಜ್ಜೆ ಹಾಕಲು ನಿರ್ಧರಿಸಿವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿಲಿಕಾನ್​​​ ಸಿಟಿಯನ್ನೇ ಆಯ್ಕೆ ಮಾಡಿಕೊಂಡಿವೆ. 2 ದಿನಗಳ ಕಾಲ ಡೆಲ್ಲಿ ರಾಜಕಾರಣ ಬೆಂಗಳೂರಿಗೆ ಶಿಫ್ಟ್​​ ಆಗ್ತಿದೆ.

ಮೋದಿ ವಿರೋಧಿ ಕೂಟಕ್ಕೆ ಕೈಗೆ ಸಿಗುತ್ತಾ ಕ್ಯಾಪ್ಟನ್​ಶಿಪ್​?

2024ರ ಮೇ ತಿಂಗಳ ಆಸುಪಾಸಿಗೆ ಲೋಕಸಭೆ ಚುನಾವಣೆ ಎದುರಾಗಲಿದೆ. ಈ ಕಾರಣಕ್ಕೆ ಚಾರಿತ್ರಿಕ ರಾಜಕೀಯ ಕ್ರಾಂತಿಗಳಿಗೆ ಸಾಕ್ಷಿಯಾದ ಪಾಟ್ನಾದಲ್ಲಿ ಪ್ರಥಮ ಸಭೆ ಮುಗಿದಿದೆ. ಇದೀಗ ದೇಶದ ಅಷ್ಟ ದಿಕ್ಕುಗಳಿಂದ ನಾಯಕರ ಪಡೆ, ದಕ್ಷಿಣದ ಹೆಬ್ಬಾಗಿಲಲ್ಲಿ 2ನೇ ಬಾರಿ ಮಂಥನಕ್ಕೆ ಕೂರಲಿದ್ದು, ಕೇಸರಿ ಸೇನೆಗೆ ಪಂಥಾಹ್ವಾನ ನೀಡಲಿದೆ. ಮೋದಿ ಎಂಬ ಅಶ್ವಮೇಧ ಕಟ್ಟಿಹಾಕಲು ಎರಡು ದಿನಗಳ ಕಾಲ ಮಹತ್ವದ ಸಭೆ ನಡೆಯುತ್ತಿದ್ದು, 26 ಪಕ್ಷಗಳ 49 ನಾಯಕರು ಭಾಗಿಯಾಗಿದ್ದಾರೆ.

ಸಭೆ ಹಿನ್ನೆಲೆ ಬೆಂಗಳೂರಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ವಿಶೇಷ ವಿಮಾನದಲ್ಲಿ ಆಗಮಿಸಿದ್ರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​​​ ಹೆಚ್​​ಎಎಲ್​​​ ವಿಮಾನ ನಿಲ್ದಾಣದಲ್ಲಿ ಹೂಗುಚ್ಛ ನೀಡಿ ಸ್ವಾಗತಿಸಿದ್ರು. ಸಣ್ಣಪುಟ್ಟ ಪಕ್ಷಗಳ ಜೊತೆ ಪುಟ್ಟ ಹೆಜ್ಜೆ ಇಡಲು ಸಜ್ಜಾಗಿರುವ ಕಾಂಗ್ರೆಸ್​​, 2004 ಇತಿಹಾಸ ಮರುಕಳಿಸುವ ಬಹುದೊಡ್ಡ ವಿಶ್ವಾಸದಲ್ಲಿದೆ.

ಇನ್ನು, ಈ ಸಭೆ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ದೇಶದಲ್ಲಿ ಮೋದಿ ವರ್ಚಸ್ಸು ಕುಸಿಯುತ್ತಿದೆ. 2024ರ ಚುನಾವಣೆಯಲ್ಲಿ ಬಿಜೆಪಿ ಸೋಲು ಖಚಿತ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೋದಿ ವಿರುದ್ಧ ವಿಪಕ್ಷಗಳಿಂದ ಬಲ ಪ್ರದರ್ಶನ

ಮೋದಿ ವಿರುದ್ಧ ವಿಪಕ್ಷಗಳಿಂದ ಬಲ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಗಿದೆ. ಕಾಂಗ್ರೆಸ್​​​ ಸಿಎಂಗಳು ಹೊರತು ಪಡಿಸಿ ವಿವಿಧ ರಾಜ್ಯಗಳ 6 ಜನ ಸಿಎಂಗಳು ಈ ಸಭೆಯಲ್ಲಿ ಭಾಗಿ ಆಗ್ತಿದ್ದಾರೆ. 24 ಪಕ್ಷಗಳ 49 ನಾಯಕರು ಸಭೆಯಲ್ಲಿ ಹಾಜರಾಗಲಿದ್ದಾರೆ. ಇನ್ನು ಸಭೆಯಲ್ಲಿ ವಿಪಕ್ಷಗಳ ನಡುವಿನ ಭಿನ್ನಾಭಿಪ್ರಾಯ ನಿವಾರಣೆ ಸಭೆಯ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ. 2004ರಲ್ಲಿ ಅನುಸರಿಸಿದ್ದ ತಂತ್ರಗಾರಿಕೆ ಪುನರಾವರ್ತನೆ ಮಾಡಲು ಪಣ ತೊಡಲಾಗಿದೆ. ಸಾಕಷ್ಟು ಸಮಾಲೋಚನೆ ನಂತರವೇ ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಸೋನಿಯಾ ಭಾಗಿಯಾಗಿದ್ದಾರೆ.

ಹೊಸ ಕೂಟಕ್ಕೆ ನೇತೃತ್ವ ಕೊಡ್ತಾರಾ ಸೋನಿಯಾ ಗಾಂಧಿ?

ಈ ಸಭೆಗೆ ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿ ಆಗಮಿಸಿರೋದು ಹೆಚ್ಚು ಮಹತ್ವ ಪಡೆದಿದೆ. ಕಳೆದ ಪಾಟ್ನಾ ಸಭೆಯಿಂದ ಸೋನಿಯಾ ಗಾಂಧಿ ದೂರವಿದ್ರು. ಖರ್ಗೆ ಮತ್ತು ರಾಹುಲ್​ ಗಾಂಧಿ ಆ ಸಭೆಯಲ್ಲಿ ಭಾಗಿ ಆಗಿದ್ರು. ಆದ್ರೆ, ಈ ಹೊಸ ಕೂಟಕ್ಕೆ ವೇಗ ಮತ್ತು ಶಕ್ತಿ ದ್ವಿಗುಣಗೊಳ್ತಿದ್ದು, ಸೋನಿಯಾ ದಿಢೀರ್​ ಮೇನ್​​​ಸ್ಟ್ರೀಮ್​​​ನಲ್ಲಿ ಕಾಣಿಸಿಕೊಂಡಿದ್ದಾರೆ. 2004 ರಿಂದ 2014ರವರೆಗೆ ಯುಪಿಎ ಮುನ್ನಡೆಸಿದ ಸೋನಿಯಾ ಗಾಂಧಿ, ಈ ಬಾರಿಯೂ ಈ ಹೊಸ ಕೂಟದ ನೇತೃತ್ವ ವಹಿಸುವ ಸಾಧ್ಯತೆ ಇದೆ. ಅಲ್ಲದೆ, 2ನೇ ಸಭೆಗೆ ಕಾಂಗ್ರೆಸ್ ಹೆಚ್ಚು ಸಕ್ರಿಯವಾಗಿದೆ. ಇದಕ್ಕೆ ಕರ್ನಾಟಕದಲ್ಲಿ ಸಿಕ್ಕ ಪ್ರಚಂಡ ಬಹುಮತ.

ಟಾರ್ಗೆಟ್​ 400 ಸೀಟ್​!

ಇಂದು 11 ಗಂಟೆಗೆ ರೌಂಡ್​​ ಟೇಬಲ್​​ ಮೀಟಿಂಗ್​​​ ಅರೆಂಜ್​​ ಆಗಿದೆ. ಸಂಖ್ಯಾಬಲ ಹೆಚ್ಚಿಸಿಕೊಳ್ಳೋದೇ ನವಕೂಟ ಪ್ಲಾನ್​​​ ಆಗಿದೆ. ಈ ಸಭೆಯಲ್ಲಿ ದೇಶದ 543 ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ಮತ್ತು ಈ ಪೈಕಿ 400 ಕ್ಷೇತ್ರಗಳಲ್ಲಿ ಒಮ್ಮತ ಅಭ್ಯರ್ಥಿಗಳನ್ನ ಕಣಕ್ಕಿಳಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಇದೇ ಸಭೆಯಲ್ಲಿ ಈ ಹೊಸ ಒಕ್ಕೂಟದ ಸಂಚಾಲಕರ ನೇಮಕ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ. ಅಲ್ಲದೆ, ಸಭೆಯಲ್ಲಿ ಮೈತ್ರಿಕೂಟಕ್ಕೆ ಅಧಿಕೃತ ಹೊಸ ಹೆಸರು ಘೋಷಿಸಬಹುದು ಅನ್ನೋ ಮಾಹಿತಿ ಸಿಕ್ಕಿದೆ.

ಶರದ್​​ ಪವಾರ್​​ ಕೂಡ ಸಭೆಗೆ ಹಾಜರ್​!

ಇನ್ನು, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಬೆಂಗಳೂರಿನಲ್ಲಿನ ಸಭೆಗೆ ಹಾಜರಾಗಲಿದ್ದಾರೆ. ಪುತ್ರಿ ಸುಪ್ರಿಯಾ ಸುಳೆ ಕೂಡ ಬೆಂಗಳೂರಿಗೆ ಆಗಮಿಸಲಿದ್ದಾರೆ ಅಂತ ಎನ್‌ಸಿಪಿ ಹೇಳಿದೆ. ಪಾಟ್ನಾದಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದ ಶರದ್, ಬಿಜೆಪಿ ವಿರುದ್ಧ ಬಲಿಷ್ಠ ಒಕ್ಕೂಟ ಕಟ್ಟಲು ಪ್ರಮುಖ ಪಾತ್ರ ವಹಿಸಿದ್ದಾರೆ. ಒಟ್ಟಾರೆ, ಸಭೆ ಮೇಲೆ ಇಡೀ ರಾಷ್ಟ್ರ ರಾಜಕಾರಣದ ಚಿತ್ತ ನೆಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ಸೋಲಿಸಲು ಒಂದಾದ ವಿಪಕ್ಷಗಳು: ಕಾಂಗ್ರೆಸ್​ಗೆ ಸಿಗುತ್ತಾ ಕ್ಯಾಪ್ಟನ್ಸಿ? ಎಷ್ಟು ಸೀಟ್​ ಗೆಲ್ಲೋ ಪ್ಲಾನ್​​?

https://newsfirstlive.com/wp-content/uploads/2023/07/Sonia_Rahul-Gandhi.jpg

Load More