newsfirstkannada.com

Video: ‘ದಿನೇ ದಿನೇ ನಮ್ಮ ಆರೋಗ್ಯ ಕ್ಷೀಣಿಸುತ್ತಿದೆ..’ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ಅಳಲು ಕೇಳಿದ್ರೆ ಕಣ್ಣೀರು ಬರುತ್ತೆ

Share :

21-11-2023

    ನಮ್ಮನ್ನ ಬೇಗ ಹೊರಗಡೆ ಕರೆದುಕೊಳ್ಳಿ ಎಂದ ಕಾರ್ಮಿಕರು

    ಪೈಪ್ ಮೂಲಕ ಆಹಾರ, ನೀರು, ಔಷಧಿ ಪೂರೈಕೆ

    6 ಇಂಚು ಪೈಪ್ ಮೂಲಕ ಕಾರ್ಮಿಕರಿಗೆ ಅಗತ್ಯ ವಸ್ತುಗಳ ರವಾನೆ

ಉತ್ತರಾಖಂಡ್​​ನಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಕುಸಿತಗೊಂಡು ಇಂದಿಗೆ 10 ದಿನ ಆಗಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. ಬಹುದಿನಗಳಿಂದ ಸುರಂಗದ ಒಳಗೆ ಸಿಲುಕಿಕೊಂಡ ಕಾರ್ಮಿಕರು ನಮ್ಮನ್ನ ಬೇಗ ಹೊರ ಕರೆದುಕೊಳ್ಳಿ ಎಂದು ಕಣ್ಣಿರಿಟ್ಟಿದ್ದಾರೆ. ಸದ್ಯ ಅವರನ್ನು ಹೊರತರಲು ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ.

ದಿನೇ ದಿನೇ ನಮ್ಮ ಆರೋಗ್ಯ ಕ್ಷೀಣಿಸುತ್ತಿದೆ. ನಮಗೆ ಆಹಾರವೆನೋ ಸಿಗುತ್ತಿದೆ. ಆದರೆ ನಮ್ಮನ್ನ ಬೇಗ ಹೊರಗಡೆ ಕರೆದುಕೊಳ್ಳಿ. ನಮ್ಮ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತಿದೆ ಎಂದು ಸುರಂಗದೊಳಗೆ ಸಿಲುಕಿರೊ ಕಾರ್ಮಿಕರ ಅಳಲು ತೋಡಿಸಿಕೊಂಡಿದ್ದಾರೆ.

ಅಖಿಲೇಶ್ ಕುಮಾರ್ ಎಂಬ ವ್ಯಕ್ತಿ ಸುರಂಗದಲ್ಲಿನ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ. ನಮ್ಮನ್ನ ಆದಷ್ಟು ಬೇಗ ಹೊರಗೆ ಕರೆದುಕೊಳ್ಳಿ, ಇನ್ನು ಎಷ್ಟು ದಿನ ಬೇಕು ಎಂದು ಕಣ್ಣೀರು ಹಾಕಿದ್ದಾನೆ.

ಸದ್ಯ ಪೈಪ್ ಮೂಲಕ ಆಹಾರ, ನೀರು, ಔಷಧಿ ಪೂರೈಕೆಯಾಗುತ್ತಿದ್ದು, 6 ಇಂಚು ಪೈಪ್ ಮೂಲಕ ಕಾರ್ಮಿಕರಿಗೆ  ಅಗತ್ಯ ವಸ್ತುಗಳನ್ನು ಕಳುಹಿಸಿಕೊಡಲಾಗುತ್ತಿದೆ.

41ಕ್ಕೂ ಹೆಚ್ಚು ಕಾರ್ಮಿಕರು ಕುಸಿತಗೊಂಡ ಸುರಂಗದ ಒಳಗೆ ಸಿಲುಕಿಕೊಂಡಿದ್ದು, ನಿನ್ನೆಯಿಂದ ಸಿಲ್ಕ್ಯಾರಾ ಸುರಂಗದಲ್ಲಿ ವಿದೇಶಿ ತಜ್ಞರು ರಕ್ಷಣಾ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ‘ದಿನೇ ದಿನೇ ನಮ್ಮ ಆರೋಗ್ಯ ಕ್ಷೀಣಿಸುತ್ತಿದೆ..’ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ಅಳಲು ಕೇಳಿದ್ರೆ ಕಣ್ಣೀರು ಬರುತ್ತೆ

https://newsfirstlive.com/wp-content/uploads/2023/11/Uttarkhand.jpg

Load More