newsfirstkannada.com

WATCH: ಸಮುದ್ರ ದಡದಲ್ಲಿ ಪೈಲಟ್​ ತಿಮಿಂಗಿಲಗಳ ಸರಣಿ ಸಾವು.. ಕಾರಣ ಮಾತ್ರ ನಿಗೂಢ!

Share :

17-07-2023

    ಬೀಚ್​ನಲ್ಲಿ ಸಾಮೂಹಿಕವಾಗಿ ಮೃತಪಟ್ಟ ತಿಮಿಂಗಿಲಗಳು

    ಸಮುದ್ರ ರಕ್ಷಣಾ ಇಲಾಖೆ ಸಿಬ್ಬಂದಿ ಆಗಮಿಸಿ ಪರಿಶೀಲನೆ

    ಈ ತಿಮಿಂಗಿಲಗಳ ಸಾವಿಗೆ 4 ಕಾರಣಗಳು ಆಗಿರಬಹುದೇ?

ಸಮುದ್ರದ ನೀರಿನಿಂದ ದಡಕ್ಕೆ ಬಂದು 50ಕ್ಕೂ ಹೆಚ್ಚು ಪೈಲಟ್​ ತಿಮಿಂಗಿಲಗಳು ಸಾವನ್ನಪ್ಪಿರುವ ಘಟನೆ ಸ್ಕಾಟ್​ಲ್ಯಾಂಡ್​ನ ಐಲ್ಸ್ ಬೀಚ್​ನಲ್ಲಿ ನಡೆದಿದೆ. ಇದರಲ್ಲಿ ಕೆಲವು ವಯಸ್ಕ ತಿಮಿಂಗಿಲುಗಳಾದರೆ ಇನ್ನು ಕೆಲವು ಮರಿಗಳಾಗಿವೆ ಎಂದು ಹೇಳಲಾಗಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಸಮುದ್ರ ರಕ್ಷಕ ಸಿಬ್ಬಂದಿ ಐಲ್ಸ್ ಬೀಚ್ ಆಗಮಿಸಿ ಜೀವಂತ ಇರುವ 15 ತಿಮಿಂಗಿಲಗಳನ್ನು ಗುರುತಿಸಿ ರಕ್ಷಣೆಗೆ ಮುಂದಾದರು. ಇನ್ನು ಕೆಲ ತಿಮಿಂಗಿಲಗಳು ನೀರಿಗೆ ಬಿಟ್ಟರೇ ಅವು ಈಜಲಾಗದೇ ಪ್ರಜ್ಞೆ ಇಲ್ಲದಂತೆ ಬೀಳುತ್ತಿವೆ ಎನ್ನಲಾಗಿದೆ.

ಈ ರೀತಿ ತಿಮಿಂಗಿಲುಗಳು ಸಾಮೂಹಿಕವಾಗಿ ಸಾವನ್ನಪ್ಪುವುದಕ್ಕೆ ಕೆಲವು ಕಾರಣಗಳನ್ನು ಹೇಳಲಾಗುತ್ತಿದೆ. ಕೆಲವೊಮ್ಮೆ ಹೆಣ್ಣು ತಿಮಿಂಗಿಲು ಮರಿ ಹಾಕುವ ವೇಳೆ ಉಳಿದ ತಿಮಿಂಗಿಲುಗಳು ದಡಕ್ಕೆ ಬಂದು ಸರಪಳಿಯಂತೆ ರಚನೆ ಮಾಡುತ್ತವೆ. ಈ ವೇಳೆ ಮತ್ತೆ ವಾಪಸ್ ಆಗಲು ಆಗದೇ ಮೃತಪಡುತ್ತವೆ. ಇನ್ನೊಂದು ಕಾರಣದ ಪ್ರಕಾರ ಸಮುದ್ರದಲ್ಲಿ ಜಲ ಮಾಲಿನ್ಯದಿಂದ ಉಸಿರಾಟಕ್ಕೆ ಸಮಸ್ಯೆಯಾಗಿ ತಿಮಿಂಗಿಲಗಳು ಕೊನೆಯುಸಿರೆಳೆಯುತ್ತವೆ.

ಮತ್ತೊಂದು ಕಾರಣದಂತೆ ಯಾವುದಾದರೂ ದೊಡ್ಡ ತಿಮಿಂಗಿಲ ಸಮುದ್ರದಲ್ಲಿ ಸಾವನ್ನಪ್ಪಿದ್ರೆ ನೀರು ಕಲುಷಿತ ಆಗುವುದರಿಂದ ಉಳಿದವುಗಳು ದಡಕ್ಕೆ ಬಂದು ಮೃತಪಡುತ್ತವೆ ಎಂದು ಹೇಳಲಾಗುತ್ತದೆ. ಸದ್ಯ ಸ್ಕಾಟ್​ಲ್ಯಾಂಡ್​ನಲ್ಲಿ ಮೃತಪಟ್ಟ ತಿಮಿಂಗಿಲುಗಳು ಯಾವ ಕಾರಣಕ್ಕಾಗಿ ಸಾಮೂಹಿಕವಾಗಿ ಮೃತಪಟ್ಟಿವೆಂದು ಇನ್ನು ತಿಳಿದು ಬಂದಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಸಮುದ್ರ ದಡದಲ್ಲಿ ಪೈಲಟ್​ ತಿಮಿಂಗಿಲಗಳ ಸರಣಿ ಸಾವು.. ಕಾರಣ ಮಾತ್ರ ನಿಗೂಢ!

https://newsfirstlive.com/wp-content/uploads/2023/07/PILOT_WHALES.jpg

Load More