newsfirstkannada.com

ಪ್ರೀತಿ ತಮ್ಮನಿಗೆ ಅಕ್ಕನಿಂದ ಬೊಂಬಾಟ್ ಉಡುಗೊರೆ; ಏನದು..?

Share :

23-08-2023

    ಪ್ರೀತಿಯ ತಮ್ಮ ಗಗನ್​ಗೆ ಅಕ್ಕನಿಂದ ಬಂತು ಬಿಗ್​​ ಗಿಫ್ಟ್​​

    ಮೋಕ್ಷಿತಾ, ಗಗನ್ ಪ್ರೀತಿ ಬಾಂಧವ್ಯಕ್ಕೆ ಮನಸೋತ ಫ್ಯಾನ್ಸ್

    ಯಾರಿಗು ಇಂತ ಭಾಗ್ಯ ಸಿಗಲ್ಲ ಹೀಗೆ ಇರಿ ಎಂದ ನೆಟ್ಟಿಗರು

ಕಿರುತೆರೆಯಲ್ಲಿ ಒಂದು ಧಾರಾವಾಹಿ ಹುಟ್ಟಿದ್ದರೆ ಅಲ್ಲಿ ಒಂದು ಕುಂಟುಂಬ ಹುಟ್ಟಿದ್ದಂತೆ. ಧಾರಾವಾಹಿಗೆ ಕಲಾವಿದರಾಗಿ ಬಂದು ತಮ್ಮಷ್ಟಕ್ಕೆ ತಾವು ತಮ್ಮ ಕೆಲಸ ಮುಗಿಸಿ ನನ್ನ ಕೆಲಸ ಆಯ್ತು ಅನ್ನೋವರಲ್ಲಿ ಕಲಾವಿರೆಲ್ಲಾ ಒಂದು ಕುಟುಂಬವಾಗಿ ಪರಿವರ್ತನೆಗೊಳ್ಳೋದು ಅಷ್ಟು ಸುಲಭವಲ್ಲ. ಆದ್ರೆ, ಪಾರು ಧಾರಾವಾಹಿಯ ಕಲಾವಿದರು ಸತತ ವರ್ಷಾನುಗಟ್ಟಲೆ ಶೂಟಿಂಗ್​ ಮಾಡ್ತಾ ಮಾಡ್ತಾ ಒಂದು ಫ್ಯಾಮಿಲಿ ರೀತಿ ಒಂದಾಗಿ ಬಿಟ್ಟಿದ್ದಾರೆ.

View this post on Instagram

A post shared by ♕ɢᴀɴɪ (@gagan_deep_3805)

ಈ ಧಾರಾವಾಹಿಯಲ್ಲಿ ಪಾರು ಹಾಗೂ ಅವರ ತಮ್ಮ ಗಣೇಶ ಅಂದ್ರೆ ಗಣಿ. ಇವರಿಬ್ಬರ ಕಾಂಬಿನೇಷನ್ ತೆರೆಯ ಮೇಲೆ ಅದ್ಭುತವಾಗಿ ಮೂಡಿ ಬರುತ್ತಿದೆ. ಇವರಿಬ್ಬರ ಕ್ಯಾರೆಕ್ಟರ್ ಬಾಡಿಂಗ್​ನ ಜನ ತುಂಬಾನೆ ಮೆಚ್ಚಿಕೊಂಡಿದ್ದಾರೆ. ಇದು ತೆರೆಯ ಮೇಲಷ್ಟೆ ಅಲ್ಲದೆ ತೆರೆಯ ಹಿಂದೆನೂ ಕೂಡ ಸ್ವಂತ ಅಕ್ಕ ತಮ್ಮನಂತೆ ಇದ್ದಾರೆ. ಇವರ ಈ ರಿಯಲ್ ಬಾಡಿಂಗ್​ ನೋಡಿ ಅದೆಷ್ಟೋ ಜನ ಸ್ವಂತ ಅಕ್ಕ ತಮ್ಮ ಅಂತಾ ಕೇಳಿದ್ದಾರಂತೆ. ಅಷ್ಟರ ಮಟ್ಟಿಗೆ ಈ ಇಬ್ಬರ ಸಂಬಂಧ ಗಟ್ಟಿಯಾಗಿದೆ. ಮೊನ್ನೆಯಷ್ಟೇ ಮೋಕ್ಷಿತಾ ತನ್ನ ತಮ್ಮ ಗಗನ್ ದೀಪ್​ಗೆ ಕಿವಿಯೋಲೆ ಕೊಡಿಸಿ ತಾವೇ ಕೈಯಾರೆ ತೊಡಿಸಿದ್ದಾರೆ.

ಮೋಕ್ಷಿತಾ ಹಾಗೂ ಗಗನ್ ತುಂಬಾ ಒಳ್ಳೆಯ ಬಾಡಿಂಗ್​ನ ಮೈಂಟೈನ್ ಮಾಡಿದ್ದಾರೆ. ಆಗಾಗ ಪ್ರೀತಿಯ ತಮ್ಮನಿಗೆ ಏನಾದ್ರು ಗಿಫ್ಟ್ ಕೊಡ್ತಾನೆ ಇರ್ತಾರೆ ಪಾರು. ಈ ಭಾರಿ ಮನಸಾರೆ ತಮ್ಮನಿಗೆ ಇಯರ್ ಪಿಯರ್ಸಿಂಗ್ ಮಾಡಿಸಿದ್ದಾರೆ. ಇದನ್ನ ಗಗನ್ ಕೂಡ ತುಂಬಾ ಇಷ್ಟ ಪಟ್ಟಿದ್ದಾರೆ. ಶೂಟಿಂಗ್​ನಿಂದ ಬ್ರೇಕ್ ತೆಗೆದುಕೊಂಡ ಪಾರು ತಂಡ ಟ್ರಿಪ್ ಕೂಡ ಹೋಗ್ತಾ ಇರ್ತಾರೆ.

ತಮ್ಮನಿಗೆ ಇಯರ್ ಪಿಯರ್ಸ್​ ಮಾಡಿಸೋ ಮೂಲಕ ತಮ್ಮನಿಗೆ ತಕ್ಕ ಅಕ್ಕ ಅನ್ನೋದನ್ನ ಪ್ರೋವ್ ಮಾಡಿದ್ದಾರೆ ನಟಿ ಮೋಕ್ಷಿತಾ. ಈ ಬಾಡಿಂಗ್​ನ ನೋಡಿ ಜನ ಕೂಡ ಮನಸಾರೆ ವಿಶಸ್ ತಿಳಿಸಿದ್ದಾರೆ. ಇನ್ನು ಈ ವಿಡಿಯೋ ನೋಡಿದ ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್​ ಮಾಡಿದ್ದಾರೆ. ಎಲ್ಲರಿಗೂ ಈ ಭಾಗ್ಯ ಸಿಗೋದಿಲ್ಲ ಯಾವಾಗಲೂ ಖುಷಿಯಿಂದ ಇರಿ ಎಂದು ಭಿನ್ನ ವಿಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೀತಿ ತಮ್ಮನಿಗೆ ಅಕ್ಕನಿಂದ ಬೊಂಬಾಟ್ ಉಡುಗೊರೆ; ಏನದು..?

https://newsfirstlive.com/wp-content/uploads/2023/08/paru-1.jpg

Load More