ವಿಶ್ವಕಪ್ ಜಪದಲ್ಲಿ ಪ್ರಬಲ ತಂಡಗಳು, ಟೂರ್ನಿಗಾಗಿ ಭರ್ಜರಿ ಸಿದ್ಧತೆ
ಹಾರ್ದಿಕ್ ಪಾಂಡ್ಯ ಆಲ್ರೌಂಡ್ ಆಟ ಮಾಯ.! ಮತ್ತೆ ನಿರೀಕ್ಷೆ ಮೂಡಿಸ್ತಾರಾ?
ಪೇಸ್ ಆಲ್ರೌಂಡರ್ಗಳೇ ಆಸ್ಟ್ರೇಲಿಯಾದ ಅಸ್ತ್ರ.! ಟೀಂ ಇಂಡಿಯಾದ ಕಥೆಯೇನು?
ಏಕದಿನ ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾವನ್ನ ಒಂದೆರಡು ಸಮಸ್ಯೆಗಳು ಕಾಡ್ತಿಲ್ಲ. ಸಮಸ್ಯೆಗಳ ಸರಮಾಲೆಯೇ ಟೀಮ್ ಇಂಡಿಯಾದಲ್ಲಿವೆ. ಆದ್ರೆ, ಯಾರು ಅಷ್ಟಾಗಿ ಗಮನಿಸದ ಪ್ರಮುಖ ಸಮಸ್ಯೆಯೊಂದಿದೆ. ಅದೇನು ಗೊತ್ತಾ?
ವಿಶ್ವಕಪ್ ಮಹಾಕದನಕ್ಕೆ ವಿಶ್ವದ ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸ್ತಾ ಇದ್ರೆ, ಟೀಮ್ ಇಂಡಿಯಾ ಗೊಂದಲದ ಗೂಡಾಗಿದೆ. ತಂಡದಲ್ಲಿ ಹುಟ್ಟಿಕೊಂಡಿರುವ ಪ್ರಶ್ನೆಗಳಿಗೆ ಉತ್ತರವೇ ಸಿಗ್ತಿಲ್ಲ. ವಿಶ್ವಸಮರಕ್ಕೂ ಮುನ್ನ ಟೀಮ್ ಇಂಡಿಯಾ ಎಂತಾ ಹಿನ್ನಡೆ ಅನುಭವಿಸ್ತಾ ಇದೆ ಅಂದ್ರೆ, ತವರಿನಲ್ಲಿ ಟೂರ್ನಿ ನಡೀತಾ ಇದ್ರೂ, ಟ್ರೋಫಿ ಗೆಲ್ಲೋ ಹಾಟ್ ಫೇವರಿಟ್ ತಂಡಗಳ ಪಟ್ಟಿಯಲ್ಲಿ ಕೆಳಕ್ಕೆ ಕುಸಿದಿದೆ.
ಇಂಗ್ಲೆಂಡ್, ಆಸ್ಟ್ರೇಲಿಯಾ ಟ್ರೋಫಿ ಗೆಲ್ಲೋ ಹಾಟ್ ಫೇವರಿಟ್.!
ಹೌದು. ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಸದ್ಯ ಟ್ರೋಫಿ ಗೆಲ್ಲೋ ಹಾಟ್ ಫೇವರಿಟ್ ತಂಡಗಳಾಗಿ ಗುರುತಿಸಿಕೊಂಡಿವೆ. ಟೂರ್ನಿಗೆ ಭರ್ಜರಿ ಸಿದ್ಧತೆ ನಡೆಸಿರೋ ಈ ತಂಡಗಳು ಗೊಂದಲಗಳಿಗೆ ಫುಲ್ಸ್ಟಾಫ್ ಹಾಕಿವೆ. ಆಟಗಾರರೆಲ್ಲಾ ಸಾಲಿಡ್ ಫಾರ್ಮ್ನಲ್ಲಿದ್ರೆ, ಟೀಮ್ ಕಾಂಬಿನೇಷನ್ ಪರ್ಫೆಕ್ಟ್ ಆಗಿದೆ. ಅದ್ರಲ್ಲೂ ತಂಡದಲ್ಲಿರೋ ಎಕ್ಸ್ ಫ್ಯಾಕ್ಟರ್ಗಳು ಆತ್ಮವಿಶ್ವಾಸ ಹೆಚ್ಚಿಸಿವೆ.
ಆಲ್ರೌಂಡರ್ ಸ್ಟೋಕ್ಸ್ ಕಮ್ಬ್ಯಾಕ್, ಇಂಗ್ಲೆಂಡ್ ಪ್ರಬಲ.!
ಕಳೆದ ವಿಶ್ವಕಪ್ ಟೂರ್ನಿಯ ಹೀರೋ ಬೆನ್ಸ್ಟೋಕ್ಸ್, ಏಕದಿನ ನಿವೃತ್ತಿಯಿಂದ ವಾಪಾಸ್ಸಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟೂರ್ಗೆ ಸೆಲೆಕ್ಟ್ ಆಗೋದ್ರ ಜೊತೆಗೆ ವಿಶ್ವಕಪ್ ಆಡೋ ಸಂದೇಶ ರವಾನಿಸಿದ್ದಾರೆ. ಆಲ್ರೌಂಡರ್ ಸ್ಟೋಕ್ಸ್ ಕಮ್ಬ್ಯಾಕ್ ಇಂಗ್ಲೆಂಡ್ ಬಲ ಹೆಚ್ಚಿಸಿದೆ. ಆಲ್ರೌಂಡರ್ಗಳಾದ ಸ್ಟೋಕ್ಸ್ ಹಾಗೂ ಸ್ಯಾಮ್ ಕರನ್ ಇಂಗ್ಲೆಂಡ್ ಪಾಲಿನ ಮ್ಯಾಚ್ ವಿನ್ನರ್ಗಳಾಗ್ತಾರೆ ಅನ್ನೋದು ಎಕ್ಸ್ಪರ್ಟ್ಗಳ ಟಾಕ್.!
ಪೇಸ್ ಆಲ್ರೌಂಡರ್ಗಳೇ ಆಸ್ಟ್ರೇಲಿಯಾದ ಅಸ್ತ್ರ.!
ಮಿಚೆಲ್ ಮಾರ್ಷ್, ಕ್ಯಾಮರೂನ್ ಗ್ರೀನ್. ಈ ಇಬ್ಬರು ಪೇಸ್ ಆಲ್ರೌಂಡರ್ಗಳೇ ಆಸ್ಟ್ರೇಲಿಯಾದ ಅಸ್ತ್ರವಾಗಿದ್ದಾರೆ. ಸಾಲಿಡ್ ಬ್ಯಾಟಿಂಗ್ ಮಾಡಬಲ್ಲ ಇವ್ರು, ಬೌಲಿಂಗ್ನಲ್ಲೂ ಮಿಂಚಬಲ್ಲರು. ಈ ಆಲ್ರೌಂಡರ್ಗಳ ಬಲದಿಂದಲೇ ಅಸ್ಟ್ರೇಲಿಯಾ ವಿಶ್ವಕಪ್ ಗೆಲ್ಲೋ ಹಾಟ್ ಫೇವರಿಟ್ಗಳ ಪಟ್ಟಿಯಲ್ಲಿ ಟಾಪ್ನಲ್ಲಿದೆ.
ಟೀಮ್ ಇಂಡಿಯಾಗೆ ಪೇಸ್ ಆಲ್ರೌಂಡರ್ ಬರ.!
ಹೌದು. ಟೀಮ್ ಇಂಡಿಯಾಗೆ ಫಾಸ್ಟ್ ಬೌಲಿಂಗ್ ಆಲ್ರೌಂಡರ್ಗಳ ಬರ ಕಾಡ್ತಿದೆ. ಹಾರ್ದಿಕ್ ಪಾಂಡ್ಯ ಒಬ್ಬರನ್ನೇ ಟೀಮ್ ಇಂಡಿಯಾ ನೆಚ್ಚಿಕೊಂಡಿದೆ. ಆದರೆ, ಹಾರ್ದಿಕ್ ಪರ್ಫಾಮ್ ಮಾಡುವಲ್ಲಿ ಫೇಲ್ ಆಗಿದ್ದಾರೆ. ಕಳೆದ ವಿಂಡೀಸ್ ಸರಣಿಯಲ್ಲಿ ಆಡಿದ 3 ಪಂದ್ಯಗಳಲ್ಲಿ ಕೇವಲ 82 ರನ್ಗಳಿಸಿ ಕೇವಲ 1 ವಿಕೆಟ್ ಕಬಳಿಸಿದ್ರು. ಇಷ್ಟೇ ಅಲ್ಲ.. 2023ರ ಜನವರಿಯಿಂದ ಈವರೆಗೆ 11 ಪಂದ್ಯ ಆಡಿ ಕೇವಲ 31.11ರ ಸರಾಸರಿಯಲ್ಲಿ ರನ್ಗಳಿಸಿದ್ದಾರೆ. ಇನ್ನು, 57.4 ಓವರ್ ಬೌಲಿಂಗ್ ಹಾಕಿ 10 ವಿಕೆಟ್ ಕಬಳಿಸಿದ್ದಾರಷ್ಟೇ.
ಶಾರ್ದೂಲ್ ಠಾಕೂರ್ ಪರ್ಫಾಮೆನ್ಸ್ ಫುಲ್ ಡಲ್.!
ಹಾರ್ದಿಕ್ ಪಾಂಡ್ಯ ಬಿಟ್ರೆ ಟೀಮ್ ಇಂಡಿಯಾಗಿರೋ ಫಾಸ್ಟ್ ಬಾಲಿಂಗ್ ಆಲ್ರೌಂಡರ್ ಅಯ್ಕೆ ಶಾರ್ದೂಲ್ ಠಾಕೂರ್. ಶಾರ್ದೂಲ್ ಬೌಲಿಂಗ್ನಲ್ಲಿ ಒಕೆ ಅನಿಸಿದ್ರೂ, ಬ್ಯಾಟಿಂಗ್ನಲ್ಲಿ ಅಷ್ಟಕಷ್ಟೇ. ಈ ವರ್ಷದಲ್ಲಿ ಆಡಿರೋ 7 ಪಂದ್ಯದಿಂದ ಕೇವಲ 45 ರನ್ಗಳಿಸಿರೋ ಶಾರ್ದೂಲ್ರಿಂದ ಕೆಳ ಕ್ರಮಾಂಕದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಿರೀಕ್ಷೆ ಮಾಡೋಕಾಗುತ್ತಾ..?
ಸದ್ಯಕ್ಕಂತೂ ಇರೋ ಸಮಸ್ಯೆಗಳ ನಡುವೆ ಈ ಫಾಸ್ಟ್ ಬೌಲಿಂಗ್ ಆಲ್ರೌಂಡರ್ ಕೊರತೆಯನ್ನ ವಿಶ್ವಕಪ್ ಟೂರ್ನಿಯೊಳಗೆ ನೀಗಿಸೋಕೆ ಸಾಧ್ಯವಿಲ್ಲ. ಹೀಗಾಗಿ, ಮೆಗಾ ಟೂರ್ನಿಯ ಇವರಿಬ್ರು ತಮ್ಮ ಜವಾಬ್ದಾರಿಯನ್ನ ಅರಿತುಕೊಂಡು ಆಡಬೇಕಿದೆ. ಇಲ್ಲದಿದ್ರೆ, ತಂಡಕ್ಕೆ ಹಿನ್ನಡೆಯಾಗೋದು ಪಕ್ಕಾ.!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ