ಪೋಷಕ ಪಾತ್ರಗಳಿಗೆ ಬಹು ಬೇಡಿಕೆ ನಟಿ ಪದ್ಮಜಾ ರಾವ್
'ಮಂಡಲ ಡ್ರಾಯಿಂಗ್' ವಿಶೇಷವಾದ ಕಲೆ ಒಲಿದಿದೆ
ವಿಶಿಷ್ಟ ಕಲೆಯನ್ನ ರೂಢಿಸಿಕೊಂಡಿದ್ದೇಕೆ ನಟಿ ಪದ್ಮಜಾ ರಾವ್?
ಕಿರುತೆರೆ ಹಾಗೂ ಹಿರಿತೆರೆಯಲ್ಲೂ ತಮ್ಮದೆಯಾದ ಚಾಪನ್ನು ಮೂಡಿಸುತ್ತಿರೋ ಹಿರಿಯ ನಟಿಯರಲ್ಲಿ ಪದ್ಮಜಾ ರಾವ್ ಕೂಡ ಒಬ್ಬರು. ಸ್ಯಾಂಡಲ್ವುಡ್ನಲ್ಲೇ ಪೋಷಕ ಪಾತ್ರಗಳಿಗೆ ಬಹು ಬೇಡಿಕೆ ನಟಿ ಇವರು. ಇನ್ನು ನಟಿ ಪದ್ಮಜಾ ರಾವ್ ಅವರು ಕೇವಲ ಕಲಾವಿದೆ ಅಷ್ಟೆ ಅಲ್ಲ ಕಲಾ ದೇವತೆಯ ಸ್ಮರಣೆ ಜೊತೆಗೆ ಇವರಿಗೆ ಭಿನ್ನವಾದ ಪ್ರತಿಭೆ ಕೂಡ ಇದೆ.
ಹೌದು ಪದ್ಮಜಾ ರಾವ್ ಅವರು ‘ಮಂಡಲ ಡ್ರಾಯಿಂಗ್’ ಅನ್ನೋ ವಿಶೇಷವಾದ ಚಿತ್ರವನ್ನು ಬಿಡಿಸುತ್ತಾರೆ. ಶೂಟಿಂಗ್ನಿಂದ ಸ್ವಲ್ಪ ಬಿಡುವು ಮಾಡಿಕೊಂಡು ಸಿಕ್ಕ ಸಮಯದಲ್ಲೇ ನಟಿ ಪದ್ಮಜಾ ರಾವ್ ಡ್ರಾಯಿಂಗ್ನ ಮಾಡ್ತಾರೆ. ಈ ಮಂಡಲ ಡ್ರಾಯಿಂಗ್ ಅನ್ನೋದು ಒಂದು ವಿಶಿಷ್ಟ ಕಲೆ ಅಂತಲೇ ಹೇಳಬಹುದು. ಈ ಕಲಾತ್ಮಕ, ವೈಶಿಷ್ಯ ಕಲೆಯು ಇವರಿಗೆ ಒಲಿದಿದೆ.
ರಂಗೋಲಿ, ವಾಟರ್ ಪೈಟಿಂಗ್, ನ್ಯಾಚುರಲ್ ಪೈಟಿಂಗ್ ಹೀಗೆ ಇದರ ಜೊತೆ ಮಂಡಲ ಡ್ರಾಯಿಂಗ್ ತನ್ನದೆ ಆದ ವಿಭಿನ್ನತೆ ಹೊಂದಿದೆ. ಮಂಡಲವನ್ನ ಬಿಡಿಸೋದು ಸುಲಭವಾದ ಕೆಲಸ ಅಲ್ಲವೇ ಅಲ್ಲ. ಯಾಕಂದ್ರೆ ಈ ಚಿತ್ರಣ ಹೊರ ಹೊಮ್ಮುವುದಕ್ಕೆ ಸುಮಾರು ದಿನಗಳು ಅಥವಾ ತಿಂಗಳುಗಳೇ ಬೇಕು. ಈ ಡ್ರಾಯಿಂಗ್ ಬಿಡಿಸೋಕೆ ಬಹಳ ಚಾತುರ್ಯವನ್ನ ಹೊಂದಿರಬೇಕು. ದಿನೇ ದಿನೇ ಮಾಡ್ತಾ ಮಾಡ್ತಾ ಈ ಮಂಡಲ ಅದ್ಭುತವಾಗಿ ಹೊರ ಹೊಮ್ಮುತ್ತೆ. ಇಂತಹ ವಿಶಿಷ್ಟ ಕಲೆಯನ್ನ ರೂಢಿಸಿಕೊಂಡಿದ್ದಾರೆ ನಟಿ ಪದ್ಮಜಾ ರಾವ್.
‘ನಾನು ಬೇರೆ ಬೇರೆ ಕಾರಣಗಳಿಂದಾಗಿ ಕೆಲವೊಂದಷ್ಟು ದಿನಗಳ ಕಾಲ ಖಿನ್ನತೆಗೆ ಒಳಗಾಗಿದ್ದೆ. ಸಣ್ಣ ಪುಟ್ಟ ವಿಷಯಗಳಿಗೆ ಡಿಪ್ರೆಷನ್ಗೆ ಹೋಗಿ ಬಿಟ್ಟಿದ್ದೆ. ಆಗ ಡಾಕ್ಟರ್ ನನಗೆ ಬೇರೆ ಯಾವುದಾದ್ರು ಕಲಾತ್ಮಕ ವಿಷಯಗಳಲ್ಲಿ ನಿಮ್ಮನ್ನ ನೀವು ತೊಡಗಿಸಿಕೊಳ್ಳಿ ಅಂತಾ ಹೇಳಿದ್ದರು. ಅದೇ ಸಮಯಕ್ಕೆ ಈ ಮಂಡಲ ಡ್ರಾಯಿಂಗ್ ಮಾಡೋದಕ್ಕೆ ಶುರು ಮಾಡಿಕೊಂಡೆ. ಕಾಲ ಕ್ರಮೇಣ ಈ ಕಲೆ ನನಗೆ ಹವ್ಯಾಸ ರೀತಿಯಲ್ಲಿ ಚೇಂಜ್ ಆಯ್ತು.
ಜೊತೆಗೆ ಇದೇ ಕಾರಣದಿಂದಾಗಿ ಡಿಪ್ರೆಷನ್ನಿಂದಲೂ ಆಚೆ ಬಂದೆ ಎಂದು ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಪದ್ಮಜಾ ಅವರು ಕೇವಲ ನಟನೆಯಷ್ಟೆ ಅಲ್ಲದೇ, ಈ ರೀತಿಯಲ್ಲೂ ಕಲಾತ್ಮಕ ವಕ್ಷಯಗಳಲ್ಲೂ ತೊಡಗಿಸಿಕೊಂಡಿರೋದು ನಿಜಕ್ಕೂ ಖುಷಿ ತರುವಂತದ್ದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ