newsfirstkannada.com

ನನಗೆ ಕುಸುಮಾ ಪಾತ್ರ ಸಿಕ್ಕಿದ್ದೆ ಬಲು ರೋಚಕ; ಈ ಕುರಿತು ನಟಿ ಪದ್ಮಜಾ ರಾವ್ ಹೇಳಿದ್ದೇನು..?

Share :

11-09-2023

  ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಬ್ಯೂಸಿಯಾದ ನಟಿ ಇವರು!

  ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ ನಟಿ ಪದ್ಮಜಾ ರಾವ್

  ಅತ್ತೆ ಕುಸುಮಾ ಪಾತ್ರದಲ್ಲಿ ನಟಿ ಪದ್ಮಜಾ ರಾವ್​ಗೆ ಫುಲ್​ ಮಾರ್ಕ್ಸ್

ಕಿರುತೆರೆಯ ನೆಚ್ಚಿನ ಧಾರಾವಾಹಿಗಳಲ್ಲಿ ಭಾಗ್ಯಲಕ್ಷ್ಮೀ ಉತ್ತುಂಗದಲ್ಲಿದೆ. ಭಾಗ್ಯಲಕ್ಷ್ಮೀಯ ಕಥೆ ಜನರಿಗೆ ತುಂಬಾನೆ ಹಿಡಿಸಿದೆ. ಕಥೆ ಹಾಗೂ ಪಾತ್ರಗಳಿಗೆ ಜನ ಫುಲ್ ಫಿದಾ ಆಗಿದ್ದಾರೆ. ಈ ಧಾರಾವಾಹಿಯ ಪಾತ್ರಗಳಂತೂ ಒಂದಕ್ಕಿಂತ ಒಂದು ಭಿನ್ನ. ಅದರಲ್ಲೂ ಕುಸಮಾ ಪಾತ್ರ ಜನರಿಗೆ ಹತ್ತಿರವಾಗಿದೆ. ಅಬ್ಬಾ ಈ ಪಾತ್ರಕ್ಕೆ ಲಕ್ಷಾಂತರ ಫ್ಯಾನ್​ ಫಾಲೋಯಿಂಗ್ಸ್ ಕೂಡ ಇದೆ. ಕಿರುತೆರೆ ಹಾಗೂ ಹಿರಿತೆರೆಯಲ್ಲೂ ತಮ್ಮದೆಯಾದ ಚಾಪನ್ನು ಮೂಡಿಸುತ್ತಿರೋ ಹಿರಿಯ ನಟಿಯರಲ್ಲಿ ಪದ್ಮಜಾ ರಾವ್ ಕೂಡ ಒಬ್ಬರು. ಸ್ಯಾಂಡಲ್​ವುಡ್​ನಲ್ಲೇ ಪೋಷಕ ಪಾತ್ರಗಳಿಗೆ ಬಹು ಬೇಡಿಕೆ ನಟಿ ಇವರು.

ಇದನ್ನು ಓದಿ: WATCH: ನಟಿ ಪದ್ಮಜಾ ರಾವ್ ಟ್ಯಾಲೆಂಟ್‌ ಸೂಪರ್‌; ಈ ಕಲೆಯ ಬಗ್ಗೆ ನೀವು ಕೇಳಿದ್ರೆ ಶಾಕ್​ ಆಗ್ತೀರಾ!

ಕುಸುಮಾ ಪಾತ್ರವನ್ನ ಕನ್ನಡ ಹಿರಿಯ ನಟಿ ಪದ್ಮಜಾ ರಾವ್ ಅವರು ನಿರ್ವಹಿಸ್ತಾ ಇದ್ದಾರೆ. ನಿಜಾ ಈ ಪಾತ್ರವಂತೂ ಪದ್ಮಜಾ ಅವರಿಗೆ ಹೇಳಿ ಮಾಡಿಸಿದ ಹಾಗೇ ಇದೆ. ಆದ್ರೆ ಕುಸುಮಾ ಪಾತ್ರ ಇವರಿಗೆ ಸಿಕ್ಕಿದೆ ರೋಚಕವಂತೆ. ಕುಸುಮಾ ಪಾತ್ರವನ್ನ ನೀವು ನಿರ್ವಹಿಸಬೇಕು ಅಂತಾ ಹೇಳಿದ್ದಾಗ ಪದ್ಮಜಾ ಅವರಿಗೆ ಬಿಡುವೇ ಇರಲಿಲ್ಲವಂತೆ. ಅಂದ್ರೆ, ಸಿನಿಮಾ ಹಾಗೂ ಬೇರೆ ಬೇರೆ ಧಾರಾವಾಹಿಗಳಲ್ಲಿ ಬ್ಯೂಸಿ ಆಗಿದ್ರು. ಈ ಧಾರಾವಾಹಿಗೆ ಡೇಟ್ಸ್ ಸರಿ ಹೊಂದುತ್ತಲೇ ಇರಲಿಲ್ಲವಂತೆ, ಆದ್ರೆ ಫಿಕ್ಷನ್ ಹೆಡ್ ಜೆಡಿ ಅವರು ಹೇಗೋ ಒಪ್ಪಿಸಿ ಡೇಟ್ಸ್​ ಕೂಡ ಹೊಂದಾಣಿಕೆ ಮಾಡಿಕೊಟ್ಟರಂತೆ.

ಈ ಪಾತ್ರ ಕೈ ಬಿಟ್ಟು ಹೋಯ್ತು ಅನ್ನೋವಷ್ಟರಲ್ಲಿ ನನಗೆ ವಾಪಸ್ ಒದ್ಕೊಂಡು ಬಂತು ಈ ಪಾತ್ರ ಎಂದು ಸಿಕ್ಕಿದ್ದರ ಬಗ್ಗೆ ಪದ್ಮಜಾ ಹೇಳಿಕೊಂಡಿದ್ದಾರೆ. ನಮ್ಮದು ಅಂತಾ ಹಣೆಯಲ್ಲಿ ಬರೆದಿದ್ದರೆ ಅದು ನಮಗೆ ಸಿಕ್ಕೆ ಸಿಗುತ್ತೆ ಅನ್ನೋದಕ್ಕೆ ನಾನೇ ಸಾಕ್ಷಿ ಎಂದು ಉದಾಹರಣೆ ನೀಡಿದ್ದಾರೆ. ಇನ್ನೂ ಈ ಪಾತ್ರ ಸಿಕ್ಕ ನಂತರ ಕುಸುಮಾ ಪಾತ್ರಕ್ಕೆ ಮನಸಾರೆ ಪ್ರೀತಿ ಕೊಟ್ಟಿದ್ದಾರೆ. ಹೋಗಿದ ಕಡೆಯಲ್ಲಾ ಚಿಕ್ಕ ಚಿಕ್ಕ ಮಕ್ಕಳಿಂದ ಗುರುತು ಹಿಡಿತಿದ್ದಾರೆ ಅಂತ ಖುಷಿಯಿಂದ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ ಪದ್ಮಜಾ ರಾವ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನನಗೆ ಕುಸುಮಾ ಪಾತ್ರ ಸಿಕ್ಕಿದ್ದೆ ಬಲು ರೋಚಕ; ಈ ಕುರಿತು ನಟಿ ಪದ್ಮಜಾ ರಾವ್ ಹೇಳಿದ್ದೇನು..?

https://newsfirstlive.com/wp-content/uploads/2023/07/bhagyalaxmi.jpg

Load More