ಹಿಂದೂ ದೇಗುಲಗಳೇ ಟಾರ್ಗೆಟ್, ಏನ್ ನಡೀತಿದೆ ಪಾಕ್ನಲ್ಲಿ..?
4280 ಹಿಂದೂ ದೇಗುಲಗಳ ಪೈಕಿಯಲ್ಲಿ ಈಗ ಉಳಿದಿರೋದೆಷ್ಟು..?
ಬೆಚ್ಚಿ ಬೀಳಿಸ್ತಿದೆ ಸರ್ವೆ ಒಂದರ ಭಯಾನಕ ಮಾಹಿತಿ..!
ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂ ಸಮುದಾಯಕ್ಕೆ ಮತ್ತೆ ಶಾಕ್ ಆಗಿದೆ. ಅಲ್ಲಿರುವ ಹಿಂದೂ ದೇಗುಲಗಳ ಮೇಲೆ ನಡೆಯುತ್ತಿರುವ ದಾಳಿ ಮತ್ತೆ ಮುಂದುವರಿದಿದ್ದು, ಕಳೆದ ಎರಡು ದಿನಗಳ ಅಂತರದಲ್ಲಿ ಎರಡು ದೇವಾಲಯಗಳ ಮೇಲೆ ಅಟ್ಯಾಕ್ ಮಾಡಿದ್ದಾರೆ. ಇದರಿಂದ ಪಾಕಿಸ್ತಾನದಲ್ಲಿರುವ ಹಿಂದೂ ಕಮ್ಯುನಿಟಿ ಆತಂಕಕ್ಕೆ ಸಿಲುಕಿದೆ.
ಕರಾಚಿಯ ಸೋಲ್ಜರ್ ಬಜಾರ್ ಬಳಿಯಿರುವ 150 ವರ್ಷಗಳ ಹಳೆಯದಾದ ‘ಮಾರಿ ಮಾತಾ ದೇವಾಲಯ’ದ ಮೇಲೆ ಬುಲ್ಡೋಜರ್ ಹತ್ತಿಸಿ ಧ್ವಂಸ ಮಾಡಿದ್ದಾರೆ. ಕಳೆದ ಶುಕ್ರವಾರ ರಾತ್ರಿ, ಬುಲ್ಡೋಜರ್ ಜೊತೆ ನುಗ್ಗಿದ ಗ್ಯಾಂಗ್ ಒಂದು, ಗುಡಿಯ ಎಲ್ಲ ವಿನ್ಯಾಸಗಳನ್ನು ಹೊಡೆದು ಹಾಕಿ ನೆಲಸಮ ಮಾಡಿದೆ.
ಪೊಲೀಸ್ ಭದ್ರತೆಯಲ್ಲಿ ಅಟ್ಯಾಕ್
ದೇವಾಲಯಕ್ಕೆ ನುಗ್ಗುವ ಮೊದಲು ಸುತ್ತಲಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿಕೊಂಡಿತ್ತು. ಪೊಲೀಸ್ ಭದ್ರತೆಯಲ್ಲಿ ದೇವಾಲಯವನ್ನು ನೆಲಸಮಗೊಳಸಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ, ದೇವಾಲಯವಿದ್ದ ಜಾಗದ ಹೆಸರಲ್ಲಿ ಕೆಲವು ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ದೇವಾಲಯವು ಸುಮಾರು 400 ರಿಂದ 500 ಚದರ್ ಅಡಿಯಷ್ಟು ವಿಸ್ತಾರದಲ್ಲಿತ್ತು. ಹೀಗಾಗಿ ಕೆಲವು ದುಷ್ಕರ್ಮಿಗಳು ಹಣದಾಸೆಗಾಗಿ ಸ್ಥಳವನ್ನು ಬೇರೆಯವರಿಗೆ ಮಾರಿದ್ದಾರೆ. ಆ ಸ್ಥಳ ಖರೀದಿ ಮಾಡಿದವರು ಹೊಸ ಕಾಂಪ್ಲೆಕ್ಸ್ ನಿರ್ಮಾಣ ಮಾಡಬೇಕೆಂದು ದೇವಾಲಯವನ್ನು ನೆಲ ಸಮಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಡೆಮಾಲಿಶ್ ಬಗ್ಗೆ ಸುಳಿವೇ ಕೊಟ್ಟಿಲ್ಲ
ದೇವಾಲಯ ಕಡೆಗುವುದರ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಅಲ್ಲಿರುವ ಸ್ಥಳೀಯರ ಗಮನಕ್ಕೆ ತರದೇ ಏಕಾಏಕಿ ನೆಲಸಮ ಮಾಡಿದ್ದಾರೆ ಎಂದು ಹಿಂದೂ ಕಮ್ಯುನಿಟಿಯ ರಾಮನಾಥ್ ಮಿಶ್ರಾ ಮಹರಾಜ್ ಹೇಳಿದ್ದಾರೆ. ಇವರು ಅದೇ ಏರಿಯಾದಲ್ಲಿರುವ ‘ಪಂಚ್ ಮುಖಿ ಹನುಮಾನ್ ಮಂದಿರ್’ ದೇಗುಲದ ಕೇರ್ ಟೇಕರ್ ಆಗಿದ್ದಾರೆ.
ಪಾಕಿಸ್ತಾನದಲ್ಲಿರುವ ಹಿಂದೂ ಕಮ್ಯುನಿಟಿಯ ನಾಯಕ ರಮೇಶ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಡೆಮಾಲಿಶ್ ಮಾಡುವ ದೇಗುಲದ ಮೇಲೆ ಭೂಗಳ್ಳರ ಕಣ್ಣಿತ್ತು. ಅನೇಕ ಬಾರಿ ಬೇರೆ ಕಡೆ ಸ್ಥಳಾಂತರ ಮಾಡುವಂತೆ ಆಡಳಿತ ಮಂಡಳಿಗೆ ಪ್ರೆಸರ್ ಹಾಕಿದ್ದರು. ಹಣಕ್ಕಾಗಿ ಇಂತಹ ಕೆಲಸಕ್ಕೆ ಈಗ ಕೈಹಾಕಿದ್ದಾರೆ. ಈ ಸಂಬಂಧ ದೂರು ನೀಡಿದ್ದೇವೆ. ಕರಾಚಿಯಲ್ಲಿರುವ ಅನೇಕ ದೇಗುಲಗಳು ಈಗಾಗಲೇ ನೆಲಸಮಗೊಂಡಿವೆ ಎಂದು ರಮೇಶ್ ತಿಳಿಸಿದ್ದಾರೆ.
ರಾಕೆಟ್ ದಾಳಿ
ಈ ದೇಗುಲ ಧ್ವಂಸ ಮಾಡಿದ ಎರಡೇ ದಿನಗಳ ಅಂತರದಲ್ಲಿ ಮತ್ತೊಂದು ವಿಧ್ವಂಸಕ ಕೃತ್ಯ ನಡೆದಿದೆ. ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿದ್ದ ಚಿಕ್ಕ ದೇಗುಲದ ಮೇಲೆ ರಾಕೆಟ್ ದಾಳಿ ಮಾಡಿ ಒಡೆದು ಹಾಕಿದ್ದಾರೆ. 9 ಮಂದಿ ಶಸ್ತ್ರಸಜ್ಜಿತರಾಗಿ ಬಂದು ರಾಕೆಟ್ ಮಾದರಿಯಲ್ಲಿ ಸ್ಫೋಟಗೊಳಿಸಿ ಧ್ವಂಸ ಮಾಡಿದ್ದಾರೆ.
ಇದನ್ನೂ ಓದಿ: ಪಾಪಿ ಪಾಕಿಸ್ತಾನ್! ರಾಕೆಟ್ ಉಡಾಯಿಸಿ ಹಿಂದೂ ದೇಗುಲ ಧ್ವಂಸ; ಎರಡು ದಿನಗಳ ಅಂತರದಲ್ಲಿ ಇದು ಎರಡನೇ ಪ್ರಕರಣ
ಏನ್ ಹೇಳ್ತಿದೆ ಸರ್ವೇ..?
ಪಾಕಿಸ್ತಾನದಲ್ಲಿರುವ All Pakistan Hindu Rights Movement ನಡೆಸಿದ ಒಂದು ಸಮೀಕ್ಷೆ ಪ್ರಕಾರ ಪಾಕ್ನಲ್ಲಿ ಪ್ರಮುಖವಾಗಿ ಒಟ್ಟು 4280 ಹಿಂದೂ ದೇಗುಲಗಳಿದ್ದವು. ಹಲವು ದಾಳಿಗಳಲ್ಲಿ 380 ದೇವಾಲಯಗಳು ಮಾತ್ರ ಉಳಿದುಕೊಂಡಿದ್ದವು. ನಂತರದ ದಿನಗಳಲ್ಲಿ ನಿರಂತರ ಹೋರಾಟ ನಡೆದ ಬಳಿಕ ಅವುಗಳ ಸಂಖ್ಯೆ 700ಕ್ಕೆ ಏರಿಕೆ ಆಗಿದೆ ಎಂದು ತಿಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
Pakistan🇵🇰
One More Visual Of Hindu Temple DemolitionThe ancient Hindu temple in Karachi, Pakistan was demolished with bulldozers
If the same thing is done with the mosques of India….? https://t.co/afBaVGXqLE pic.twitter.com/F6nrOkWxa5
— Izlamic Terrorist (@raviagrawal3) July 16, 2023