newsfirstkannada.com

ರಿಲೀಸ್​ ಆಗಿ ಮತ್ತೆ ಅರೆಸ್ಟ್​ ಆದ ಇಮ್ರಾನ್​ ಖಾನ್​! ಪಾಕ್​ ಮಾಜಿ ಪ್ರಧಾನಿ ಜೈಲಿಂದ ಹೊರ ಬರೋದೆ ಡೌಟ್​​

Share :

30-08-2023

    ತೋಶಖಾನಾ ವಂಚನೆ ಪ್ರಕರಣದಲ್ಲಿ ಇಮ್ರಾನ್​ ಖಾನ್​

    ರಹಸ್ಯ ದಾಖಲೆ ಸೋರಿಕೆ ಆರೋಪದಡಿ ಮತ್ತೆ ಜೈಲು

    ಇಸ್ಲಾಮಾಬಾದ್ ಹೈಕೋರ್ಟ್ ಮಹತ್ವದ ಆದೇಶ

ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್​ಗೆ ಸಮಸ್ಯೆ ತಪ್ಪುತ್ತಲೇ ಇಲ್ಲ. ಹೋದ್ಯಾ ಪಿಶಾಚಿ ಅಂದ್ರೆ ಬಂದ್ರೆ ಗವಾಕ್ಷಿ ಅನ್ನೋ ಥರ ಮರಳಿ ವಕ್ಕರಿಸ್ತಿದೆ. ಈ ಹಿಂದೆ ತೋಶಖಾನಾ ವಂಚನೆ ಪ್ರಕರಣದಲ್ಲಿ ತಗಲಾಕಿಕೊಂಡು ಜೈಲು ಸೇರಿದ್ದ ಇಮ್ರಾನ್ ಖಾನ್, ಇಸ್ಲಾಮಾಬಾದ್ ಹೈಕೋರ್ಟ್ ತೀರ್ಪಿನ ಬಳಿಕ ಬಿಡುಗಡೆ ಆದೇಶ ಹೊರಡಿಸಿತ್ತು. ಆದರೆ ರಹಸ್ಯ ದಾಖಲೆ ಸೋರಿಕೆ ಆರೋಪದಡಿ ಮತ್ತೊಮ್ಮೆ ಇಮ್ರಾನ್‌ಗೆ ಜೈಲು ದರ್ಶನವಾಗಿದೆ. ‘

ಸದ್ಯ, ಇಮ್ರಾನ್ ಖಾನ್ ವಿರುದ್ಧ ಪಾಕಿಸ್ತಾನದಲ್ಲಿ ನೂರಕ್ಕು ಹೆಚ್ಚು ಕೇಸ್‌ಗಳು ದಾಖಲಾಗಿವೆ. ಈ ಕಾರಣಕ್ಕೆ ಇಮ್ರಾನ್ ಯಾವಾಗ ಬೇಕಾದರೂ ಜೈಲು ಸೇರಬಹುದು ಎಂಬ ಸ್ಥಿತಿ ಇದೆ. ಈಗ ಮತ್ತೊಮ್ಮೆ ಈ ಮಾತು ಪ್ರೂವ್ ಆಗಿದೆ. ಇಮ್ರಾನ್ ಮೇಲೆ ದಾಖಲಾಗಿರುವ ಕೇಸ್‌ಗಳಲ್ಲೇ ಇದು ಅತಿ ಭಯಾನಕ ಮತ್ತು ಕಠಿಣ ಪ್ರಕರಣ ಎಂದು ವಿಶ್ಲೇಷಿಸಲಾಗಿದೆ.

ಇನ್ನು ತೋಶಖಾನಾ ವಂಚನೆ ಪ್ರಕರಣದಲ್ಲಿ ತಗಲಾಕಿಕೊಂಡಿದ್ದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಇಸ್ಲಾಮಾಬಾದ್ ಜಿಲ್ಲಾ ಮತ್ತು ಸೆಷನ್ಸ್ ​ಕೋರ್ಟ್ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಬಳಿಕ ಇಸ್ಲಾಮಾಬಾದ್ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿ ಇಮ್ರಾನ್ ಖಾನ್​ನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿತ್ತು. ಆದರೆ ಇದೀಗ ಮತ್ತೊಮ್ಮೆ ಇಮ್ರಾನ್​ ಖಾನ್​ ಕಂಬಿಸುತ್ತುಂತೆ ಆಗಿದೆ.

ಇಮ್ರಾನ್ ಖಾನ್ ಮುಂಬರುವ ಚುನಾವಣೆಗೆ ನಿಲ್ಲುವ ಯೋಚನೆ ಮಾಡಿಕೊಂಡಿದ್ದರು. ಆದರೆ ಅವರ ಮೇಲಿನ ಪ್ರಕರಣಗಳ ಲೆಕ್ಕ ಕಂಡಾಗ ಚುನಾವಣೆಗೆ ನಿಲ್ಲೋದು ಅನುಮಾನ ಕಾಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಿಲೀಸ್​ ಆಗಿ ಮತ್ತೆ ಅರೆಸ್ಟ್​ ಆದ ಇಮ್ರಾನ್​ ಖಾನ್​! ಪಾಕ್​ ಮಾಜಿ ಪ್ರಧಾನಿ ಜೈಲಿಂದ ಹೊರ ಬರೋದೆ ಡೌಟ್​​

https://newsfirstlive.com/wp-content/uploads/2023/08/Imran-Khan.jpg

Load More