newsfirstkannada.com

ಕೊಹ್ಲಿ ವಿರುದ್ಧ ಗಂಭೀರ ಆರೋಪ ಮಾಡಿದ ಪಾಕ್​ ಕ್ರಿಕೆಟರ್.. ಸ್ಟೋರಿ ಓದಿದ್ರೆ ಶಾಕ್​ ಆಗ್ತೀರಾ!​

Share :

Published July 3, 2024 at 7:29pm

Update July 3, 2024 at 7:44pm

  ವಿರಾಟ್​ ಕೊಹ್ಲಿ ಒತ್ತಡದ ಪಂದ್ಯಗಳಿಗಾಗಿ ಹುಡುಕುತ್ತಾರೆ ಎಂದ ಪಾಕ್​ ಮಾಜಿ ಕ್ರಿಕೆಟರ್​​

  ಯಾವಾಗಲೂ ಜವಾಬ್ದಾರಿ ತೆಗೆದುಕೊಂಡು ಪಂದ್ಯ ಗೆಲ್ಲಿಸೋದು ಕೊಹ್ಲಿಗೆ ಬಹಳ ಇಷ್ಟ!

  ಗೆಲ್ಲಿಸಿದ್ರೆ ಸೂಪರ್​ ಸ್ಟಾರ್​ ಆಗ್ತೀನಿ ಅನ್ನೋದು ಕೊಹ್ಲಿ ಪ್ಲಾನ್​ ಎಂದ ಶೋಯೆಬ್ ಅಖ್ತರ್

ಇತ್ತೀಚೆಗೆ ನಡೆದ ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​ ಫೈನಲ್​ನಲ್ಲಿ ಸೌತ್​ ಆಫ್ರಿಕಾ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಈ ಮೂಲಕ ಬರೋಬ್ಬರಿ 17 ವರ್ಷಗಳ ಬಳಿಕ ಟೀಮ್​ ಇಂಡಿಯಾ ಟಿ20 ವಿಶ್ವಕಪ್​ ಗೆದ್ದಿದೆ. ಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಪರ ವಿರಾಟ್​ ಕೊಹ್ಲಿ 76 ರನ್​ ಸಿಡಿಸಿ ಮ್ಯಾನ್​ ಆಫ್​ ದಿ ಮ್ಯಾಚ್​​ ಅವಾರ್ಡ್​​ ಪಡೆದುಕೊಂಡರು.

ಟೀಮ್​ ಇಂಡಿಯಾ ಗೆಲ್ಲಲು ಒಂದು ರೀತಿ ಕೊಹ್ಲಿಯೇ ಕಾರಣ ಎಂದರು ತಪ್ಪಾಗಲಾರದು. ನಾಕೌಟ್​​ ಸ್ಟೇಜ್​ ಪಂದ್ಯಗಳಲ್ಲಿ ಫೇಲ್ಯೂರ್​ ಆದ ಕೊಹ್ಲಿ ಫೈನಲ್​​ ಮ್ಯಾಚ್​​ನಲ್ಲಿ ಮಹತ್ವದ 76 ರನ್​ಗಳ ಕಲೆ ಹಾಕಿದ್ರು. ಇವರ ಬಗ್ಗೆ ಈಗ ಪಾಕ್​ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಮಾತಾಡಿದ್ದಾರೆ.

ವಿರಾಟ್​ ಕೊಹ್ಲಿ ಸೂಪರ್​ ಸ್ಟಾರ್​​. ಎರಡು ರೀತಿ ಬ್ಯಾಟರ್​ಗಳು ಇರುತ್ತಾರೆ. ಒಬ್ಬರು ಟೀಮ್​ ಸಂಕಷ್ಟಕ್ಕೆ ಸಿಲುಕಿದಾಗ ಎಸ್ಕೇಪ್​ ಆಗೋರು, ಮತ್ತೊಬ್ಬರು ಜವಾಬ್ದಾರಿ ತೆಗೆದುಕೊಂಡು ಗೆಲ್ಲಿಸೋರು. ಈ ಪೈಕಿ ಕೊಹ್ಲಿ ಜವಾಬ್ದಾರಿ ತೆಗೆದುಕೊಂಡು ಗೆಲ್ಲಿಸೋ ಟೀಮ್​ನಲ್ಲಿ ಗುರುತಿಸಿಕೊಳ್ಳುತ್ತಾರೆ ಎಂದರು.

ಯಾವಾಗಲೂ ಬಹಳ ಒತ್ತಡ ಇರೋ ಪಂದ್ಯಕ್ಕಾಗಿ ಹುಡುಕುತ್ತಲೇ ಇರುತ್ತಾರೆ. ಮೆಲ್ಬೋರ್ನ್​ನಲ್ಲಿ ನಡೆದ ಪಾಕ್​ ವಿರುದ್ಧ ಪಂದ್ಯದಲ್ಲೂ ಕೊಹ್ಲಿ ಆ ಸಂದರ್ಭಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಅಂದು ಗೆಲ್ಲಿಸಿದ್ರೆ ನಾನು ಸೂಪರ್​ ಸ್ಟಾರ್​ ಆಗ್ತೀನಿ. ದುಡ್ಡು ಬರುತ್ತೆ, ಸೋಷಿಯಲ್​ ಮೀಡಿಯಾ ನಂದು ಅನ್ನೋ ಅರಿವು ಕೊಹ್ಲಿಗೆ ಇತ್ತು. ಆದ್ದರಿಂದಲೇ ಅಂದು ಪಂದ್ಯ ಗೆಲ್ಲಿಸಿದ್ರು. ದೇವರು ಕೂಡ ಕೊಹ್ಲಿಗೆ ಸಾಥ್​ ಕೊಟ್ಟರು ಎಂದರು.

ಇದನ್ನೂ ಓದಿ: ‘ಭಾರತ ವಿಶ್ವಕಪ್​​ ಗೆಲ್ಲಲು ಕೊಹ್ಲಿ ಮಾತ್ರ ಕಾರಣವಲ್ಲ’- ಮತ್ತೆ ನಾಲಿಗೆ ಹರಿಬಿಟ್ಟ ಅಂಬಾಟಿ ರಾಯುಡು!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿ ವಿರುದ್ಧ ಗಂಭೀರ ಆರೋಪ ಮಾಡಿದ ಪಾಕ್​ ಕ್ರಿಕೆಟರ್.. ಸ್ಟೋರಿ ಓದಿದ್ರೆ ಶಾಕ್​ ಆಗ್ತೀರಾ!​

https://newsfirstlive.com/wp-content/uploads/2024/06/VIRAT_KOHLI_1.jpg

Load More