newsfirstkannada.com

ಹೈವೋಲ್ಟೇಜ್​ ಪಂದ್ಯಕ್ಕೆ ಕೌಂಟ್​ಡೌನ್​.. ಭಾರತ-ಪಾಕ್ ಪಂದ್ಯದಲ್ಲಿ ಗೆಲ್ಲುವ ಫೇವರಿಟ್ ಟೀಮ್ ಯಾವುದು?

Share :

02-09-2023

    ಪಂದ್ಯ ನಡೆಯುವ ಶ್ರೀಲಂಕಾದ ಸ್ಟೇಡಿಯಂ ಯಾವುದು?

    ಪಾಕ್​-ಭಾರತ ಮ್ಯಾಚ್​ಗೆ ಮಳೆ ಬರೋ ಸಾಧ್ಯತೆ ಹೆಚ್ಚಿದೆ

    ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಪಾಕ್ ರಣತಂತ್ರ

ಭಾರತ-ಪಾಕ್​ ಮ್ಯಾಚ್ ಎಂದರೆ ವಿಶ್ವದ ಕ್ರಿಕೆಟ್​ ಅಭಿಮಾನಿಗಳಿಗೆ ಅದು ಏನೋ ಒಂದು ರೀತಿ ಕೌತುಕ. ಹೇಗಾದ್ರೂ ಮಾಡಿ ಮ್ಯಾಚ್ ನೋಡಲೇಬೇಕು ಎಂದು ಕಾದು ಕುಳಿತಿರುತ್ತಾರೆ. ಈ ಮೊದಲೇ ಪಾಕ್​ ವಿರುದ್ಧ ಆಡಿದ ಬಹುತೇಕ ಪಂದ್ಯಗಳಲ್ಲಿ ಟೀಮ್ ಇಂಡಿಯಾನೇ ವಿನ್ ಆಗಿರುವುದು ಹೆಚ್ಚು. ಅದೇ ರೀತಿ ಇಂದಿನ ಪಂದ್ಯವನ್ನು ಭಾರತ ಗೆಲ್ಲುವ ಫೇವರಿಟ್ ಎನಿಸಿದೆ. ಆದರೂ ಪಾಕಿಸ್ತಾನದ ಆಟಗಾರರನ್ನು ಕಡೆಗಣಿಸುವಂತಿಲ್ಲ. ಏಕೆಂದರೆ ಇತ್ತೀಚೆಗೆ ಬಾಬಾರ್ ಅಝಂ ಸಾರಥ್ಯದಲ್ಲಿ ಟೀಮ್​ ಸಾಕಷ್ಟು ಬಲಿಷ್ಠವಾಗಿದೆ. ಇದೆಲ್ಲದರ ನಡುವೆ ಈ ಹಿಂದೆ ವಿರಾಟ್ ಕೊಹ್ಲಿ ಭಾರತವನ್ನು ಗೆಲ್ಲಿಸಿಕೊಟ್ಟಿದ್ದ ಪಂದ್ಯದ ಸೇಡು ತೀರಿಸಿಕೊಳ್ಳಲು ಪಾಕ್​ ಹವಣಿಸುತ್ತಿದೆ.

ಶ್ರೀಲಂಕಾದ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಹೈವೋಲ್ಟೇಜ್​ ಮ್ಯಾಚ್​ ನಡೆಯಲಿದೆ. ಭಾರತ 2023ರ ಏಷ್ಯಾಕಪ್​ ಟೂರ್ನಿಯ ಮೊದಲ ಪಂದ್ಯವನ್ನೇ ಬದ್ಧವೈರಿ ಪಾಕ್​ ವಿರುದ್ಧ ಆಡುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಇನ್ನಷ್ಟು ಇಮ್ಮಡಿಗೊಳಿಸಿದೆ. ಟೀಮ್ ಇಂಡಿಯಾ ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುನ್ನಡೆದರೆ, ಪಾಕ್ ಬಾಬಾರ್ ಅಝಂ ಸಾರಥ್ಯದಲ್ಲಿ ಕಣಕ್ಕೆ ಇಳಿಯಲಿದೆ.

ಭಾರತ-ಪಾಕ್ ನಡುವಿನ ಪಂದ್ಯಕ್ಕೆ ಅಭಿಮಾನಿಗಳ ವೇಷ

ಭಾರತ-ಪಾಕ್​ನ ಕಳೆದ ಕೆಲ ಮ್ಯಾಚ್​ಗಳನ್ನು ಗಮನಿಸಿದರೆ ಭಾರತಕ್ಕೆ ಪಾಕ್​ ಕಠಿಣ ಪೈಪೋಟಿ ನೀಡುತ್ತ ಬರುತ್ತಿದೆ. ನೇಪಾಳ ವಿರುದ್ಧದ ಪಂದ್ಯದಲ್ಲಿ ಪಾಕ್​ನ ಇಬ್ಬರು ಬ್ಯಾಟ್ಸ್​ಮನ್​ಗಳು ಸೆಂಚುರಿ ಬಾರಿಸಿದ್ದರು. ಅಲ್ಲದೇ ಬೃಹತ್​ ರನ್​ಗಳನ್ನು ಕೂಡ ಕಲೆ ಹಾಕಿದ್ದರು. ಹೀಗಾಗಿ ಟೀಮ್​ ಇಂಡಿಯಾ ಆಟಗಾರರು ಎಚ್ಚರಿಕೆಯಿಂದ ಪಾಕ್​ ಅನ್ನು ಸದೆಬಡಿಯಬೇಕಿದೆ. ಇದಕ್ಕೆ ಈಗಾಗಲೇ ಸಾಕಷ್ಟು ತಯಾರಿ ಮಾಡಿಕೊಂಡರು ಮೈದಾನದಲ್ಲಿ ಆಡುವಾಗ ಸಾಕಷ್ಟು ಧೈರ್ಯ ಬೇಕಾಗುತ್ತದೆ. ಏಕೆಂದರೆ ಭಾರತ-ಪಾಕ್ ಪಂದ್ಯವೆಂದರೆ ಅಭಿಮಾನಿಗಳಿಗೆ ಅಷ್ಟೇ ಅಲ್ಲ, ಮೈದಾನದಲ್ಲಿ ಇರುವ ಪ್ಲೇಯರ್ಸ್​ ಹೃದಯ ಬಡಿತ ಕೂಡ ವೇಗ ಹೆಚ್ಚಿಸಿಕೊಳ್ಳುತ್ತದೆ.

ಈಗಾಗಲೇ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನೇಪಾಳ ವಿರುದ್ಧ ಬ್ಯಾಟ್​ ಬೀಸಿರುವ ಪಾಕ್​ ಬೃಹತ್ ರನ್ ಕಲೆ ಹಾಕಿತ್ತು. ಮತ್ತೆ ಅದೇ ಹಾದಿಯಲ್ಲಿ ಪಾಕ್ ಮುಂದಾಗಬಹುದು. ಅಲ್ಲದೇ ಇವತ್ತಿನ ಪಾಕ್​ ವಿರುದ್ಧದ ಪಂದ್ಯಕ್ಕೆ ಮಳೆ ಆಗುವ ಚಾನ್ಸ್​ ಇದೆ ಎಂದು ಹೇಳಲಾಗುತ್ತಿದೆ. ಇದೆಲ್ಲದಕ್ಕೂ ಪಂದ್ಯ ಆರಂಭವಾದ ಮೇಲೆಯೇ ಉತ್ತರ ಸಿಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಹೈವೋಲ್ಟೇಜ್​ ಪಂದ್ಯಕ್ಕೆ ಕೌಂಟ್​ಡೌನ್​.. ಭಾರತ-ಪಾಕ್ ಪಂದ್ಯದಲ್ಲಿ ಗೆಲ್ಲುವ ಫೇವರಿಟ್ ಟೀಮ್ ಯಾವುದು?

https://newsfirstlive.com/wp-content/uploads/2023/07/KOHLI_BABAR_BATTING.jpg

Load More