ಟೀಮ್ನಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಫೇಸರ್ ಶಾಹೀನ್ ಆಫ್ರಿದಿ
ವಿಕೆಟ್ ಒಪ್ಪಿಸದೇ ಸೆಂಚುರಿ ಸಿಡಿಸಿ, ಆಟ ಮುಗಿಸಿದ ಕೊಹ್ಲಿ, ರಾಹುಲ್
ಕುಲ್ದೀಪ್ ಸ್ಪಿನ್ ಜಾಲಕ್ಕೆ ಬಳ.. ಬಳ ಉದುರಿದ ಪಾಕ್ ಬ್ಯಾಟ್ಸ್ಮನ್ಸ್
2023ರ ಏಷ್ಯಾಕಪ್ ಟೂರ್ನಿಯ ಸೂಪರ್-4 ಪಂದ್ಯದಲ್ಲಿ ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡವು ಪಾಕ್ ಪಡೆಯನ್ನು ಧೂಳಿಪಟ ಮಾಡಿದೆ. ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿಯ ಮನಮೋಹಕವಾದ ಸೆಂಚುರಿಯಿಂದ ಭಾರತ ತಂಡ ಪಾಕ್ ವಿರುದ್ಧ ಬೃಹತ್ ರನ್ ಪೇರಿಸಿತು. 50 ಓವರ್ಗಳಲ್ಲಿ ಬರೋಬ್ಬರಿ 356 ರನ್ಗಳನ್ನು ಕಲೆ ಹಾಕಿತ್ತು. ಆದ್ರೆ ಪಾಕ್ ಮಾತ್ರ ಕುಲ್ದೀಪ್ ಸ್ಪಿನ್ ಮೋಡಿಗೆ ಅಲ್ಪ ಮೊತ್ತಕ್ಕೆ ಆಲೌಟ್ ಆಗೋ ಮೂಲಕ ಸೋಲೋಪ್ಪಿಕೊಂಡಿತು.
ನಿನ್ನೆಗೆ ಕ್ರೀಸ್ ಕಾಯ್ದುಕೊಂಡಿದ್ದ ಮಧ್ಯಕ ಕ್ರಮಾಂಕದ ಬ್ಯಾಟ್ಸ್ಮನ್ಗಳಾದ ವಿರಾಟ್ ಕೊಹ್ಲಿ ಹಾಗೂ ರಾಹುಲ್ ಅಕ್ಷರಶ ಮೈದಾನದಲ್ಲಿ ಸಾಮ್ರಾಟರಾಗಿ ಮೆರೆದರು. ಪಾಕ್ ಬೌಲರ್ಗಳನ್ನು ಒಬ್ಬರು ಬಿಟ್ಟರೇ ಇನ್ನೊಬ್ಬರು ಬೌಂಡರಿ ಬಾರಿಸೋ ಮೂಲಕ ಮನಸೋಯಿಚ್ಚೆ ದಂಡಿಸಿದರು. ಹೀಗಾಗಿ ರಾಹುಲ್ 106 ಎಸೆತಗಳಲ್ಲಿ 12 ಫೋರ್, 2 ಸಖತ್ ಸಿಕ್ಸರ್ನಿಂದ 111 ರನ್ಗಳನ್ನ ಬಾರಿಸಿದರು. ಇತ್ತ ರಾಹುಲ್ ಸೆಂಚುರಿ ಬಾರಿಸುತ್ತಿದ್ದಂತೆ ನೆಕ್ಸ್ಟ್ ಓವರ್ನಲ್ಲಿ ಕಿಂಗ್ ಕೊಹ್ಲಿ ಕೂಡ ಶತಕ ಸಿಡಿಸಿ ಸಂಭ್ರಮಿಸಿದರು. ವಿರಾಟ್ 94 ಬೌಲ್ಗಳಲ್ಲಿ 9 ಬೌಂಡರಿ, 3 ಅಮೋಘ ಸಿಕ್ಸರ್ನಿಂದ 122 ರನ್ ಸಿಡಿಸಿದರು.
ಭಾರತ-ಪಾಕ್ ನಡುವಿನ ಪಂದ್ಯವು ಸೆ.10 ರಂದು ಪ್ರಾರಂಭವಾಗಿದ್ದು ಭಾರತ ತಂಡ ಬ್ಯಾಟಿಂಗ್ ಮಾಡುವಾಗ ಮಳೆ ಸುರಿದಿತ್ತು. ಹೀಗಾಗಿ ರೀಸರ್ವ್ ಡೇಯನ್ನು ನಿನ್ನೆ ಅಂದರೆ ಸೆ.11ಕ್ಕೆ ಮುಂದೂಡಲಾಗಿತ್ತು. ಮೊದಲ ದಿನ ಅಬ್ಬರದ ಬ್ಯಾಟಿಂಗ್ ಮಾಡಿದ್ದ ಓಪನರ್ಸ್ ರೋಹಿತ್ ಮತ್ತು ಗಿಲ್ ತಲಾ ಒಂದು ಅರ್ಧಶತಕ ಸಿಡಿಸಿ ಔಟ್ ಆಗಿದ್ದರು. ಬಳಿಕ ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಆಗಮಿಸಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ನಿನ್ನೆಗೆ ಕ್ರೀಸ್ಗೆ ಕಾಯ್ದುಕೊಂಡು ಪಾಕ್ ಬೌಲರ್ಗಳನ್ನು ಸದೆಬಡಿದರು. ವಿಕೆಟ್ ಒಪ್ಪಿಸಿದೇ ಆಡಿದ ಈ ಇಬ್ಬರು ಶಾಹೀನ್ ಆಫ್ರಿದಿ (10 ಓವರ್ಸ್ 79 ರನ್), ಫಹೀಂ ಅಶ್ರಫ್ (10 ಓವರ್ಸ್ 74 ರನ್), ಶಾದಾಬ್ ಖಾನ್ (10 ಓವರ್ಸ್ 71 ರನ್) ಬೌಲಿಂಗ್ಗೆ ಮನ ಬಂದಂತೆ ಚಚ್ಚಿದರು. ಇದರಿಂದ ಇಡೀ ಪಂದ್ಯದಲ್ಲಿ ಈ ಮೂವರು ಅತ್ಯಧಿಕ ರನ್ಗಳನ್ನು ಬಿಟ್ಟುಕೊಟ್ಟರು.
ಭಾರತ 50 ಓವರ್ಗಳಲ್ಲಿ 356 ರನ್ಗಳನ್ನು ಕಲೆ ಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಪಾಕ್ ಯಾವುದೇ ಹಂತದಲ್ಲಿ ಪಂದ್ಯ ಗೆಲ್ಲುವ ಸೂಚನೆಯನ್ನೇ ನೀಡಲಿಲ್ಲ. ತಂಡದ ಮೊತ್ತ 47 ರನ್ ಇರುವಾಗ ಪ್ರಮುಖವಾದ 3 ವಿಕೆಟ್ಗಳನ್ನು ಕಳೆದುಕೊಂಡಿತು. ಓಪನರ್ ಆದ ಫಖರ್ ಜಮಾನ್ ಅವರ 27 ರನ್ಗಳ ಮಾತ್ರ ತಂಡದ ಪರ ಅಧಿಕ ರನ್ ಎನಿಸಿತು. ಉಳಿದವಱರು 25 ರನ್ಗಳ ಗಡಿಯನ್ನ ದಾಟಲಿಲ್ಲ. ಭಾರತದ ಪರ ಕುಲ್ದೀಪ್ ಯಾದವ್ ಮಿಂಚಿನ ಸ್ಪಿನ್ ಬೌಲಿಂಗ್ ಮಾಡುವ ಮೂಲಕ 8 ಓವರ್ಗಳಲ್ಲಿ ಕೇವಲ 25 ರನ್ ನೀಡಿ ಪ್ರಮುಖವಾದ 5 ವಿಕೆಟ್ಗಳನ್ನು ಕಬಳಿಸಿದರು. ಹೀಗಾಗಿ ಪಾಕಿಸ್ತಾನ್ 32 ಓವರ್ಗಳಲ್ಲಿ 128 ರನ್ಗೆ ತನ್ನೆಲ್ಲಾ ವಿಕೆಟ್ಗಳನ್ನ ಕಳೆದುಕೊಂಡು ಹೀನಾಯವಾಗಿ ಸೋತಿದೆ. ನೇಪಾಳ ವಿರುದ್ಧ ಅಬ್ಬರಿಸಿದ್ದ ಪಾಕ್ ಭಾರತದ ಜೊತೆಗೆ ಮಕಾಡೆ ಮಲಗಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ