ಪಾಕ್ ಬಾಬರ್ ಪಡೆಯ ಹೆಡೆಮುರಿ ಕಟ್ಟಲು ರೋಹಿತ್ ಟೀಮ್ ರೆಡಿ
ಕೊಲಂಬೋದಲ್ಲಿ ಭಾರತದಿಂದ ಪಾಕ್ಗೆ ಕಾದಿದೆಯಾ ಮಾರಿಹಬ್ಬ..!
ಇವತ್ತಿನ ಹೈವೋಲ್ಟೇಜ್ ಮ್ಯಾಚ್ನಲ್ಲಿ ಕಿಂಗ್ ಕೊಹ್ಲಿ ಮೇಲೆ ಎಲ್ಲರ ಕಣ್ಣು
ಒಂದು ವಾರದ ಬಳಿಕ ಇಂಡೋ-ಪಾಕ್ ತಂಡಗಳು ಮತ್ತೆ ಕಾದಾಡಲು ಸಜ್ಜಾಗಿವೆ. ಇಂದು ಕೊಲಂಬೋದಲ್ಲಿ ಬದ್ಧವೈರಿಗಳು ಮುಖಾಮುಖಿ ಆಗಲಿದ್ದಾರೆ. ರೋಹಿತ್ ಪಡೆಗೆ ಪ್ಲೇಯಿಂಗ್-11 ಆಯ್ಕೇನೆ ಕಗ್ಗಂಟಾಗಿದೆ. ಉಭಯ ತಂಡಗಳ ಸ್ಟ್ರೆಂಥ್ & ವೀಕ್ನೆಸ್ ಏನು?.
ಪಾಕ್ ಲೆಕ್ಕಚಾರ ಉಲ್ಟಾಮಾಡ್ತಾವಾ ಆ ಎರಡು ವೆಪನ್ಸ್?
INTENTION, PASSION, EMOTION, AGGRESION, TENSION ಮತ್ತು EPIC SHOW.. ಈ ಎಲ್ಲವನ್ನ ಕಣ್ತುಂಬಿಕೊಳ್ಳುವ ಆ ಬಿಗ್ ಮೂಮೆಂಟ್ ಬಂದೇ ಬಿಡ್ತು. ಏಷ್ಯಾಕಪ್ ಸೂಪರ್-4 ನಲ್ಲಿ ಬದ್ಧವೈರಿ ಇಂಡೋ-ಪಾಕ್ ಸೆಣಸಾಡಲಿವೆ. ಗ್ರೂಪ್ ಸ್ಟೇಜ್ ಮ್ಯಾಚ್ ಮಳೆಯಿಂದ ರದ್ದಾಗಿತ್ತು. ಹಾಗಾಗಿ ಅಸಲಿ ಆಟ ಇರೋದೆ ಇಂದು. ಕೊಲಂಬೋ ಸ್ಟೇಡಿಯಂ ಇಂದು ಅಕ್ಷರಶಃ ರಣರಂಗವಾಗಿರಲಿದೆ.
ಉಭಯ ತಂಡಕ್ಕೂ ಗೆಲುವೇ ಮುಖ್ಯ. ಸೋಲು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಎಷ್ಟೇ ಕಷ್ಟ ಆದರೂ ಸೈ ಬದ್ಧವೈರಿ ಸೋಲಿಸಿಯೇ ತೀರಲು ರೋಹಿತ್ ಆ್ಯಂಗ್ ಗ್ಯಾಂಗ್ ಪಣತೊಟ್ಟಿದೆ. ಅದಕ್ಕಾಗಿ ನೆಟ್ಸ್ನಲ್ಲಿ ಇನ್ನಿಲ್ಲದ ಬೆವರು ಹರಿಸಿದೆ. ಎದುರಾಳಿ ತಂಡದ ಸ್ಟ್ರೆಂಥ್ & ವೀಕ್ನೆಸ್ ಚೆನ್ನಾಗಿ ಸ್ಟಡಿ ಮಾಡಿದ್ದು, ಖೆಡ್ಡಾಗೆ ಬೀಳಿಸೊದೊಂದೇ ಬಾಕಿ.
ಕೊಲಂಬೋ ಕಿಂಗ್ ಕೊಹ್ಲಿಗೆ ಫೇವರಿಟ್ ಗ್ರೌಂಡ್
ಪಂದ್ಯ ಆರಂಭಕ್ಕೂ ಮುನ್ನವೇ ಪಾಕ್ಗೆ ಕಿಂಗ್ ಕೊಹ್ಲಿ ಭೀತಿ ಶುರುವಾಗಿದೆ. ಯಾಕಂದ್ರೆ ಕೊಲಂಬೋ ಕೊಹ್ಲಿಯ ಫೇವರಿಟ್ ಸ್ಟೇಡಿಯಂ. ಲಾಸ್ಟ್ 3 ಇನ್ನಿಂಗ್ಸ್ನಲ್ಲಿ ಸೆಂಚುರಿ ಸಿಡಿಸಿದ್ದು ಪಾಕ್ ಬೇಟೆಗೂ ಕೊಹ್ಲಿ ಸರ್ವ ಸನ್ನದ್ಧರಾಗಿದ್ದಾರೆ.
ಬಿಗ್ ವೆಪನ್ ರಾಹುಲ್-ಬೂಮ್ರಾ ಕಮ್ಬ್ಯಾಕ್..!
ಬಿಗ್ ವಾರ್ ಆರಂಭಕ್ಕೂ ಮುನ್ನ ಕೆ.ಎಲ್ ರಾಹುಲ್ ಹಾಗೂ ಜಸ್ಪ್ರಿತ್ ಬೂಮ್ರಾ ತಂಡ ಸೇರಿಕೊಂಡಿದ್ದಾರೆ. ಇದರಿಂದ ತಂಡಕ್ಕೆ ನೂರಾನೆ ಬಲ ಬಂದಂತಾಗಿದೆ. ಇನ್ನು ರಾಹುಲ್ ಆಗಮನದಿಂದ ಇಶಾನ್ ಕಿಶನ್ ಆಡ್ತಾರಾ, ಇಲ್ವ ಅನ್ನೋ ಪ್ರಶ್ನೆಯು ಎದ್ದಿದೆ. ಜತೆಗೆ ಬೂಮ್ರಾ ಆಡೋದು ಖಚಿತವಾಗಿದ್ದು, ಮೊಹಮ್ಮದ್ ಶಮಿ ಅಥವಾ ಶಾರ್ದುಲ್ ಠಾಕೂರ್ ಬೆಂಚ್ ಕಾಯಲಿದ್ದಾರೆ.
ಪಾಕ್ನ ಬಲಿಷ್ಠ ಬೌಲಿಂಗ್ ಕೋಟೆ ಛಿದ್ರಗೊಳಿಸುತ್ತಾ ಭಾರತ..?
ಟೀಮ್ ಇಂಡಿಯಾ ಇಂದು ಗೆಲ್ಲಬೇಕಾದ್ರೆ ಪಾಕ್ ತಂಡದ ಬಲಿಷ್ಠ ಬೌಲಿಂಗ್ ಪಡೆಯನ್ನ ದಿಟ್ಟವಾಗಿ ಎದುರಿಸಬೇಕಿದೆ. ಯಾಕಂದ್ರೆ ಮೊದಲ ಮುಖಾಮುಖಿಯಲ್ಲಿ ಭಾರತದ ಟಾಪ್ ಆರ್ಡರ್ ಫೇಲ್ಯೂರ್ ಕಂಡಿತ್ತು. ಪಂದ್ಯ ಆರಂಭಕ್ಕೂ ಮುನ್ನ ಮತ್ತೆ ಪಾಕ್ ಕ್ಯಾಪ್ಟನ್ ಬಾಬರ್ ಅಝಂ ಎಚ್ಚರಿಕೆ ನೀಡಿದ್ದಾರೆ.
ನಾವು ದೊಡ್ಡ ಟೂರ್ನಮೆಂಟ್ಗಳನ್ನ ಶರವೇಗಿಗಳಿಂದಲೇ ಗೆಲ್ಲುತ್ತೇವೆ. ಶ್ರೇಷ್ಠ ಬೌಲಿಂಗ್ ಪಡೆ ಹೊಂದಿದ್ದು ಪಾರಮ್ಯ ಸಾಧಿಸುತ್ತೇವೆ. ಬೌಲರ್ಸ್ ಉತ್ತಮ ಪ್ರದರ್ಶನ ನೀಡುತ್ತಾರೆ ಎನ್ನುವ ನಂಬಿಕೆ ನನಗಿದೆ.
ಬಾಬರ್ ಅಜಾಮ್, ಪಾಕ್ ಕ್ಯಾಪ್ಟನ್
ಇನ್ನು ಕಳೆದ ಪಂದ್ಯದಲ್ಲಾದ ಮಿಸ್ಟೇಕ್ಸ್ ಈ ಸಲ ಮರುಕಳಿಸಲ್ಲ. ಟಾಪ್ ಆರ್ಡರ್ಸ್ ಉತ್ತಮ ಆಟವಾಡಲಿದ್ದೇವೆ ಎಂದು ಎನ್ನುವ ಮೂಲಕ ಗಿಲ್ ಪಾಕ್ಗೆ ರಿಕೌಂಟರ್ ಕೊಟ್ಟಿದ್ದಾರೆ.
ಉತ್ತಮ ಆರಂಭ ಒದಗಿಸಿ ಭದ್ರ ಬುನಾದಿ ಹಾಕಿ ಕೊಡುವ ಯೋಚನೆ ಇದೆ. ಯಾಕಂದ್ರೆ ಕಳೆದ ಪಂದ್ಯದಲ್ಲಿ ಅಗ್ರ ಬ್ಯಾಟ್ಸ್ಮನ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿರಲಿಲ್ಲ. ಈ ಸಲ ಉತ್ತಮ ಆಟವಾಡಿ ಎದುರಾಳಿಗೆ ಸ್ಫರ್ಧಾತ್ಮಕ ಗುರಿ ನೀಡಲಿದ್ದೇವೆ.
ಶುಭ್ಮನ್ ಗಿಲ್, ಟೀಮ್ ಇಂಡಿಯಾ ಆಟಗಾರ
ಪಂದ್ಯಕ್ಕೆ ಮಳೆ ಭೀತಿ..ರಿಸರ್ವ್ ಡೇ ನಿಗದಿ..
ಯಸ್, ಇಂದಿನ ಇಂಡೋ-ಪಾಕ್ ನಡುವಿನ ಸೂಪರ್-4 ಪಂದ್ಯಕ್ಕೆ ಮಳೆ ಬಂದ್ರೂ ಬೇಸರ ಪಡಬೇಕಿಲ್ಲ. ಯಾಕಂದ್ರೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ರೆ ಅಥವಾ ಹವಾಮಾನ ವೈಪರಿತ್ಯದಿಂದ ಸ್ಥಗಿತಗೊಂಡಲ್ಲಿ ಸೋಮವಾರ ಪಂದ್ಯ ನಡೆಯಲಿದೆ.
ಇಂಡೋ-ಪಾಕ್ ಪಂದ್ಯಕ್ಕೆ ಸಿಕ್ಕಾಪಟ್ಟೆ ಹೈಫ್ ಕ್ರಿಯೇಟ್ ಆಗಿದೆ. ಈ ಬಿಗ್ ಗೇಮ್ನಲ್ಲಿ ಟೀಮ್ ಇಂಡಿಯಾ ಬದ್ಧವೈರಿಯ ಸೊಲ್ಲಡಗಿಸುತ್ತಾ? ಇಲ್ಲ ಬಾಬರ್ ಪಡೆ ಹೆಣೆದ ತಂತ್ರಕ್ಕೆ ಭಾರತ ಲಾಕ್ ಆಗುತ್ತಾ ಅನ್ನೋದನ್ನ ಕಾದು ನೋಡಬೇಕು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ