newsfirstkannada.com

Asia Cup: ರೋಹಿತ್​​ ಪಡೆಗೆ ಪಾಕ್​ನ ಎಚ್ಚರಿಕೆ ಸಂದೇಶ.. ಹ್ಯಾರಿಸ್​, ನಸೀಮ್, ಅಫ್ರಿದಿ ಬೌಲಿಂಗ್ ಎಫೆಕ್ಟ್​​ ಹೇಗಿದೆ?

Share :

10-09-2023

  ಕ್ರಿಕೆಟ್​ ಅಭಿಮಾನಿಗಳು ಕಾತುರದಿಂದ ಕಾಯುತ್ತಿರೋ ಪಂದ್ಯ..!

  ಕೊಲೊಂಬೋದಲ್ಲಿಂದು ನಡೆಯಲಿದೆ ಭಾರತ-ಪಾಕ್ ರಣರಂಗ

  ಟೂರ್ನಿಯಲ್ಲಿ ಪಾಕಿಸ್ತಾನ​ ಬೌಲರ್​ಗಳ ಸಾಧನೆ ಏನು ಗೊತ್ತಾ?

ಇಂಡೋ- ಪಾಕ್​ ಕದನಕ್ಕೆ ಕೆಲವೇ ಕ್ಷಣಗಳು ಮಾತ್ರ ಬಾಕಿ. ಸೂಪರ್​ ಸಂಡೆ ನಡೆಯೋ ಹೈವೋಲ್ಟೇಜ್​ ಕದನಕ್ಕೆ ಇಡೀ ಕ್ರಿಕೆಟ್​ ಜಗತ್ತು ಕಾದು ಕುಳಿತಿದೆ. ಆದ್ರೆ, ಟೀಮ್​ ಇಂಡಿಯಾ ಅಭಿಮಾನಿಗಳಲ್ಲಿ ಆತಂಕದ ಕಾರ್ಮೋಡ ಆವರಿಸಿದೆ. ಸಂಡೆ ಬ್ಯಾಟಲ್​ನಲ್ಲಿ ಏನುಗುತ್ತಪ್ಪಾ ಅನ್ನೋದೆ ಟೆನ್ಶನ್​ ಬಿಡದೇ ಕಾಡ್ತಿದೆ.

ಮತ್ತೊಂದು ಇಂಡೋ -ಪಾಕ್​ ಕದನಕ್ಕೆ ಕ್ರಿಕೆಟ್​​ ಜಗತ್ತು ರೆಡಿಯಾಗಿದೆ. ಮೊದಲ ಪಂದ್ಯ ರದ್ದಾಗಿದ್ರಿಂದ ನಿರಾಸೆ ಅನುಭವಿಸಿದ ಫ್ಯಾನ್ಸ್​​, 2ನೇ ಪಂದ್ಯದಲ್ಲಿ ಹೈವೋಲ್ಟೇಜ್​ ಹಣಾಹಣಿಯ ನಿರೀಕ್ಷೆಯಲ್ಲಿದ್ದಾರೆ. ಕೊಲಂಬೋದ ಪ್ರೇಮದಾಸ ಮೈದಾನದಲ್ಲಿ ಬದ್ಧವೈರಿಗಳ ನಡುವಿನ ಕಾದಾಟ ನೋಡಲು ಇಡೀ ವಿಶ್ವ ಕ್ರಿಕೆಟ್​ ಲೋಕ ಕಾದು ಕುಳಿತಿದೆ.

ಭಾರತದ ಆಟಗಾರರು

ರೋಹಿತ್​​ ಪಡೆಗೆ ಪಾಕಿಸ್ತಾನದ ಎಚ್ಚರಿಕೆಯ ಸಂದೇಶ.!

ಟೀಮ್​ ಇಂಡಿಯಾ ಆಟಗಾರರು ಮಹತ್ವದ ಪಂದ್ಯಕ್ಕೆ ಅಭ್ಯಾಸ ಆರಂಭಿಸಿದ್ದಾರಷ್ಟೇ. ಆದ್ರೆ, ಪಾಕಿಸ್ತಾನ ಪಡೆ ಅದಾಗಲೇ ರಣರಂಗದಿಂದ ಎಚ್ಚರಿಕೆಯ ಸಂದೇಶ ರವಾನಿಸಿದೆ. ಅದ್ರಲ್ಲೂ, ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳಿಗೆ ಪಾಕ್​ ಪೇಸರ್ಸ್​​, ತಮ್ಮ ಪರ್ಫಾಮೆನ್ಸ್​ನಿಂದಲೇ ಖಡಕ್​ ವಾರ್ನಿಂಗ್​ ಕೊಟ್ಟಿದ್ದಾರೆ.

ಈ ಏಷ್ಯಾಕಪ್​ ಟೂರ್ನಿಯ ಮೊದಲ ಮುಖಾಮುಖಿಯಲ್ಲಿ ಏನಾಯ್ತು ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಮಳೆಯಿಂದ ಪಂದ್ಯ ರದ್ದಾದ ಬೇಸರಕ್ಕಿಂತ ಟೀಮ್​ ಇಂಡಿಯಾ ಬ್ಯಾಟ್ಸ್​​ಮನ್​ ಔಟಾದ ರೀತಿ ಅಭಿಮಾನಿಗಳನ್ನ ಬಿಡದೇ ಕಾಡ್ತಿದೆ. ಅದ್ರಲ್ಲೂ ಟಾಪ್​ ಆರ್ಡರ್​ ಬ್ಯಾಟ್ಸ್​ಮನ್​ಗಳು ಹೀನಾಯ ರೀತಿಯಲ್ಲಿ ನಿರ್ಗಮಿಸಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

ಆ ಪಂದ್ಯದಲ್ಲಿ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ ಪಾಕಿಸ್ತಾನ ಪೇಸರ್​​ಗಳ ದಾಳಿಯ ಮುಂದೆ ಮಂಡಿಯೂರಿದ್ರು. ಇನ್​​ಫ್ಯಾಕ್ಟ್​​.. ಇನ್ನಿಂಗ್ಸ್​ನ ಎಲ್ಲ 10 ವಿಕೆಟ್​​ಗಳನ್ನೂ ಪಾಕ್​ ಪಡೆಯ ಪೇಸರ್​​ಗಳೇ ಕಬಳಿಸಿ ದಾಖಲೆ ಬರೆದ್ರು. ಈ ಪಂದ್ಯ ಮಾತ್ರವಲ್ಲ.. ಅದಕ್ಕೂ ಹಿಂದಿನ ಮುಖಾಮುಖಿಗಳಲ್ಲೂ ಟೀಮ್​ ಇಂಡಿಯಾ ಆಟಗಾರರನ್ನ ಬಿಡದೇ ಕಾಡಿದ್ರು, ಈ ಪಾಕ್​ ವೇಗಿಗಳು.

ಏಷ್ಯನ್​ ದಂಗಲ್​ನಲ್ಲಿ ಪಾಕ್​ ವೇಗಿಗಳದ್ದೇ ದರ್ಬಾರ್​.!

ಭಾರತದ ವಿರುದ್ಧದ ಮೊದಲ ಪಂದ್ಯ ಮಾತ್ರವಲ್ಲ.. ಇಡೀ ಟೂರ್ನಿಯಲ್ಲಿ ಪಾಕ್​​ ಪೇಸರ್​ಗಳ ದರ್ಬಾರ್​ ಜೋರಾಗಿದೆ. ಮೊದಲ ಪಂದ್ಯದಲ್ಲಿ ನೇಪಾಳ ಆ ಬಳಿಕ ಟೀಮ್​ ಇಂಡಿಯಾ.. ಇದೀಗ ಸೂಪರ್​​ 4 ಹಂತದ ಮೊದಲ ಪಂದ್ಯದಲ್ಲೇ ಬಾಂಗ್ಲಾದೇಶ ಬ್ಯಾಟರ್​​ಗಳ ಕಾಡಿದ್ದಾರೆ. ಈ ಮೂಲಕ ಆನ್​ಫೀಲ್ಡ್​ ಪರ್ಫಾಮೆನ್ಸ್​ನಿಂದಲೇ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಇಷ್ಟೇ ಅಲ್ಲ.. ಟೂರ್ನಿಯಲ್ಲಿ ಹೆಚ್ಚು ವಿಕೆಟ್​ ಕಬಳಿಸಿದ ಆಟಗಾರರ ಪಟ್ಟಿಯಲ್ಲಿ ಟಾಪ್​ 3 ಸ್ಥಾನಗಳಲ್ಲಿ ಮರೆದಾಡ್ತಿದ್ದಾರೆ.

2023ರ ಏಷ್ಯಾಕಪ್​ನಲ್ಲಿ ಪಾಕಿಸ್ತಾನ ವೇಗಿಗಳು

2023ರ ಏಷ್ಯಾಕಪ್​ ಟೂರ್ನಿಯಲ್ಲಿ 20 ಓವರ್​​ ಬೌಲಿಂಗ್​ ಮಾಡಿರುವ ಹ್ಯಾರಿಸ್​ ರೌಫ್​ 9 ವಿಕೆಟ್​ ಕಬಳಿಸಿದ್ರೆ, ನಸೀಮ್​ ಶಾ 19.3 ಓವರ್​ ಬೌಲಿಂಗ್​ ಮಾಡಿ 7 ವಿಕೆಟ್​ ಕಬಳಿಸಿದ್ದಾರೆ. ಇನ್ನು, ಶಾಹೀನ್​ ಶಾ ಅಫ್ರಿದಿ 22 ಓವರ್​ ಬೌಲಿಂಗ್​ ಮಾಡಿದ್ದು, 7 ವಿಕೆಟ್​​​ಗಳನ್ನ ಕಬಳಿಸಿದ್ದಾರೆ.

ಭಾರತ ಮತ್ತು ಪಾಕ್ ಆಟಗಾರರು

ಎಕಾನಮಿಯಲ್ಲೂ ಇವರೇ ಬೆಸ್ಟ್​​.!

ಕೇವಲ ವಿಕೆಟ್​ ಟೇಕಿಂಗ್​ ಮಾತ್ರವಲ್ಲ.. ಎಕಾನಮಿ ವಿಚಾರದಲ್ಲೂ ತ್ರಿಮೂರ್ತಿಗಳು ದಿ ಬೆಸ್ಟ್​ ಎನಿಸಿಕೊಂಡಿದ್ದಾರೆ. ಮೂವರಲ್ಲಿ ಯಾವೊಬ್ಬರ ಎಕಾನಮಿ ಕೂಡ 5ರ ಗಡಿ ದಾಟಿಲ್ಲ.

ಒಂದೆಡೆ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳು ಫಾರ್ಮ್​ ಕಂಡುಕೊಳ್ಳೋ ಸರ್ಕಸ್​​ನಲ್ಲಿದ್ರೆ, ಪಾಕ್​ ಪೇಸರ್ಸ್​ ಬೆಂಕಿ ಬಿರುಗಾಳಿ ಅವತಾರ ಎತ್ತಿದ್ದಾರೆ. ಪಾಕ್​ ಪೇಸರ್ಸ್​ VS ಟೀಮ್​ ಇಂಡಿಯಾ ಬ್ಯಾಟರ್ಸ್​ ನಡುವಿನ ಈ ಬ್ಯಾಟಲ್​​ ಹೈವೋಲ್ಟೆಜ್​ ಪಂದ್ಯದ ಕಿಕ್ಕನ್ನ ಇನ್ನಷ್ಟು ಹೆಚ್ಚಿಸೋದ್ರಲ್ಲಿ ಅನುಮಾನವೇ ಇಲ್ಲ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Asia Cup: ರೋಹಿತ್​​ ಪಡೆಗೆ ಪಾಕ್​ನ ಎಚ್ಚರಿಕೆ ಸಂದೇಶ.. ಹ್ಯಾರಿಸ್​, ನಸೀಮ್, ಅಫ್ರಿದಿ ಬೌಲಿಂಗ್ ಎಫೆಕ್ಟ್​​ ಹೇಗಿದೆ?

https://newsfirstlive.com/wp-content/uploads/2023/09/ROHIT_SHARMA-4.jpg

Load More