newsfirstkannada.com

ಟಾಸ್ ಗೆದ್ದುಕೊಂಡ ಪಾಕ್​, ರೋಹಿತ್ ಪಡೆ ಬ್ಯಾಟಿಂಗ್​.. ಟೀಮ್​ ಇಂಡಿಯಾದ ಪ್ಲೇಯಿಂಗ್​​- 11 ಯಾಱರಿಗೆ ಚಾನ್ಸ್​!

Share :

10-09-2023

    ಕೊಲೊಂಬೋದಲ್ಲಿ ನಡೆಯುತ್ತಿರುವ ಹೈವೋಲ್ಟೇಜ್ ಮ್ಯಾಚ್

    ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿರುವ ಬಾಬರ್ ಟೀಮ್​

    ತಂಡದಲ್ಲಿ ಯಾಱರಿಗೆ ಸ್ಥಾನ, ವಿರಾಟ್ ಮೋಡಿ ಮಾಡ್ತಾರಾ.?​

ಶ್ರೀಲಂಕಾದ ಕೊಲೊಂಬೋದ ಆರ್​ ಪ್ರೇಮದಾಸ್ ಸ್ಟೇಡಿಯಂ ನಡೆಯುತ್ತಿರುವ ಭಾರತ ಜೊತೆಗಿನ ಹೈವೋಲ್ಟೇಜ್​ ಪಂದ್ಯದಲ್ಲಿ ಪಾಕ್ ಟಾಸ್ ಗೆದ್ದುಕೊಂಡು ಫೀಲ್ಡಿಂಗ್ ಆಯ್ದುಕೊಂಡಿದೆ. ಪಾಕ್​ ಕ್ಯಾಪ್ಟನ್ ಬಾಬರ್ ಅವರು​ ಭಾರತದ ಆಟಗಾರರನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದ್ದಾರೆ.

ಭಾರತದ ಪರ ಆರಂಭಿಕ ಆಟಗಾರರಾಗಿ ಕ್ರೀಸ್​ಗೆ ಕ್ಯಾಪ್ಟನ್​ ರೋಹಿತ್ ಶರ್ಮಾ ಜೊತೆ ಶುಭ್​ಮನ್ ಗಿಲ್ ಆಗಮಿಸಲಿದ್ದಾರೆ. ಶ್ರೇಯಸ್ ಅಯ್ಯರ್ ಬದಲಾಗಿ ತಂಡದಲ್ಲಿ ಕನ್ನಡಿಗ ಕೆ.ಎಲ್​ ರಾಹುಲ್​ಗೆ ಅವಕಾಶ ನೀಡಲಾಗಿದೆ. ಐಪಿಎಲ್​ನಲ್ಲಿ ಗಾಯಗೊಂಡ ಬಳಿಕ ಇದೇ ಮೊದಲ ಬಾರಿಗೆ ರಾಹುಲ್​ ಮೈದಾನಕ್ಕೆ ಇಳಿಯುತ್ತಿದ್ದಾರೆ.

ಇನ್ನು ಕೆ.ಎಲ್​ ರಾಹುಲ್​ ಬಂದರೂ ಇಶನ್ ಕಿಶನ್​ಗೆ ವಿಕೆಟ್​ ಕೀಪರ್ ಜವಾಬ್ದಾರಿ ನೀಡಲಾಗಿದೆ. ಸದ್ಯ ಒಳ್ಳೆಯ ಫಾರ್ಮ್​​ನಲ್ಲಿರೋ ಇಶನ್ ಇವತ್ತು ಕೂಡ ಅಬ್ಬರಿಸುವ ಮುನ್ಸೂಚನೆ ಇದೆ.  ಮಧ್ಯಮ ಕ್ರಮಾಂಕದಲ್ಲಿ ಎಂದಿನಂತೆ ವಿರಾಟ್ ಕೊಹ್ಲಿ ಬ್ಯಾಟ್ ಬೀಸಲಿದ್ದಾರೆ. ತಂಡದಲ್ಲಿ ಆಲ್ ರೌಂಡರ್​ಗಳಾಗಿ ಉಪನಾಯಕ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಕಣಕ್ಕೆ ಇಳಿಯಲಿದ್ದಾರೆ.

ಭಾರತದ ನಾಯಕ ರೋಹಿತ್ ಶರ್ಮಾ ಹಾಗೂ ಪಾಕ್ ಕ್ಯಾಪ್ಟನ್ ಬಾಬರ್

ಇನ್ನು ತಂಡಕ್ಕೆ ಬೂಮ್ರಾ ಆಗಮಿಸಿದ್ದು ಭಾರತದ ಬೌಲಿಂಗ್ ಪಡೆ ನವ ಚೈತನ್ಯವನ್ನು ಪಡೆದುಕೊಂಡಿದೆ. ಬೂಮ್ರಾ ಆಗಮನದಿಂದ ಮೊಹಮ್ಮದ್ ಶಮಿಗೆ ರೆಸ್ಟ್ ನೀಡಲಾಗಿದ್ದು ಸಿರಾಜ್ ಪಾಕ್ ಮೇಲೆ ದಾಳಿ ಮುಂದುವರೆಸಲಿದ್ದಾರೆ. ಇನ್ನು ಕುಲ್​ದೀಪ್ ಯಾದವ್ ಟೀಮ್ ಪರ ಸ್ಪಿನ್ನರ್ ಆಗಿ ಮೋಡಿ ಮಾಡಲು ಸಜ್ಜಾಗಿದ್ದಾರೆ.

ಭಾರತದ ಕಳೆದ ಎರಡು ಪಂದ್ಯಗಳು ಕೂಡ ಮಳೆಯಿಂದ ತೊಂದರೆಯಾಗಿತ್ತು. ಪಾಕ್ ವಿರುದ್ಧದ ಮೊದಲ ಮ್ಯಾಚ್ ಮಳೆಯಿಂದ ರದ್ದು ಆದ್ರೆ, ನೇಪಾಳ ಜೊತೆಗಿನ ಪಂದ್ಯದಲ್ಲಿ ಡಕ್ವರ್ತ್​ ಲೂಯಿಸ್ ನಿಯಮದಂತೆ ರನ್ ನಿಗಧಿ ಪಡಿಸಿತ್ತು. ಇದರಲ್ಲಿ ಭಾರತ 10 ವಿಕೆಟ್​ಗಳ ಜಯ ದಾಖಲಿಸಿತ್ತು.

ಟೀಮ್ ಇಂಡಿಯಾದ ಪ್ಲೇಯಿಂಗ್- 11

ರೋಹಿತ್ ಶರ್ಮಾ(ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್, ಇಶಾನ್ ಕಿಶನ್ (ವಿಕೆಟ್​ ಕೀಪರ್), ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್​ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಪಾಕಿಸ್ತಾನದ ಪ್ಲೇಯಿಂಗ್- 11

ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಝಂ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟಾಸ್ ಗೆದ್ದುಕೊಂಡ ಪಾಕ್​, ರೋಹಿತ್ ಪಡೆ ಬ್ಯಾಟಿಂಗ್​.. ಟೀಮ್​ ಇಂಡಿಯಾದ ಪ್ಲೇಯಿಂಗ್​​- 11 ಯಾಱರಿಗೆ ಚಾನ್ಸ್​!

https://newsfirstlive.com/wp-content/uploads/2023/09/ROHIT_SHARMA-5.jpg

Load More