ಪಲ್ಲೆಕೆಲೆಯಲ್ಲಿ ರೋಹಿತ್ ಶರ್ಮಾ ಪವರ್ ಲೆಸ್ ಆಟದ ಗುಟ್ಟೇನು?
ಕಳೆದ 5 ಮುಖಾಮುಖಿಗಳಲ್ಲಿ ರೋಹಿತ್ ಶರ್ಮಾ ಫ್ಲಾಪ್ ಶೋ
ಬಹಳಷ್ಟು ನಿರೀಕ್ಷೆ ಹುಸಿಗೊಳಿಸಿದ ಟೀಮ್ ಇಂಡಿಯಾ ಕ್ಯಾಪ್ಟನ್
ಯಾವುದೇ ಫೀಲ್ಡ್ ಆಗಿರ್ಲಿ, ಟೀಮ್ ಕ್ಯಾಪ್ಟನ್, ತಂಡವನ್ನ ಮುಂದೆ ನಿಂತು ನಡೆಸಬೇಕು ಅನ್ನೋದು ಎಲ್ಲರ ನಿರೀಕ್ಷೆ. ಆದ್ರೆ, ಟೀಮ್ ಇಂಡಿಯಾದ ವಿಚಾರದಲ್ಲಿ ಈ ನಿರೀಕ್ಷೆ ಯಾವಾಗಲೂ ಆಗೋದು ಹುಸಿನೇ. ಅದ್ರಲ್ಲೂ, ಪಾಕ್ ವಿರುದ್ಧದ ಪಂದ್ಯ ಅಂದ್ರೆ ಸಾಕು, ಹಿಟ್ಮ್ಯಾನ್ ತಡಕಾಡ್ತಾರೆ.
ಪಾಕಿಸ್ತಾನ ವಿರುದ್ಧದ ಪಂದ್ಯದ ಅಂದ್ರೆ ಸಾಕು ರೋಹಿತ್ ಶರ್ಮಾ ಸಿಡಿದೇಳ್ತಾರೆ ಅನ್ನೋ ಮಾತಿತ್ತು. ಆದ್ರೆ, ಇತ್ತೀಚೆಗೆ ಯಾಕೋ ಹಿಟ್ಮ್ಯಾನ್, ತಡಕಾಡ್ತಿದ್ದಾರೆ. ಸೆಂಚುರಿ ಸಿಡಿಸಿ ಘರ್ಜಿಸ್ತಾ ಇದ್ದ ರೋಹಿತ್ ಶರ್ಮಾ, ಒಂದೊಂದು ರನ್ಗಳಿಕೆಗೆ ಪರದಾಡ್ತಿದ್ದಾರೆ. ನಿನ್ನೆಯ ಪಂದ್ಯದಲ್ಲೂ ಆಗಿದ್ದು ಇದೇ.
ಬದ್ಧವೈರಿಗಳ ಎದುರಿನ ಕದನ, ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆ, ಗೆಲ್ಲಲೇಬೇಕಾದ ಪ್ರತಿಷ್ಟೆ. ಇಂತಾ ಹೈ ಪ್ರೆಶರ್ ಗೇಮ್ನಲ್ಲಿ ಸೀನಿಯರ್ಸ್ ಅದ್ರಲ್ಲೂ ಮುಖ್ಯವಾಗಿ ಕ್ಯಾಪ್ಟನ್ ತಂಡವನ್ನ ಮುಂದೆ ನಿಂತು ಲೀಡ್ ಮಾಡಬೇಕು ಅನ್ನೋದು ಎಲ್ಲರ ನಿರೀಕ್ಷೆ. ಆದ್ರೆ, ನಮ್ ಕ್ಯಾಪ್ಟನ್ ರೋಹಿತ್ ಕಥೆನೆ ಬೇರೆ.
ಏಷ್ಯಾಕಪ್- 2023, ಪಲ್ಲೆಕೆಲೆಯಲ್ಲಿ ರೋಹಿತ್ ಪವರ್ ಲೆಸ್
ನಿನ್ನೆಯ ಪಂದ್ಯದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಮೇಲೆ ನಿರೀಕ್ಷೆಯ ಭಾರವಿತ್ತು. ಆದ್ರೆ, ಬ್ಯಾಟಿಂಗ್ಗಿಳಿದಾಗ್ಲೇ ಗೊತ್ತಾಗಿದ್ದು ರೋಹಿತ್ ಅಸಲಿ ಆಟ. ನಿಜ ಹೇಳಬೇಕಂದ್ರೆ ರೋಹಿತ್ ಶರ್ಮಾರಲ್ಲಿ ಕಾನ್ಫಿಡೆನ್ಸ್ ಅನ್ನೋದೆ ಮಾಯವಾಗಿತ್ತು. ಮೊದಲ ಎಸೆತದಿಂದಲೇ ತಡಕಾಡಿದ ಹಿಟ್ಮ್ಯಾನ್ ಕೇವಲ 11 ರನ್ಗಳಿಗೆ ಆಟ ಮುಗಿಸಿದ್ರು.
T20 ವಿಶ್ವಕಪ್ – 2022, ಮೆಲ್ಬರ್ನ್ನಲ್ಲಿ ರೋಹಿತ್
ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲೂ ರೋಹಿತ್ ಶರ್ಮಾ ನೀಡಿದ್ದು ಪ್ಲಾಫ್ ಶೋ. ಮೆಲ್ಬರ್ನ್ ಅಂಗಳದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಮಕಾಡೆ ಮಲಗಿದ್ರು. ಜಸ್ಟ್ 7 ಎಸೆತವನ್ನ ಎದುರಿಸೋದ್ರಲ್ಲಿ ಸುಸ್ತಾದ ಶರ್ಮಾ, 4 ರನ್ಗಳಿಸಿ ಪೆವಿಲಿಯನ್ ಸೇರಿದ್ರು.
ಏಷ್ಯಾಕಪ್- 2022, ಅರಬ್ಬರ ನಾಡಲ್ಲಿ ಸತತ 2 ಫ್ಲಾಪ್
2022ರ ಏಷ್ಯಾಕಪ್ ಟೂರ್ನಿ ಕಥೆ ಏನು ವಿಭಿನ್ನವಾಗಿಲ್ಲ. 2022ರ ಏಷ್ಯಾಕಪ್ ಟೂರ್ನಿಯಲ್ಲಿ ಲೀಗ್ ಹಂತದಲ್ಲಿ ಮುಖಾಮುಖಿಯಾದಾಗ ಜಸ್ಟ್ 12 ರನ್ಗಳಿಸಿ ಔಟಾಗಿದ್ದ ರೋಹಿತ್ ಶರ್ಮಾ, ಸೂಪರ್ 4 ಕದನದಲ್ಲೂ ಬಿಗ್ ಸ್ಕೋರ್ ಕಲೆ ಹಾಕುವಲ್ಲಿ ಎಡವಿದ್ರು. ಯುಎಇನಲ್ಲಿ ನಡೆದ ಟೂರ್ನಿಯ 2 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 40 ರನ್ ಮಾತ್ರ.
T20 ವಿಶ್ವಕಪ್- 2021, ಹಿಟ್ಮ್ಯಾನ್ ಡಕೌಟ್..!
ಇದು ಕ್ಯಾಪ್ಟನ್ ರೋಹಿತ್ ಕಥೆಯಲ್ಲ, ಅದಕ್ಕೂ ಹಿಂದಿನ ಕಥೆ. ಆದ್ರೂ, ಸೀನಿಯರ್ ಪ್ಲೇಯರ್ ಅನಿಸಿಕೊಂಡಿದ್ದ ರೋಹಿತ್ ಶರ್ಮಾ ವಿಶ್ವಕಪ್ನಂತಹ ಬಿಗ್ಸ್ಟೇಜ್ನಲ್ಲಿ ಪರ್ಫಾಮ್ ಮಾಡ್ಬೇಕು ಅನ್ನೋದು ಎಲ್ಲರ ನಿರೀಕ್ಷೆ. ಆದ್ರೆ, 2021ರ ಟಿ20 ವಿಶ್ವಕಪ್ ರೋಹಿತ್ ಸೋಲಿಗೆ ಮುನ್ನುಡಿ ಬರೆದು ಬಿಟ್ರು. ಶಾಹೀನ್ ಶಾ ಅಫ್ರಿದಿಯ ಪರ್ಫೆಕ್ಟ್ ಬಾಲ್ ಮುಂದೆ ಕಕ್ಕಾಬಿಕ್ಕಿಯಾದ ರೋಹಿತ್ ಆಗಿದ್ದು, ಗೋಲ್ಡನ್ ಡಕೌಟ್.
ಭಾರತ- ಪಾಕಿಸ್ತಾನ ನಡುವಿನ ಕಳೆದ 5 ಮುಖಾಮುಖಿಗಳಲ್ಲೂ ರೋಹಿತ್ ಶರ್ಮಾ ನೀಡಿರೋದು ಅಟ್ಟರ್ಫ್ಲಾಪ್ ಪ್ರದರ್ಶನ. ಹೈ ಪ್ರೆಶರ್ ಗೇಮ್ನಲ್ಲಿ ಜವಾಬ್ದಾರಿಯುತ ಆಟವಾಡಬೇಕಾದ ತಂಡದ ಕ್ಯಾಪ್ಟನ್ & ಮೋಸ್ಟ್ ಸೀನಿಯರ್ ಪ್ಲೇಯರ್ ಆಗಿರುವ ಆಟಗಾರನಿಂದ ಇಂತಾ ಪರ್ಫಾಮೆನ್ಸ್ ನಿರೀಕ್ಷೆ ಮಾಡೋದು ಕೂಡ ಅಸಾಧ್ಯದ ಮಾತಲ್ವಾ..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ