newsfirstkannada.com

×

ನಾನಾ.. ನೀನಾ.. ಕ್ಯಾಪ್ಟನ್ ಟ್ರ್ಯಾಕ್‌ನಲ್ಲಿ ರೋಹಿತ್ ಶರ್ಮಾ, ಬಾಬರ್ ಇಬ್ಬರಲ್ಲಿ ಯಾರು ಬೆಸ್ಟ್?

Share :

Published September 2, 2023 at 2:29pm

Update September 2, 2023 at 3:08pm

    ಭಾರತ-ಪಾಕ್ ಪಂದ್ಯವಲ್ಲ, ಬಾಬರ್-ರೋಹಿತ್ ಮ್ಯಾಚ್

    ಇಲ್ಲಿವರೆಗೆ ಯಾವ ಕ್ಯಾಪ್ಟನ್ ಟ್ರ್ಯಾಕ್ ರೆಕಾರ್ಡ್ ಬೆಸ್ಟ್​ ಇದೆ

    ರೋಹಿತ್-ಬಾಬರ್ ಸಖತ್ ಜೋಡಿಯಲ್ಲಿ ಗೆಲ್ಲೋದ್ಯಾರು?​

ಭಾರತ VS ಪಾಕಿಸ್ತಾನ್​ ಅಂದಾಕ್ಷಣ ಎಲ್ಲರಲ್ಲೂ ಕೊಹ್ಲಿ VS ಬಾಬರ್​ ಅಝಂ ಅನ್ನೋ ಇಮೇಜ್​ ಬರುತ್ತೆ. ಆದ್ರೆ, ಇವತ್ತಿನ ಪಂದ್ಯ ಕೊಹ್ಲಿ VS ಬಾಬರ್​ ಫೈಟ್​​​ ಅಲ್ಲ. ಇದು ರೋಹಿತ್​ VS ಬಾಬರ್​​ ನಡುವಿನ ಕಾಳಗ. ಸಾಮಾನ್ಯದ್ದಲ್ಲ.. ಪ್ರತಿಷ್ಟೆಯ ಕಾಳಗವಾಗಿದೆ.

ಇಡೀ ವಿಶ್ವವೇ ಕಾಯ್ತಿರೋ ಕುತೂಹಲದ ಕದನಕ್ಕೆ ಕೆಲವೇ ಗಂಟೆಗಳು ಬಾಕಿ. ಪಲ್ಲೆಕೆಲೆಯಲ್ಲಿ ನಡೆಯಲಿರೋ ಇಂಡೋ -ಪಾಕ್​ ಹೈವೋಲ್ಟೆಜ್​ ಫೈಟ್​ನ ಕ್ರೇಜ್​​​​ ಇಡೀ ಕ್ರಿಕೆಟ್​​ ಲೋಕವನ್ನ ಆವರಿಸಿಬಿಟ್ಟಿದೆ.

ಬಾಬರ್ ಅಝಂ ಮತ್ತು ವಿರಾಟ್ ಕೊಹ್ಲಿ

ಇಂಡೋ -ಪಾಕ್​ ಫೈಟ್​​ ಮೇಲೆ ವಿಶ್ವದ ಕಣ್ಣು.!

ಸದ್ಯ ಇವತ್ತು ಇಡೀ ಜಗತ್ತು ಕುತೂಹಲ ಶ್ರೀಲಂಕಾದ ಪೆಲ್ಲೆಕೆಲೆಯ ಮೈದಾನದತ್ತ ನೆಟ್ಟಿದೆ. ಯಾಕಂದ್ರೆ, ಇಲ್ಲಿ ನಡೆಯೋದು ಒಂದು ಕ್ರಿಕೆಟ್​ ಪಂದ್ಯವಲ್ಲ. ಇದೊಂದು ಯುದ್ಧ. ಇಲ್ಲಿ ಬ್ಯಾಟ್​ & ಬಾಲ್​ಗಳು ವೆಪನ್​ಗಳಾದ್ರೆ, ಕ್ರಿಕೆಟ್​ ಮೈದಾನವೇ ರಣಾಂಗಣ. ಇನ್ನು, ಇಲ್ಲಿ ಆಟಗಾರರ ಸೈನಿಕರು. ಉಭಯ ದೇಶಗಳ ಪಾಲಿಗೆ ಇದು ಪ್ರತಿಷ್ಟೆಯ ಕಣ. ಗೆಲುವೊಂದೇ ಗುರಿ.

ಬಾಬರ್​ VS ರೋಹಿತ್​.. ಯಾರು ಬೆಸ್ಟ್​..?

ಪ್ರತಿ ಬಾರಿ ಇಂಡೋ -ಪಾಕ್​ ಎದುರಾದಾಗ್ಲೂ ಬಾಬರ್​ ಅಝಂ ಹಾಗೂ ವಿರಾಟ್​ ಕೊಹ್ಲಿ ನಡುವೆ ಹೋಲಿಕೆ ನಡೆಯೋದನ್ನ ನೀವು ಕೇಳಿದ್ದೀರಿ. ಆದ್ರೆ, ಈ ಬಾರಿ ರೋಹಿತ್​ ಶರ್ಮಾ ಹಾಗೂ ಬಾಬರ್​ ಅಝಂ ನಡುವೆ ಹೋಲಿಕೆ ನಡೆಯುತ್ತಿದೆ. ಉಭಯ ತಂಡಗಳ ಪಾಲಿನ ಕ್ಯಾಪ್ಟನ್ ಆಫ್​ ದಿ ಶಿಪ್​ ಆಗಿರೋ ಇವರಿಬ್ಬರು ಸದ್ಯ ಸೆಂಟರ್​ ಆಫ್​ ಅಟ್ರ್ಯಾಕ್ಷನ್ ಆಗಿದ್ದಾರೆ.

ಕ್ಯಾಪ್ಟನ್​ ರೋಹಿತ್​ ಮೇಲೆ ಹೆಚ್ಚಿದ ನಿರೀಕ್ಷೆ.!

ಸದ್ಯ, ಇಡೀ ಟೀಮ್​ ಇಂಡಿಯಾದ ಚಿತ್ತ ಕ್ಯಾಪ್ಟನ್​ ರೋಹಿತ್​ ಶರ್ಮಾ ಮೇಲಿದೆ. ಟೀಮ್​ ಇಂಡಿಯಾ ನಾಯಕ ರೋಹಿತ್​, ಆನ್​ಫೀಲ್ಡ್​ನಲ್ಲಿ ತೆಗೆದುಕೊಳ್ಳೋ ಒಂದೊಂದು ನಿರ್ಧಾರ ಪಂದ್ಯದ ಗತಿಯನ್ನೇ ಬದಲಿಸಲಿದೆ. ಅದ್ರ ಜೊತೆಗೆ ಬ್ಯಾಟ್​ ಹಿಡಿದು ಹಿಟ್​ಮ್ಯಾನ್​ ಸಿಡಿಸೋ ಒಂದೊಂದು ಬೌಂಡರಿ, ಒದೊಂದು ಸಿಕ್ಸರ್,​​ ಅಷ್ಟೇ ಏಕೆ ಒದೊಂದು ರನ್​ ಕೂಡ ಟೀಮ್​ ಇಂಡಿಯಾ ಪಾಲಿಗೆ ಮೋಸ್ಟ್​ ಇಪಾರ್ಟೆಂಟ್.

ಪಾಕ್​ ವಿರುದ್ಧ ರೋಹಿತ್​ ಸೂಪರ್​-ಡೂಪರ್​.!

ಪಾಕಿಸ್ತಾನ ವಿರುದ್ಧದ ಪಂದ್ಯ ಅಂದ್ರೆ, ರೋಹಿತ್​ ತೊಡೆ ತಟ್ಟಿ ನಿಲ್ತಾರೆ. ಹಿಟ್​ಮ್ಯಾನ್​ ಕ್ರಿಸ್​ ಕಚ್ಚಿ ನಿಂತ್ರೆ, ಪಾಕ್​ ಪಡೆಯ ಬೌಲಿಂಗ್​ ಅಟ್ಯಾಕ್​ ಧೂಳಿ ಪಟವಾಗೋದು ಪಕ್ಕಾ. ಇದಕ್ಕೆ ಏಕದಿನ ಫಾರ್ಮೆಟ್​ನಲ್ಲಿ ಪಾಕ್​ ಎದುರು ಮುಂಬೈಕರ್​ ಘರ್ಜಿಸಿರುವ ಇತಿಹಾಸವೇ ಬೆಸ್ಟ್​ ಎಕ್ಸಾಂಪಲ್.!

ಪಾಕಿಸ್ತಾನ ವಿರುದ್ಧ ODIನಲ್ಲಿ ರೋಹಿತ್​

ಪಾಕಿಸ್ತಾನ ವಿರುದ್ಧ 16 ಪಂದ್ಯವನ್ನಾಡಿರುವ ರೋಹಿತ್​ 720 ರನ್​ಗಳಿಸಿದ್ದಾರೆ. 51.42ರ ರನ್​ಗಳಿಕೆಯ ಸರಾಸರಿ ಹೊಂದಿರುವ ರೋಹಿತ್​ 2 ಶತಕ, 6 ಅರ್ಧಶತಕ ಸಿಡಿಸಿದ್ದಾರೆ.

ಭಾರತದ ವಿರುದ್ಧ ಬಾಬರ್​ ಬ್ಯಾಟ್​ ಸೈಲೆಂಟ್​.!

ವಿಶ್ವದ ಬೆಸ್ಟ್​​ ಬ್ಯಾಟ್ಸ್​ಮನ್​​ ಆಗಿ ಬಾಬರ್​, ಗುರುತಿಸಿಕೊಂಡಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗರು ಸೇರಿದಂತೆ, ವಿಶ್ವದ ದಿಗ್ಗಜರು ಬಾಬರ್​​​ನ ಹಾಡಿ ಹೊಗಳಿದಿದ್ದಾರೆ. 104 ಏಕದಿನ ಪಂದ್ಯಗಳಲ್ಲಿ ಬಾಬರ್​ ಅದ್ಭುತ ಸಾಧನೆ ಮಾಡಿದ್ದಾರೆ ನಿಜ. ಆದ್ರೆ, ಭಾರತದ ಎದುರು ಠುಸ್​ ಪಟಾಕಿಯಾಗಿದ್ದಾರೆ.

ಬಾಬರ್ ಅಝಂ ಔಟ್ ಆದ ಕ್ಷಣ

ಭಾರತ ವಿರುದ್ಧ ODIನಲ್ಲಿ ಬಾಬರ್​

ಭಾರತದ ಎದುರು 5 ಏಕದಿನ ಪಂದ್ಯವನ್ನಾಡಿರುವ ಬಾಬರ್​ ಅಝಂ, 158 ರನ್​ಗಳಿಸಿದ್ದಾರಷ್ಟೇ. 31.60ರ ಸರಾಸರಿ ಹೊಂದಿರುವ ಬಾಬರ್​ ಅಝಂ, ಒಂದೇ ಒಂದು ಬಾರಿ ಅರ್ಧಶತಕದ ಗಡಿ ದಾಟಿಲ್ಲ.

ಅಂಕಿ-ಅಂಶಗಳ ಲೆಕ್ಕಾಚಾರದಲ್ಲಿ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ, ಬಾಬರ್​ಗಿಂತ ತುಂಬಾ ಮುಂದಿದ್ದಾರೆ. ಹಾಗಂತ ಓವರ್​ ಕಾನ್ಫಿಡೆನ್ಸ್​​ನಲ್ಲಿ ಯುದ್ಧಭೂಮಿಗೆ ಇಳಿಯೋಕೆ ಆಗುತ್ತಾ?. ನೋ ವೇ ಚಾನ್ಸೇ ಇಲ್ಲ, ಕ್ಯಾಪ್ಟನ್​ ರೋಹಿತ್​ ಪರ್ಫೆಕ್ಟ್​ ಗೇಮ್​ಪ್ಲಾನ್​ನೊಂದಿಗೆ ರೆಡಿಯಾಗಿದ್ದು, ಅಖಾಡಕ್ಕೆ ಇಳಿಯೋದಷ್ಟೇ ಬಾಕಿ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ನಾನಾ.. ನೀನಾ.. ಕ್ಯಾಪ್ಟನ್ ಟ್ರ್ಯಾಕ್‌ನಲ್ಲಿ ರೋಹಿತ್ ಶರ್ಮಾ, ಬಾಬರ್ ಇಬ್ಬರಲ್ಲಿ ಯಾರು ಬೆಸ್ಟ್?

https://newsfirstlive.com/wp-content/uploads/2023/09/ROHIT_BABAR-1.jpg

Load More