newsfirstkannada.com

ಪಾಕ್​ನಲ್ಲಿ ಆತ್ಮಾಹುತಿ ಬಾಂಬ್‌ ದಾಳಿ; 44 ಮಂದಿ ಸಾವು, 200 ಮಂದಿಗೆ ಗಾಯ, ಚೆಲ್ಲಾಪಿಲ್ಲಿಯಾಗಿ ಬಿದ್ದ ಮಾಂಸದ ಮುದ್ದೆಗಳು

Share :

31-07-2023

  ದಿಢೀರ್ ಸ್ಫೋಟಿಸಿಕೊಂಡ ಆತ್ಮಾಹುತಿ ಬಾಂಬರ್​​

  ಬಾಂಬ್ ಸ್ಫೋಟದಲ್ಲಿ 44 ಮಂದಿ ಸಾವು, 200 ಮಂದಿಗೆ ಗಾಯ

  ನೋಡ ನೋಡುತ್ತಲೇ ಜನರ ದೇಹಗಳು ಛಿದ್ರಛಿದ್ರ

ಇಡೀ ದೇಶಕ್ಕೆ ಭಯೋತ್ಪಾದನೆಯ ವಿಷ ಬೀಜ ಬಿತ್ತಿದ ರಾಷ್ಟ್ರ ಪಾಕಿಸ್ತಾನ. ವಿಶ್ವವನ್ನೇ ನರರಕ್ಕಸರ ಕೂಪದಲ್ಲಿ ಬೇಯುವಂತೆ ಮಾಡಿರೋ ನರಹಂತಕ ದೇಶ. ಆದ್ರೀಗ ತಾನು ಮಾಡಿರೋ ಪಾಪದ ಕೃತ್ಯದ ಫಲವನ್ನ ಆ ದೇಶದ ಅಮಾಯಕ ಜನರು ಅನುಭವಿಸ್ತಿದ್ದಾರೆ. ಉಗ್ರರ ನಾಡಿನಲ್ಲಿ ರಕ್ತಪಿಪಾಸುಗಳು ಅಟ್ಟಹಾಸ ಮೆರೆದಿದ್ದಾರೆ. ಹಲವಾರು ಮಂದಿಯ ರಕ್ತವನ್ನ ಹೀರಿದ್ದಾರೆ. ಸಾವು-ನೋವಿಗೆ ಕಾರಣವಾಗಿದ್ದಾರೆ.

ಪಾಕಿಸ್ತಾನದಲ್ಲಿ ಉಗ್ರರಿಂದ ಭೀಕರ ಆತ್ಮಾಹುತಿ ಬಾಂಬ್‌ ದಾಳಿ

ಪಾಕಿಸ್ತಾನ, ರಕ್ತಬೀಜಾಸುರರನ್ನ ಹುಟ್ಟಿಸಿ ವಿಶ್ವಕ್ಕೆ ಕಂಟಕವಾಗ್ತಿರೋ ದೇಶ. ಉಗ್ರಗಾಮಿಗಳೆಂಬ ನರರಕ್ಕಸರನ್ನ ತಯಾರು ಮಾಡೋ ಕಾರ್ಖಾನೆ. ಆದ್ರೀಗ ಇದೇ ದೇಶದಲ್ಲಿ ರಕ್ತಪಿಪಾಸುಗಳು ಜನರ ರಕ್ತವನ್ನ ಕುಡಿಯುತ್ತಿದ್ದಾರೆ. ನಿನ್ನೆ ಪಾಕಿಸ್ತಾನದಲ್ಲಿ ಅಟ್ಟಹಾಸ ಮೆರೆದಿದ್ದಾರೆ. ರಾಶಿ ರಾಶಿ ಜನರ ದೇಹಗಳನ್ನ ಛಿದ್ರ ಛಿದ್ರಗೊಳಿಸಿ ಕೊಂದಿದ್ದಾರೆ.

ಪಾಕಿಸ್ತಾನದ ಖೈಬರ್ ಪಂಕ್ತುನ್ವಾ ಪ್ರಾಂತ್ಯದ ಬಜೌರ್ ನಗರದಲ್ಲಿ ಜಮಿಯತ್ ಉಲೇಮಾ ಇಸ್ಲಾಂ-ಫಜಲ್ ಪಕ್ಷದ ಸಮಾವೇಶ ನಡೀತಿತ್ತು. ಈ ಸಮಾವೇಶದಲ್ಲಿ ಸ್ಥಳೀಯ ಜೆಯುಐ-ಎಫ್ ನಾಯಕ ಸಾವಿರಾರು ಜನರನ್ನ ಸೇರಿಸಿ ಸಮಾವೇಶ ನಡೆಸ್ತಿದ್ದ. ಈ ವೇಳೆ ಸಾವಿರಾರು ಜನರ ಮಧ್ಯೆ ಅದ್ಹೇಗೋ ಆತ್ಮಾಹುತಿ ಬಾಂಬರ್ ಒಬ್ಬ ತನ್ನನ್ನೇ ಸ್ಫೋಟಿಸಿಕೊಂಡಿದ್ದು, ಪರಿಣಾಮ ಸಮಾವೇಶ ನಡೆಯುತ್ತಿದ್ದ ಜಾಗ ಸ್ಮಶಾನವಾಗಿದೆ.

44 ಜನರು ಸಾವನ್ನಪ್ಪಿದ್ದಾರೆ

ಕಡಿಮೆ ಅಂದರೂ ಈ ತನಕ 44 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ 17 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಬಾಂಬ್ ಬ್ಲಾಸ್ಟ್‌ನಲ್ಲಿ ಜೆಯುಐ-ಎಫ್ ನಾಯಕ ಮೌಲಾನಾ ಜಿಯಾವುಲ್ಲಾ ಜಾನ್ ಸಹ ಮೃತಪಟ್ಟಿದ್ದು, ಹಲವು ಪತ್ರಕರ್ತರ ಪ್ರಾಣಪಕ್ಷಿಯೂ ಹಾರಿಹೋಗಿದೆ.

ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಮಾಂಸದ ಮುದ್ದೆಗಳು

ಸ್ಫೋಟದ ತೀವ್ರತೆಗೆ ಸಾವನ್ನಪ್ಪಿದವರ ದೇಹದ ಭಾಗಗಳು, ಚಪ್ಪಲಿಗಳು, ಟೋಪಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ದೃಶ್ಯಗಳು ರಣಭೀಕರವಾಗಿದೆ. ಘಟನಾ ಸ್ಥಳಕ್ಕೆ ಆಂಬ್ಯುಲೆನ್ಸ್‌ಗಳು ಆಗಮಿಸಿ ಗಾಯಗೊಂಡವರನ್ನ ಸಾಗಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಜೊತೆಗೆ ಗಾಯಗೊಂಡವರ ನರಳಾಟ.. ಚೀರಾಟ ಮುಗಿಲು ಮುಟ್ಟಿತ್ತು.

ಇನ್ನೂ ಈ ಬಾಂಬ್ ಸ್ಫೋಟದ ಹೊಣೆಯನ್ನು ಇದುವರೆಗೆ ಯಾವುದೇ ಉಗ್ರ ಸಂಘಟನೆಯಾಗಲೀ ಅಥವಾ ವ್ಯಕ್ತಿಗಳಾಗಲೀ ಹೊತ್ತುಕೊಂಡಿಲ್ಲ. ಒಟ್ಟಾರೆ, ಉಗ್ರರ ಬ್ರೈನ್ ವಾಶ್ ಮಾಡಿದ್ಮೇಲೆ ರಕ್ತಪಿಪಾಸುಗಳಿಗೆ ಜೀವದ ಮೇಲೆ ಆಸೆಯೆ ಇರಲ್ಲ ಅನ್ನೋ ಮಾತು ಮತ್ತೆ ಪಾಕಿಸ್ತಾನದಲ್ಲಿ ಸಾಬೀತಾಗಿದೆ. ಅಮಾಯಕ ಜನರ ರಕ್ತ ಬಜೌರ್ ನಗರದ ರಸ್ತೆಯಲ್ಲಿ ಚೆಲ್ಲಾಡಿದೆ.

ಪಾಕ್​ನಲ್ಲಿ ಆತ್ಮಾಹುತಿ ಬಾಂಬ್‌ ದಾಳಿ; 44 ಮಂದಿ ಸಾವು, 200 ಮಂದಿಗೆ ಗಾಯ, ಚೆಲ್ಲಾಪಿಲ್ಲಿಯಾಗಿ ಬಿದ್ದ ಮಾಂಸದ ಮುದ್ದೆಗಳು

https://newsfirstlive.com/wp-content/uploads/2023/07/Bajaur.jpg

Load More