newsfirstkannada.com

ಪಾಕ್​​ನಿಂದ ಮತ್ತೊಂದು ಹಿಂದೂ ವಿರೋಧಿ ನೀತಿ; ವಿವಿಗಳಲ್ಲಿ ಹೋಳಿ ಆಚರಣೆಯನ್ನೇ ಬ್ಯಾನ್ ಮಾಡಿ ಆದೇಶ

Share :

Published June 21, 2023 at 3:29pm

Update June 21, 2023 at 3:31pm

    ಪಾಕ್​ನಲ್ಲಿರುವ ಹಿಂದೂಗಳಿಗೆ ಬಿಗ್ ಶಾಕ್

    ವಿವಿಯಲ್ಲಿ ನಡೆದ ಗಲಾಟೆ ಬಳಿಕ ಈ ಕ್ರಮ

    ಪಾಕ್ ನಡೆ ವಿರುದ್ಧ ಭಾರೀ ಆಕ್ರೋಶ

ವಿಶ್ವವಿದ್ಯಾಲಯಗಳಲ್ಲಿ ಹೋಳಿ ಆಚರಣೆಯನ್ನು ನಿಷೇಧಿಸಿ ಪಾಕಿಸ್ತಾನದ ಹೈಯರ್ ಎಜುಕೇಷನ್ ಕಮಿಷನ್ (Higher Education Commission) ಆದೇಶ ಹೊರಡಿಸಿದೆ.

ಜೂನ್ 12 ರಂದು Quaid-i-Azam Universityಯಲ್ಲಿ ಹೋಳಿ ಆಚರಣೆ ನಡೆದಿತ್ತು. ವಿಶ್ವವಿದ್ಯಾಲಯದಲ್ಲಿ ನಡೆದ ಹೋಳಿ ಸಂಭ್ರಮದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ವಿಡಿಯೋ ವೈರಲ್ ಆಗ್ತಿದ್ದಂತೆ ಅಲ್ಲಿನ ಮುಸ್ಲಿಮರ ಕೆಂಗಣ್ಣಿಗೆ ಕಾರಣವಾಗಿತ್ತು. ಈ ಬೆನ್ನಲ್ಲೇ ವಿವಿಗಳಲ್ಲಿ ಹೋಳಿ ಹಬ್ಬ ಆಚರಣೆ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ.

ಇನ್ನು ಪಂಜಾಬ್ ವಿವಿಯಲ್ಲಿ ನಡೆದ ಹೋಳಿ ಸಂಭ್ರಮದ ವೇಳೆ ಮುಸ್ಲಿಂ ವಿದ್ಯಾರ್ಥಿಗಳು ಎಂಟ್ರಿಯಾಗಿ ತಡೆಯುವ ಪ್ರಯತ್ನ ಮಾಡಿದ್ದರು. ಪರಿಣಾಮ ವಿವಿಯಲ್ಲಿ ದೊಡ್ಡ ಗಲಾಟೆ ಆಗಿತ್ತು. ಈ ವೇಳೆ ಸುಮಾರು 15ಕ್ಕೂ ಹೆಚ್ಚು ಹಿಂದೂ ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಪರಿಣಾಮ ಪಾಕಿಸ್ತಾನದಲ್ಲಿ ಹೊಳಿ ಆಚರಣೆ ಬಗ್ಗೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಹೋಳಿ ಆಚರಣೆಯನ್ನೇ ಬ್ಯಾನ್ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಕ್​​ನಿಂದ ಮತ್ತೊಂದು ಹಿಂದೂ ವಿರೋಧಿ ನೀತಿ; ವಿವಿಗಳಲ್ಲಿ ಹೋಳಿ ಆಚರಣೆಯನ್ನೇ ಬ್ಯಾನ್ ಮಾಡಿ ಆದೇಶ

https://newsfirstlive.com/wp-content/uploads/2023/06/HOLI.jpg

Load More