newsfirstkannada.com

ಬರೋಬ್ಬರಿ 70 ಕೆಜಿ ಬಂಗಾರದ ತುಲಾಭಾರ; ಮುದ್ದಿನ ಮಗಳಿಗೆ ತಂದೆ ಕೊಟ್ಟ ಗಿಫ್ಟ್‌ಗೆ ಎಲ್ರೂ ಶಾಕ್‌! ವಿಡಿಯೋ ನೋಡಿ

Share :

27-07-2023

    ಅದ್ಧೂರಿ ವಿವಾಹ ಸಮಾರಂಭದಲ್ಲಿ ಮಗಳಿಗೆ ತುಲಭಾರ

    70 ಕೆ.ಜಿ ತೂಗಿದ ಮಗಳು, 70 ಕೆ.ಜಿ ಚಿನ್ನ ಉಡುಗೊರೆ

    ಈ ವಿಡಿಯೋ ಬಗ್ಗೆ ನವವಧು ಹೇಳಿದ್ದು ಏನು ಗೊತ್ತಾ..?

ಮಗಳ ಮದುವೆ ಮಾಡುವುದು ಎಂದರೆ ತಾಯಿಗಿಂತ ತಂದೆಗೆ ಖುಷಿ ಜೊತೆಗೆ ಜವಾಬ್ದಾರಿನೂ ಹೆಚ್ಚು. ಮಗಳಿಗೆ ಏನು ತೊಂದರೆ ಆಗಬಾರದೆಂದು ಗಂಡನ ಮನೆಯವರು ಕೇಳಿದ್ದಕ್ಕಿಂತ ಜೋರಾಗಿ ಮದುವೆ ಮಾಡಿ ಮನೆಮಗಳನ್ನು ಸಂತೈಸುತ್ತಾರೆ. ಮದುವೆಯಲ್ಲಿ ಬೈಕ್​, ಕಾರು ಸೇರಿದಂತೆ ಇತರೆ ದುಬಾರಿ ವಸ್ತುಗಳು ಕೊಡುವುದು ಮೊದಲಿಂದಲೂ ಇದೆ. ಇದೇ ರೀತಿ ಬ್ಯುಸಿನೆಸ್​ಮ್ಯಾನ್​ ಒಬ್ಬರು ತನ್ನ ಮುದ್ದಿನ ಮಗಳಿಗೆ ಚಿನ್ನದ ರಾಶಿಯನ್ನೇ ಕೊಟ್ಟಿದ್ದಾರೆ. ಹೌದು.. ಮಗಳು ಎಷ್ಟು ಕೆ.ಜಿ ಇದ್ದಾಳೋ ಅಷ್ಟು ಕೆ.ಜಿ ಬಂಗಾರ ಇಟ್ಟಿಗೆಗಳನ್ನು ತೂಗಿ ಕೊಟ್ಟಿರುವುದು ಎಲ್ಲರ ಕಣ್ಣು ಕುಕ್ಕುತ್ತಿದೆ.

ದುಬೈನಲ್ಲಿ ಅದೇನು ಮದುವೆ ಅಂತಿರಾ..! ಪಾಕ್​ ಮೂಲದ ಉದ್ಯಮಿಯೊಬ್ಬರು ದುಬೈನಲ್ಲಿ ಕೆಲವು ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರ ಮಗಳು ಆಯೇಷಾ ತಹಿರ್​ ಮದುವೆ ಮೊಹಮ್ಮದ್​ ಎನ್ನುವರ ಜೊತೆ ನಿಶ್ಚಯ ಮಾಡಲಾಗಿತ್ತು. ಅದರಂತೆ ಅಂದುಕೊಂಡ ಟೈಮ್​ಗೆ ಈ ಅದ್ಧೂರಿ ಮದುವೆ ಸಮಾರಂಭ ದುಬೈನಲ್ಲಿ ನಡೆಯಿತು. ವಿವಾಹದಲ್ಲಿ ಈ ನವ ಜೋಡಿಗೆ ಬೆಲೆ ಬಾಳುವ ಮೌಲ್ಯಯುತ ವಸ್ತುಗಳನ್ನು ಸಂಬಂಧಿಗಳು ನೀಡಿದ್ದಾರೆ ಎನ್ನಲಾಗಿದೆ.

ಈ ಎಲ್ಲದಕ್ಕಿಂತ ಮಿಗಿಲಾಗಿ ನವವಧು ಆಯೇಷಾ ತಹಿರ್​ಗೆ, ತಂದೆ ಬರೋಬ್ಬರಿ 70 ಕೆ.ಜಿ ಬಂಗಾರದ ಇಟ್ಟಿಗೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ತಂದೆಯು ಮದುವೆ ನಿಮಿತ್ತ ಮಗಳ ತುಲಾಭಾರ ಮಾಡಿಸಿದ್ದಾರೆ. ಈ ವೇಳೆ ಮಗಳು 70 ಕೆ.ಜಿ ತೂಗಿದ್ದಾರೆ. ಹೀಗಾಗಿ 70 ಕೆ.ಜಿ ಚಿನ್ನವನ್ನು ತೂಗಿ ಮಗಳಿಗೆ ಉಡುಗೊರೆಯಾಗಿ ನೀಡಲಾಗಿದೆ ಎಂದು ಹೇಳಲಾಗಿದೆ.

ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಧು ಆಯೇಷಾ, ತುಲಭಾರ ಮಾಡಿದ ಇಟ್ಟಿಗೆಗಳೆಲ್ಲ ನಿಜವಾದ ಚಿನ್ನವಲ್ಲ. ಅವುಗಳೆಲ್ಲ ಚಿನ್ನ ಲೇಪಿತ. ಬಾಲಿವುಡ್​ ಸಿನಿಮಾದಲ್ಲಿನ ಒಂದು ದೃಶ್ಯದಂತೆ ಇದನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 70 ಕೆಜಿ ಬಂಗಾರದ ತುಲಾಭಾರ; ಮುದ್ದಿನ ಮಗಳಿಗೆ ತಂದೆ ಕೊಟ್ಟ ಗಿಫ್ಟ್‌ಗೆ ಎಲ್ರೂ ಶಾಕ್‌! ವಿಡಿಯೋ ನೋಡಿ

https://newsfirstlive.com/wp-content/uploads/2023/07/DUBAI_GOLD_70KG.jpg

Load More