newsfirstkannada.com

4 ವರ್ಷದ ಬಳಿಕ ಪಾಕ್​ನತ್ತ ಮುಖ ಮಾಡಿದ ಮಾಜಿ ಪ್ರಧಾನಿ ನವಾಜ್​ ಷರೀಫ್

Share :

21-10-2023

    ದುಬೈನಿಂದ ಚಾರ್ಟರ್ಡ್​ ವಿಮಾನದ ಮೂಲಕ ಪಾಕ್​ಗೆ ಆಗಮನ

    ಪಾಕಿಸ್ತಾನದ ಸದ್ಯದ ಸ್ಥಿತಿಗತಿ ಬಗ್ಗೆ ಮಾತನಾಡಿದ ನವಾಜ್​ ಷರೀಫ್​

    ದೇಶದ ಸಮಸ್ಯೆ ಪರಿಹರಿಸಲು ನಾವು ಸಮರ್ಥ ಎಂದ ಮಾಜಿ ಪ್ರಧಾನಿ

ನಾಲ್ಕು ವರ್ಷದ ಬಳಿಕ ಮಾಜಿ ಪ್ರಧಾನಿ ನವಾಜ್​ ಷರೀಫ್​ ಪಾಕಿಸ್ತಾನಕ್ಕೆ ಹಿಂತಿರುಗಿದ್ದಾರೆ. ದುಬೈನಿಂದ ಇಸ್ಲಾಮಾಬಾದ್​ಗೆ ಚಾರ್ಟರ್ಡ್​ ವಿಮಾನದ ಮೂಲಕ ಆಗಮಿಸಿದ್ದಾರೆ.

73 ವರ್ಷದ ಪಾಕಿಸ್ತಾನ್ ಮುಸ್ಲಿಂ ಲೀಗ್​ನ ​ಮುಖ್ಯಸ್ಥ ನವಾಜ್​ ಷರೀಫ್​ ದುಬೈನಲ್ಲಿ ಮಾತನಾಡಿದ್ದು, ಪಾಕ್​ನ ಸ್ಥಿತಿಗತಿ ಬಗ್ಗೆ ಮಾತನಾಡಿದ್ದಾರೆ. ಪಾಕ್​ ಸದ್ಯದ ಸ್ಥಿತಿ ಅಸ್ತವ್ತಸ್ತವಾಗಿದೆ ಎಂದು ಹೇಳಿದ್ದಾರೆ. ಬಳಿಕ ಹಣದ ಕೊರತೆಯಿಂದ ಬಳಲುತ್ತಿರುವ ದೇಶವನ್ನು ಸರಿಪಡಿಸಲು ಪಿಎಂಎಲ್​ಎನ್​ ಪಕ್ಷ ಸಮರ್ಥವಾಗಿದೆ ಎಂದು ಹೇಳಿದ್ದಾರೆ.

ಪಾಕ್​ಗೆ ಬರುವ ಮುನ್ನ ಮಾತನಾಡಿದ ನವಾಜ್​ ಷರೀಫ್, ದೇಶದ ಸಮಸ್ಯೆ ಪರಿಹರಿಸಲು ನಾವು ಸಾಕಷ್ಟು ಸಮರ್ಥರಾಗಿದ್ದೇವೆ. ಪಾಕಿಸ್ತಾನದ ಜನರು ಕಷ್ಟದಲ್ಲಿ ಬದುಕುತ್ತಿದ್ದಾರೆ. ಇದು ಭಾರೀ ನೋವಿನಿಂದ ಕೂಡಿದೆ. ನಾವು ಅವರ ಪರಿಸ್ಥಿತಿಯನ್ನು ಸುಧಾರಿಸಬಹುದು ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ.

ಇದರೊಂದಿಗೆ ಪಾಕಿಸ್ತಾನದ ಚುನಾವಣಾ ಆಯೋಗಕ್ಕೆ ಚುನಾವಣೆಯ ದಿನಾಂಕ ನಿರ್ಧರಿಸುವ ಅಧಿಕಾರವಿದೆ ಎಂದು ನವಾಜ್​ ಷರೀಫ್ ಹೇಳಿದ್ದಾರೆ.

ನವಾಜ್​ ಷರೀಫ್ ಆರೋಗ್ಯ ಸಮಸ್ಯೆಯಿಂದಾಗಿ ಲಂಡನ್​ ಹೋಗಿ ನೆಲೆಸಿದ್ದರು. ಬಳಿಕ ಅಲ್ಲಿಂದ ದುಬೈಯತ್ತ ಮುಖಮಾಡಿ ಅಲ್ಲೇ ಉಳಿದುಕೊಂಡಿದ್ದರು. ಆದರೀಗ 4 ವರ್ಷದ ಬಳಿಕ ಪಾಕ್​ಗೆ ಬಂದಿಳಿದ್ದಾರೆ.

4 ವರ್ಷದ ಬಳಿಕ ಪಾಕ್​ನತ್ತ ಮುಖ ಮಾಡಿದ ಮಾಜಿ ಪ್ರಧಾನಿ ನವಾಜ್​ ಷರೀಫ್

https://newsfirstlive.com/wp-content/uploads/2023/10/nawaz-sharif.jpg

Load More