newsfirstkannada.com

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್​​ಗೆ 3 ವರ್ಷ ಜೈಲು; ಕಾರಣವೇನು ಗೊತ್ತಾ?

Share :

05-08-2023

  ಇಮ್ರಾನ್ ಖಾನ್ ವಿರುದ್ಧ ಆರೆಸ್ಟ್ ವಾರೆಂಟ್

  ಐದು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ​ ಹೇಳಿದ ಕೋರ್ಟ್​

  ಪಾಕ್ ಮಾಜಿ ಪ್ರಧಾನಿಗೆ ಜೈಲು ಶಿಕ್ಷೆ ವಿಧಿಸಿದ ಇಸ್ಲಾಮಾಬಾದ್​ ಕೋರ್ಟ್

ತೋಶಖಾನಾ ವಂಚನೆ ಪ್ರಕರಣಲ್ಲಿ ತಗಲಾಕಿಕೊಂಡಿದ್ದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಇಸ್ಲಾಮಾಬಾದ್ ಜಿಲ್ಲಾ ಮತ್ತು ಸೆಷನ್ಸ್ ​ ಕೋರ್ಟ್ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.  ನ್ಯಾಯಾಧೀಶ ಹುಮಾಯೂನ್ ದಿಲಾವರ್ ತೀರ್ಪು ಪ್ರಕಟಿಸಿದ್ದು, 1 ಲಕ್ಷ ರೂಪಾಯಿ ದಂಡ ಕಟ್ಟಲು ಹೇಳಿದ್ದಾರೆ.

ಇಮ್ರಾನ್ ಖಾನ್ ವಿರುದ್ಧ ಆರೆಸ್ಟ್ ವಾರೆಂಟ್ ಜಾರಿಗೊಳಿಸಿದ ಕೋರ್ಟ್​, ಐದು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ​ ಹೇಳಿದೆ. ಜೊತೆಗೆ  ಸಂಸತ್​​ ಸ್ಥಾನವನ್ನು 5 ವರ್ಷಗಳ ಕಾಲ ಅನರ್ಹಗೊಳಿಸಿದೆ. ಹೀಗಾಗಿ ನ್ಯಾಯಲಯದ ತೀರ್ಪಿನ ಅನ್ವಯ 5 ವರ್ಷಗಳವರೆಗೆ  ಇಮ್ರಾನ್ ಖಾನ್ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.

ಏನಿದು ತೋಶಖಾನಾ ಪ್ರಕರಣ?

ಇಮ್ರಾನ್ ಖಾನ್ ಪ್ರಧಾನಿಯಾದ ಸಂದರ್ಭದಲ್ಲಿ ಸಿಗುತ್ತಿದ್ದ ಗಿಫ್ಟ್​ ಅನ್ನು ತೋಶಖಾನಾ ಇಲಾಖೆಯಲ್ಲಿ ಇಡಲಾಗುತ್ತಿತ್ತು. ಆದರೆ ಆ ಗಿಫ್ಟ್​ ಅನ್ನು ಇಮ್ರಾನ್ ಖಾನ್ ಮಾರಾಟ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇದೇ ವಿಚಾರ ಕೋರ್ಟ್​ ಮೆಟ್ಟಿಲೇರಿತ್ತು. ಇದೀಗ ಇಸ್ಲಾಮಾಬಾದ್​ ಕೋರ್ಟ್ ಈ ಪ್ರಕರಣಕ್ಕೆ ಸಂಬಂಧಿಸಿ ತೀರ್ಪು ನೀಡಿದೆ. ಇಮ್ರಾನ್ ಖಾನ್​ಗೆ ಶಿಕ್ಷೆ ವಿಧಿಸಿದೆ.

ಇನ್ನು ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿ ವಿಸರ್ಜನೆ ಮಾಡಲು ಪಾಕ್ ಪಿಎಂ ಶೆಹಬಾಜ್ ಷರೀಫ್ ನಿರ್ಧಾರಿಸಿದ್ದಾರೆ.  ಆಗಸ್ಟ್​ 9ನೇ ತಾರೀಖು ಸಂಸತ್ತು ವಿಸರ್ಜನೆ ಆಗಲಿದೆ. ಸಂಸತ್ತು ವಿಸರ್ಜನೆ ಆದ 90 ದಿನದ ಒಳಗೆ ಚುನಾವಣೆ ನಡೆಯಬೇಕಿದೆ. ಆದರೆ ಅದಕ್ಕೂ ಮೊದಲೇ ಇಸ್ಲಾಮಾಬಾದ್​ ಕೋರ್ಟ್ ಮಾಜಿ ಪ್ರಧಾನಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಒಂದು ವೇಳೆ ಪಾಕಿಸ್ತಾನದ ಮುಸ್ಲಿಂ ಲೀಂಗ್ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಬಹುಮತ ಸಿಕ್ಕರೆ, ಪಾಕ್‌ಗೆ ನವಾಜ್ ಷರೀಫ್ ವಾಪಸಾಗುವ ಮತ್ತು ಪ್ರಧಾನಿಯಾಗುವ ಸಾಧ್ಯತೆ ಇದೆ. ಸದ್ಯ ಇಮ್ರಾನ್ ಖಾನ್ ಬಂಧನ ವಿರೋಧಿಸಿ ಪಿಟಿಐ ಪಕ್ಷದ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯುತ್ತಿದೆ. ಲಾಹೋರ್​ನ ಇಮ್ರಾನ್ ಖಾನ್ ನಿವಾಸದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್​​ಗೆ 3 ವರ್ಷ ಜೈಲು; ಕಾರಣವೇನು ಗೊತ್ತಾ?

https://newsfirstlive.com/wp-content/uploads/2023/07/Imran-Khan.jpg

Load More