newsfirstkannada.com

Video: ಭಾರತದ ಮೇಲೆ ಪಾಕ್​ ಗುಂಡಿನ ದಾಳಿ.. ಕರ್ನಾಟಕ ಮೂಲದ BSF ಯೋಧನಿಗೆ ಗಾಯ

Share :

27-10-2023

    ಮತ್ತೆ ಗಡಿಯಲ್ಲಿ ಬಾಲ ಬಿಚ್ಚಿದ ಪಾಕಿಸ್ತಾನ

    ಕದನ ವಿರಾಮ ಉಲ್ಲಂಘಿಸಿ ಗುಂಡು ಹಾರಿಸಿದ ಪಾಕ್​

    8 ಗಂಟೆ ಸುಮಾರಿಗೆ ಅರ್ನಿಯಾ ಪ್ರದೇಶದಲ್ಲಿ ಗುಂಡಿನ ಚಕಮಕಿ

ಭಾರತದ ಗಡಿಯಲ್ಲಿ ಪಾಕಿಸ್ತಾನ ಮತ್ತೆ ತನ್ನ ಬಾಲವನ್ನ ಬಿಚ್ಚಿದೆ. ಕದನ ವಿರಾಮ ಉಲ್ಲಂಘಿಸಿ ಕಳೆದ ರಾತ್ರಿ 8 ಗಂಟೆ ಸುಮಾರಿಗೆ ಕಾಶ್ಮೀರದ ಆರ್​.ಎಸ್​ ಪುರದ ಅರ್ನಿಯಾ ಪ್ರದೇಶದಲ್ಲಿ ಪಾಕ್​​ ಗುಂಡಿನ ದಾಳಿ ನಡೆಸಿದೆ.

ಬಿಎಸ್​ಎಫ್​ ಕ್ಯಾಂಪ್​ಗಳನ್ನೆ ಟಾರ್ಗೆಟ್​​ ಮಾಡಿದ ಪಾಕ್​ ಸಾಯಿ ಖುರ್ಡ್​, ಬುರೆಜಲ್​, ಚಕ್ಬುಲ್ಲಾ ಮತ್ತು ದೇವಿಗರ್​ ಗ್ರಾಮಗಳ ಸುತ್ತಲೂ ಗುಂಡಿನ ದಾಳಿ ನಡೆಸಿದೆ. ಇದರ ಪರಿಣಾಮ ಕರ್ನಾಟಕ ಮೂಲದ BSF ಯೋಧರಾದ ಬಸವರಾಜ್ SR ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರತ ಕೂಡ ಪ್ರತಿದಾಳಿ ನಡೆಸುತ್ತಿದೆ.

ಭಾರತ ಮತ್ತು ಪಾಕಿಸ್ತಾನ ಫೆಬ್ರವರಿ 25, 2021ರಲ್ಲಿ ಜಮ್ಮು ಮತ್ತು ಮಾಶ್ಮೀರ ನಿಯಂತ್ರಣ ರೇಖೆಯ ಉದ್ದಕ್ಕೂ ಕದನ ವಿರಾಮ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಒಪ್ಪಂದವನ್ನು ಮಾಡಿಕೊಂಡಿತು. ಆದರೆ ಈ ಒಪ್ಪಂದದ ಬಳಿಕ ಪಾಕ್​ ಅನೇಕ ಬಾರಿ ಕದನ ವಿರಾಮ ಉಲ್ಲಂಘಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಭಾರತದ ಮೇಲೆ ಪಾಕ್​ ಗುಂಡಿನ ದಾಳಿ.. ಕರ್ನಾಟಕ ಮೂಲದ BSF ಯೋಧನಿಗೆ ಗಾಯ

https://newsfirstlive.com/wp-content/uploads/2023/10/Indian-Army.jpg

Load More