newsfirstkannada.com

ಭಾರತ ಫೈನಲ್ ಪ್ರವೇಶಿಸಿದ್ದಕ್ಕೆ ಪಾಕ್​ಗೆ ಹೊಟ್ಟೆಕಿಚ್ಚು; ಕ್ಯಾಪ್ಟನ್ ರೋಹಿತ್ ವಿರುದ್ಧ ‘ಟಾಸ್ ಫಿಕ್ಸಿಂಗ್’​ ಆರೋಪ..!

Share :

16-11-2023

    ಟಾಸ್​ ವೇಳೆ ರೋಹಿತ್ ಶರ್ಮಾ ಚೀಟಿಂಗ್ ಮಾಡ್ತಾರಂತೆ

    ರೋಹಿತ್ ನಾಣ್ಯ ಎಸೆಯುವ ವಿಡಿಯೋ ಶೇರ್ ಮಾಡಿ ಆಕ್ರೋಶ

    ವಿಶ್ವಕಪ್​​ನಲ್ಲಿ ಸೋತು ಭಾರತದ ವಿರುದ್ಧ ಇಲ್ಲ-ಸಲ್ಲದ ಆರೋಪ

ವಿಶ್ವಕಪ್​​ನಲ್ಲಿ ಸೋತು ಸುಣ್ಣವಾಗಿರುವ ಪಾಕಿಸ್ತಾನ ತಂಡ ತವರು ಸೇರಿದೆ. ಮತ್ತೊಂದು ಕಡೆ ಅಪ್ರತಿಮ ಪ್ರದರ್ಶನ ನೀಡುತ್ತಿರುವ ಭಾರತ ತಂಡವು ಫೈನಲ್ ಪ್ರವೇಶ ಮಾಡಿದೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಪ್ರದರ್ಶಿಸುತ್ತಿರುವ ಅದ್ಭುತ ಹೋರಾಟವನ್ನು ಪಾಪಿ ಪಾಕಿಸ್ತಾನಕ್ಕೆ ಸ್ವಾಗತಿಸಲು ಸಾಧ್ಯವಾಗುತ್ತಿಲ್ಲ.

ಭಾರತ ಕ್ರಿಕೆಟ್ ತಂಡದ ಆಟಗಾರರು, ಬಿಸಿಸಿಐ ಹಾಗೂ ತಂಡದ ವಿರುದ್ಧ ಇಲ್ಲ-ಸಲ್ಲದ ಆರೋಪಗಳನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಮಾಡ್ತಿದ್ದಾರೆ. ಮುಂದುವರಿದ ಭಾಗವಾಗಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಿಕಂದರ್ ಭಖ್ತ್​​, ಕ್ಯಾಪ್ಟನ್ ರೋಹಿತ್ ಶರ್ಮಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಟೀಕೆ ಮಾಡಲು ಯಾವುದೇ ವಿಷಯ ಸಿಗದೇ, ಟಾಸ್​ ವಿಚಾರದಲ್ಲಿ ರೋಹಿತ್ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.

ಏನಿದು ಆರೋಪ..?

ಸಿಕಂದರ್ ಭಖ್ತ್ ಆರೋಪವು ಸಂಪೂರ್ಣ ಅಸಂಬದ್ಧವಾಗಿದೆ. ಟಾಸ್ ಸಮಯದಲ್ಲಿ ರೋಹಿತ್ ಶರ್ಮಾ ಉದ್ದೇಶಪೂರ್ವಕವಾಗಿ ನಾಣ್ಯವನ್ನು ಮೇಲಕ್ಕೆ ಚಿಮ್ಮುತ್ತಾರೆ. ಅದನ್ನು ಇತರೆ ತಂಡದ ನಾಯಕರು ಗಮನಿಸಲು ಹೋಗುವುದಿಲ್ಲ. ಪರಿಣಾಮ ರೋಹಿತ್ ಪರವಾಗಿ ಟಾಸ್ ನಿರ್ಧಾರ ಬರುತ್ತದೆ. ನಾನು ಹೇಳುವುದು ಸತ್ಯ, ಅದಕ್ಕೆ ರೋಹಿತ್ ಶರ್ಮಾ ಟಾಸ್ ವೇಳೆ ನಾಣ್ಯವನ್ನು ಚಿಮ್ಮುವ ಶೈಲಿಗೂ, ಇತರೆ ತಂಡದ ಕ್ಯಾಪ್ಟನ್ ನಾಣ್ಯವನ್ನು ಎಸೆಯುವ ರೀತಿಯನ್ನು ನೀವು ಗಮನಿಸಬೇಕು ಎಂದಿದ್ದಾರೆ.

ರೋಹಿತ್ ಹಾರಿಸಿದ ನಾಣ್ಯದ ಮೇಲ್ಭಾಗ ಎದುರಾಳಿ ತಂಡದ ಕ್ಯಾಪ್ಟನ್​ಗೆ ಕಾಣುವುದಿಲ್ಲ. ಇದರಿಂದ ಟಾಸ್ ಮಾಡಿ ಏನು ಪ್ರಯೋಜನ? ಯಾಕಂದರೆ ಕ್ರಿಕೆಟ್ ಅನ್ನು ಬಿಸಿಸಿಐ ನಿಯಂತ್ರಿಸುತ್ತಿದೆ. ಐಸಿಸಿ ಈ ಬಗ್ಗೆ ಮಾತನಾಡುವುದಿಲ್ಲ. ಪರಿಣಾಮ ಭಾರತ ಗೆಲ್ಲುತ್ತ ಬಂದಿದೆ. 2011ರ ವಿಶ್ವಕಪ್‌ನಲ್ಲಿ ಭಾರತದ ಗೆಲುವು ಕೂಡ ವಿವಾದಗಳಿಂದ ಕೂಡಿತ್ತು ಎಂದು ಕಿಡಿಕಾರಿದ್ದಾರೆ. ಪಾಕ್​ನ ಸ್ಥಳೀಯ ಚಾನೆಲ್‌ನಲ್ಲಿ ಮಾತನಾಡುತ್ತಾ ಈ ಗಂಭೀರ ಆರೋಪ ಮಾಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಭಾರತ ಫೈನಲ್ ಪ್ರವೇಶಿಸಿದ್ದಕ್ಕೆ ಪಾಕ್​ಗೆ ಹೊಟ್ಟೆಕಿಚ್ಚು; ಕ್ಯಾಪ್ಟನ್ ರೋಹಿತ್ ವಿರುದ್ಧ ‘ಟಾಸ್ ಫಿಕ್ಸಿಂಗ್’​ ಆರೋಪ..!

https://newsfirstlive.com/wp-content/uploads/2023/11/ROHIT-11.jpg

Load More