newsfirstkannada.com

×

Watch: ದೇಶ ಬಿಟ್ಟು ಹೋಗಿದ್ದ ನವಾಜ್ ಷರೀಫ್ 4 ವರ್ಷದ ಬಳಿಕ ರೀ ಎಂಟ್ರಿ; ಪಾಕ್ ರಾಜಕಾರಣದಲ್ಲಿ ಹೊಸ ಸೆನ್ಸೇಷನ್..!

Share :

Published October 21, 2023 at 6:10am

    ಲಾಹೋರ್ ಬೀದಿ, ಬೀದಿಯಲ್ಲೂ ಶಕ್ತಿ ಪ್ರದರ್ಶಿಸಲು ರೆಡಿಯಾದ ಬೆಂಬಲಿಗರು

    2019ರಲ್ಲಿ ಅನಾರೋಗ್ಯದ ಕಾರಣಕ್ಕೆ ದೇಶ ಬಿಟ್ಟು ಹೋಗಿದ್ದ ನವಾಜ್ ಷರೀಫ್

    ಸ್ವಾಗತಕ್ಕೆ ಪಾಕ್‌ ಮುಸ್ಲಿಂ ಲೀಗ್ ನವಾಜ್ ಪಕ್ಷದ ಕಾರ್ಯಕರ್ತರು ಸಜ್ಜು

ಲಾಹೋರ್‌: ನಿನ್ನೆವರೆಗೂ ಇದ್ದ ಪಾಕಿಸ್ತಾನದ ರಾಜಕೀಯವೇ ಬೇರೇ. ಇಂದಿನಿಂದ ಶುರುವಾಗೋ ಪಾಕ್ ರಾಜಕಾರಣವೇ ಬೇರೆ. ಬರೋಬ್ಬರಿ 4 ವರ್ಷದ ಬಳಿಕ ಮಾಜಿ ಪ್ರಧಾನಿ ನವಾಜ್ ಷರೀಫ್ ಇಂದು ಲಾಹೋರ್‌ಗೆ ಆಗಮಿಸುತ್ತಿದ್ದಾರೆ. ಮಾಜಿ ಪ್ರಧಾನಮಂತ್ರಿಯ ಆಹ್ವಾನಕ್ಕೆ ಅವರ ಬೆಂಬಲಿಗರು, ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ ಪಕ್ಷದ ಕಾರ್ಯಕರ್ತರು ಸಂಪೂರ್ಣವಾಗಿ ಸಜ್ಜಾಗಿದ್ದಾರೆ.

ಮಾಜಿ ಪ್ರಧಾನಿ ನವಾಜ್ ಷರೀಫ್ ಸ್ವಾಗತಕ್ಕೆ ಲಾಹೋರ್ ಸಂಪೂರ್ಣವಾಗಿ ಸಜ್ಜಾಗಿದೆ. ಎಲ್ಲೆಲ್ಲೂ ಮುಸ್ಲಿಂ ಲೀಗ್ ನವಾಜ್ ಪಕ್ಷದ ಬಾವುಟಗಳು ರಾರಾಜಿಸುತ್ತಿವೆ. ನವಾಜ್ ಷರೀಫ್ ಆಗಮನವನ್ನೇ ಎದುರು ನೋಡುತ್ತಿರುವ ಅವರ ಬೆಂಬಲಿಗರು ಭರ್ಜರಿ ಶಕ್ತಿ ಪ್ರದರ್ಶಿಸಲು ಸಜ್ಜಾಗಿದ್ದಾರೆ.

ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಗೆ ಇನ್ನು 2 ತಿಂಗಳಷ್ಟೇ ಬಾಕಿ ಇದೆ. 2024ರ ಜನವರಿಯಲ್ಲಿ ನಡೆಯುವ ಚುನಾವಣೆಗೂ ಮುನ್ನವೇ ನವಾಜ್ ಷರೀಫ್ ಅವರು ಪಾಕಿಸ್ತಾನಕ್ಕೆ ರೀ ಎಂಟ್ರಿ ಕೊಡುತ್ತಿದ್ದಾರೆ. ನವಾಜ್ ಷರೀಫ್ ಅವರ ಆಗಮನ ಪಾಕ್ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ ಪಕ್ಷದಿಂದ ಹೊಂದಾಣಿಕೆ ಮಾಡಿಕೊಳ್ಳಲು ಇತರೆ ರಾಜಕೀಯ ಪಕ್ಷಗಳು ಮುಂದಾಗಿದ್ದು, ಚುನಾವಣೆಯಲ್ಲಿ ಗೆದ್ರೆ ನವಾಜ್ ಷರೀಫ್ ಅವರು ಮತ್ತೊಮ್ಮೆ ಪ್ರಧಾನಮಂತ್ರಿ ಆಗುವ ಸಾಧ್ಯತೆಯಿದೆ.

2019ರಲ್ಲಿ ದೇಶ ಬಿಟ್ಟು ಲಂಡನ್‌ಗೆ ಪಯಣ

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು 2019ರಲ್ಲಿ ಅನಾರೋಗ್ಯದ ಕಾರಣಕ್ಕೆ ದೇಶ ಬಿಟ್ಟು ಹೋಗಿದ್ದರು. ಸತತ 4 ವರ್ಷಗಳ ಬಳಿಕ ಇಂದು ತಮ್ಮ ಬೆಂಬಲಿಗರ ಜೊತೆ ದುಬೈ ಮೂಲಕ ಲಾಹೋರ್ ತಲುಪುತ್ತಿದ್ದಾರೆ. ನವಾಜ್ ಷರೀಫ್ ಪಾಕಿಸ್ತಾನಕ್ಕೆ ಕಾಲಿಡುತ್ತಿದ್ದಂತೆ ಬೃಹತ್ ಶಕ್ತಿ ಪ್ರದರ್ಶಿಸಲು, ಬೃಹತ್ ಱಲಿ, ಮೆರವಣಿಗೆ ಮಾಡಲು ಅವರ ಬೆಂಬಲಿಗರು ಈಗಾಗಲೇ ಲಾಹೋರ್‌ ಬೀದಿ, ಬೀದಿಯಲ್ಲೂ ಕಾಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Watch: ದೇಶ ಬಿಟ್ಟು ಹೋಗಿದ್ದ ನವಾಜ್ ಷರೀಫ್ 4 ವರ್ಷದ ಬಳಿಕ ರೀ ಎಂಟ್ರಿ; ಪಾಕ್ ರಾಜಕಾರಣದಲ್ಲಿ ಹೊಸ ಸೆನ್ಸೇಷನ್..!

https://newsfirstlive.com/wp-content/uploads/2023/10/nawaz-Shariff-1.jpg

Load More