ಭಾರತ ಬದಲಾಗೋ ವಿಚಾರ ಪಾಕಿಸ್ತಾನದಲ್ಲೂ ಭಾರೀ ಚರ್ಚೆ
ಇಂಡಿಯಾ ಹೆಸರಿನ ಮೇಲೆ ಹಕ್ಕು ಸಾಧಿಸಲು ಪಾಕಿಸ್ತಾನ ಚಿಂತನೆ
ಭಾರತವನ್ನು ಹಿಂದೂಸ್ತಾನ ಎಂದೇ ಕರೆಯಬೇಕು ಎಂದಿದ್ದ ಜಿನ್ನಾ
ಇಂಡಿಯಾ ಇನ್ಮುಂದೆ ಭಾರತ.. ದೇಶದ ಮರುನಾಮಕರಣದ ವಿಚಾರ ಕೇವಲ ಭಾರತದಲ್ಲಷ್ಟೇ ಅಲ್ಲ ಪಾಕಿಸ್ತಾನದಲ್ಲೂ ಬಹಳಷ್ಟು ಚರ್ಚೆಯಾಗಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂಡಿಯಾ ಅನ್ನೋ ದೇಶದ ಹೆಸರನ್ನು ಭಾರತ್ ಎಂದು ಬದಲಾಯಿಸಲಿದೆ ಎನ್ನಲಾಗಿದೆ. ಈ ಮರುನಾಮಕರಣದ ವಿವಾದಕ್ಕೆ ದೇಶಾದ್ಯಂತ ಪರ, ವಿರೋಧದ ಚರ್ಚೆಯಾಗುತ್ತಿದೆ. ಇನ್ನೂ ಭಾರತದ ಸಂಸತ್‌ನಲ್ಲಿ ಮರುನಾಮಕರಣದ ವಿಚಾರವೇ ಪ್ರಸ್ತಾಪವಾಗಿಲ್ಲ. ಸಂವಿಧಾನದಲ್ಲಿ ತಿದ್ದುಪಡಿಯೂ ಆಗಿಲ್ಲ. ಅಷ್ಟರಲ್ಲಾಗಲೇ ಇಂಡಿಯಾ ಮೇಲೆ ನೆರೆರಾಷ್ಟ್ರ ಪಾಕಿಸ್ತಾನದ ಕಣ್ಣು ಬಿದ್ದಿದೆ.
ಒಂದು ವೇಳೆ ದೇಶದ ಹೆಸರನ್ನು ಭಾರತ ಬದಲಾವಣೆ ಮಾಡಿದರೆ ಇಂಡಿಯಾ ಹೆಸರಿನ ಮೇಲೆ ಹಕ್ಕು ಸಾಧಿಸಲು ಪಾಕಿಸ್ತಾನ ಚಿಂತನೆ ನಡೆಸಿದೆ. ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಇಂಡಿಯಾ ಬದಲು ಭಾರತ ಎಂದು ಮಾನ್ಯತೆ ಸಿಕ್ಕರೆ ಆಗ ಪಾಕಿಸ್ತಾನ ತನ್ನ ಹಕ್ಕು ಮಂಡಿಸಲು ಮುಂದಾಗಿದೆ. ಪಾಕಿಸ್ತಾನ ಕೂಡ ಇಂಡಸ್ ನದಿಯ ಪಾತ್ರದಲ್ಲಿದೆ. ಹೀಗಾಗಿ ಇಂಡಿಯಾ ಹೆಸರಿನ ಮೇಲೆ ಹಕ್ಕು ಸಾಧಿಸಲು ಪಾಕಿಸ್ತಾನ ಮಂಡಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಭಾರತ ಎಂದು ಮರುನಾಮಕರಣ; ಇಂಡಿಯಾ ಹೆಸರು ಬದಲಿಸೋಕೆ ಕಾರಣವೇನು?
ಭಾರತಕ್ಕೆ ಸ್ವಾತಂತ್ರ್ಯ ಸಿಗೋ ಮುನ್ನವೇ ಪಾಕಿಸ್ತಾನದ ಪಿತಾಮಹ ಮಹಮ್ಮದ್ ಅಲಿ ಜಿನ್ನಾ ಅವರು ಇಂಡಿಯಾ ಹೆಸರಿಗೆ ವಿರೋಧ ವ್ಯಕ್ತಪಡಿಸಿದ್ದರು. ನಮ್ಮದು ಪಾಕಿಸ್ತಾನ, ಇಂಡಿಯಾ ಹಿಂದೂಸ್ತಾನ. ಭಾರತವನ್ನು ಹಿಂದೂಸ್ತಾನ ಎಂದು ಕರೆಯಬೇಕೇ ವಿನಃ ಇಂಡಿಯಾ ಅಲ್ಲ ಎಂದು ಮಹಮ್ಮದ್ ಅಲಿ ಜಿನ್ನಾ ಹೇಳಿದ್ದರು. ಆದರೆ ಸಂವಿಧಾನದ ರಚನಾ ಸಭೆಯಲ್ಲಿ ಇಂಡಿಯಾ ಹಾಗೂ ಭಾರತ ಎಂದು ಹೆಸರಿಡಲು ಹೆಚ್ಚು ವೋಟ್ ಹಾಕಲಾಯಿತು. ಹೀಗಾಗಿ ಸಂವಿಧಾನದ ಆರ್ಟಿಕಲ್ 1 ರಲ್ಲಿ ಇಂಡಿಯಾ ಅಂದರೆ ಭಾರತವು ರಾಜ್ಯಗಳ ಒಕ್ಕೂಟ ಎಂದು ಉಲ್ಲೇಖಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ