newsfirstkannada.com

ವಿಶ್ವಕಪ್.. ಭಾರತ ತಂಡಕ್ಕೆ ಓಪನ್ ಚಾಲೆಂಜ್​​ ಹಾಕಿದ ಪಾಕ್​​​​​ ಆಟಗಾರ.. ಏನದು..?

Share :

19-08-2023

  ಏಷ್ಯಾಕಪ್​​-ವಿಶ್ವಕಪ್​ ಮುನ್ನ ಮಾತಿನ ಸಮರ ಶುರು

  ಸ್ಟಾರ್ ವೇಗಿ ಬೂಮ್ರಾರನ್ನು ಟಾರ್ಗೆಟ್ ಮಾಡಿದ ಪಾಕ್

  ಕೆಣಕಿದವರಿಗೆ ತಕ್ಕ ಉತ್ತರ ನೀಡ್ತಾರಾ ಯಾರ್ಕರ್ ಕಿಂಗ್​?

ಕ್ರಿಕೆಟ್ ವಿಚಾರಕ್ಕೆ ಬಂದ್ರೆ ಭಾರತ-ಪಾಕಿಸ್ತಾನ ಹಾವು-ಮುಂಗುಸಿ. ವೈರಿಗಳ ಕದನ ನೋಡುಗರಿಗೆ ಮಹಾಹಬ್ಬ. ಕ್ರಿಕೆಟ್​ ದುಷ್ಮನ್ಸ್​​ ಮತ್ತೆ ಯಾವಾಗ ಕಾದಾಡುತ್ತವೆ ಅಂತ ಫ್ಯಾನ್ಸ್ ಕಾಯ್ತಿದ್ದಾರೆ. ಇಂತಹ ಹೊತ್ತಲ್ಲಿ ಪಾಕಿಸ್ತಾನ ತಂಡ ಟೀಮ್ ಇಂಡಿಯಾಗೆ ಓಪನ್ ಚಾಲೆಂಜ್ ಹಾಕಿದೆ.

ಮುಂದಿನ ಮೂರು ತಿಂಗಳು ಕ್ರಿಕೆಟ್ ಪ್ರಿಯರಿಗೆ ಹಬ್ಬ. ಭರಪೂರ ಮನರಂಜನೆ ಸಿಗಲಿದೆ. ಆಗಸ್ಟ್​​​ 30 ದಿಂದ ಏಷ್ಯಾಕಪ್ ಟೂರ್ನಿ ರಂಗೇರಲಿದೆ. ಇದು ಮುಗಿದ ಮೂರು ವಾರಕ್ಕೆ ಸರಿಯಾಗಿ ಬಹುನಿರೀಕ್ಷಿತ ಎಕದಿನ ವಿಶ್ವಕಪ್ ದಂಗಲ್​​​ ಸ್ಟಾರ್ಟ್​ ಆಗಲಿದೆ. ಎರಡು ಬಿಗ್ ಈವೆಂಟ್ಸ್​​ ಶುರುವಾಗುವ ಮುನ್ನವೇ ಮಾತಿನ ಸಮರ ಜೋರಾಗಿದೆ.

ಏಷ್ಯಾಕಪ್​​-ವಿಶ್ವಕಪ್​ ಮುನ್ನ ಶುರುವಾಯ್ತು ಮಾತಿನ ಸಮರ

ಕ್ರಿಕೆಟ್ ಗೇಮ್​ ಅನ್ನೋದು ಬರೀ ಅಂಗಳದ ಆಟವಲ್ಲ. ಇದೊಂದು ಮೈಂಡ್​ ಗೇಮ್​​​ ಕೂಡ. ಅಂಗಳದಲ್ಲಿ ಸಿಕ್ಸರ್​​-ಬೌಂಡ್ರಿಗಳ ಸಮರ ಏರ್ಪಟ್ಟಂತೆ ಆಫ್​ ದಿ ಫೀಲ್ಡ್​​ನಲ್ಲಿ ಪ್ರತಿ ಬಾರಿಯು ಟಾಕ್ ವಾರ್​ ನಡೆಯುತ್ತೆ. ಮೋಸ್ಟ್​ ಎಕ್ಸೈಟಿಂಗ್​ ಏಷ್ಯಾಕಪ್​​ ಟೂರ್ನಿ ಸಮೀಪಿಸಿದ ಬೆನ್ನಲ್ಲೇ ಪಾಕಿಸ್ತಾನ ಪ್ಲೇಯರ್​ ಟೀಮ್ ಇಂಡಿಯಾಗೆ ಓಪನ್ ಚಾಲೆಂಜ್ ಹಾಕಿದ್ದಾರೆ.

ನಮಗೆ ಜಸ್​​ಪ್ರೀತ್​​ ಬೂಮ್ರಾ ಕಂಡ್ರೆ ಭಯವಿಲ್ಲ

ಏಷ್ಯಾಕಪ್​​-ಒನ್ಡೇ ವಿಶ್ವಕಪ್​​​​​​ ಶುರುವಿಗೂ ಮುನ್ನ ಪಾಕಿಸ್ತಾನ ತಂಡದ ಅಬ್ದುಲ್​​ ಶಫೀಕ್​ ನಮಗೆ ಬೂಮ್ರಾ ಕಂಡರೆ ಭಯ ಇಲ್ಲ ಎಂದಿದ್ದಾರೆ. ನಮಗೆ ಜಸ್​​ಪ್ರೀತ್​​​​​​​​​ ಬೂಮ್ರಾ ಕಂಡ್ರೆ ಯಾವುದೇ ಕಾರಣಕ್ಕೂ ಭಯ ಇಲ್ಲ. ಬುಮ್ರಾ ಅವರ ಬೌಲಿಂಗ್​​ಅನ್ನು ಈಸೀಯಾಗಿ ಫೇಸ್​​​ ಮಾಡ್ತೀವಿ ಎಂದು ಹೇಳುವ ಮೂಲಕ ಏಷ್ಯಾಕಪ್​​​ ಟೂರ್ನಿ ಮತ್ತಷ್ಟು ಕಾವೇರುವಂತೆ ಮಾಡಿದ್ದಾರೆ.

ಬೂಮ್ರಾ ನಮಗೆ ಯಾವ ಲೆಕ್ಕ..!

ನಮ್ಮ ಬೌಲಿಂಗ್ ಅಟ್ಯಾಕ್​​​ ಉತ್ತಮವಾಗಿದೆ. ವಿಶ್ವದರ್ಜೆಯ ಬೌಲರ್​​ಗಳನ್ನ ಹೊಂದಿದ್ದೇವೆ. ನೆಟ್ಸ್​​ನಲ್ಲಿ ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್​​ ಹಾಗೂ ನಸೀಮ್ ಶಾ ಬೌಲರ್​​ಗಳನ್ನ ಎದುರಿಸ್ತೀವಿ. ಇದರಿಂದ ನಮ್ಮ ಆತ್ಮ ವಿಶ್ವಾಸ ಹೆಚ್ಚಿದ್ದು ಸಿದ್ಧತೆಗೆ ಸಹಕಾರಿಯಾಗಲಿದೆ. ಜಸ್​ಪ್ರೀತ್ ಬೂಮ್ರಾ ಸುದೀರ್ಘ ಇಂಜುರಿ ಬಳಿಕ ತಂಡಕ್ಕೆ ವಾಪಾಸಾಗಿದ್ದಾರೆ. ಅವರ ಬಗ್ಗೆ ಭಯವಿಲ್ಲ. ನಾವು ಭಾರತ ತಂಡದ ವಿರುದ್ಧ ಉತ್ತಮವಾಗಿ ಆಡಲಿದ್ದೇವೆಅಬ್ದುಲ್​ ಶಫೀಕ್​​​, ಪಾಕಿಸ್ತಾನ ಕ್ರಿಕೆಟಿಗ

ಸೂಪರ್ ಸ್ಟಾರ್​ ಬೌಲರ್​​ನನ್ನ ಟಾರ್ಗೆಟ್​​ ಮಾಡಿದ್ಯಾಕೆ ಪಾಕ್?

ಏಷ್ಯಾಕಪ್​​​ ಆರಂಭಕ್ಕೆ ಎರಡು ವಾರ ಬಾಕಿ ಇರುವಾಗ ಪಾಕ್ ಪ್ಲೇಯರ್​ ಟೀಂ ಇಂಡಿಯಾ ಸ್ಟಾರ್ ವೇಗಿ ಜಸ್​ಪ್ರೀತ್ ಬೂಮ್ರಾ ಕೆಣಕಿದ್ದಾರೆ. ತಂಡದಲ್ಲಿ ಉಳಿದೆಲ್ಲ ಬೌಲರ್​ಗಳಿದ್ರೂ ಬುಮ್ರಾರನ್ನೇ ಟಾರ್ಗೆಟ್​ ಮಾಡಿದ್ದು ಡೆಫಿನೆಟ್ಲಿ ಮೈಂಡ್​ಗೇಮ್​ ಅನ್ನೋದ್ರಲ್ಲಿ ಯಾವುದೇ ಸಂಶಯವಿಲ್ಲ. ಯಾಕಂದ್ರೆ ಬುಮ್ರಾ ಟೀಮ್ ಇಂಡಿಯಾದ ಬೌಲಿಂಗ್​ ಟ್ರಂಪ್​ಕಾರ್ಡ್​. ಮ್ಯಾಚ್​ ವಿನ್ನಿಂಗ್​​ ಬೌಲರ್​​. ಇಂತಹ ಬೌಲರ್​​ನನ್ನು ಕೆಣಕಿದ್ರೆ ಮೆಂಟಲಿ ಕುಗ್ಗಿಸಬಹುದು ಅನ್ನೋದು ಬದ್ಧವೈರಿ ಪಾಕಿಸ್ತಾನ ತಂಡದ ಲೆಕ್ಕಚಾರ.

ಪಾಕಿಸ್ತಾನಿಗರು ಟೀಮ್ ಇಂಡಿಯಾವನ್ನು ಕೆರಳಿಸಿ ಆಗಿದೆ. ಅಬ್ದುಲ್ ಶಫೀಕ್​​ರ ಓಪನ್ ಚಾಲೆಂಜ್​​​ ಅನ್ನ ಮೆನ್​ ಬ್ಲೂ ಪಡೆ ಸಿರೀಸ್​ ಆಗಿ ತೆಗೆದುಕೊಳ್ಳುತ್ತಾ? ಗುರಿ ಮಾಡಿರೋ ಬೂಮ್ರಾ ಬ್ಯಾಕ್​​​ ವಿತ್ ಬ್ಯಾಂಗ್​ ಮೂಲಕ ಏಷ್ಯಾಕಪ್ ಹಾಗೂ ವಿಶ್ವಕಪ್​​ನಲ್ಲಿ ಪಾಕಿಸ್ತಾನದ ಹುಟ್ಟಡಗಿಸ್ತಾರಾ? ಆ ಮೂಲಕ ಬದ್ಧವೈರಿಯ ಬಾಯಿ ಮುಚ್ಚಿಸ್ತಾರಾ ಅನ್ನೋದಕ್ಕೆ ಕೆಲವೇ ದಿನಗಳಲ್ಲಿ ಆನ್ಸರ್ ಸಿಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಶ್ವಕಪ್.. ಭಾರತ ತಂಡಕ್ಕೆ ಓಪನ್ ಚಾಲೆಂಜ್​​ ಹಾಕಿದ ಪಾಕ್​​​​​ ಆಟಗಾರ.. ಏನದು..?

https://newsfirstlive.com/wp-content/uploads/2023/08/Team_INDIA.jpg

Load More