newsfirstkannada.com

ಭಾರತದ ಮೇಲೆ ಹಮಾಸ್ ರೀತಿ ದಾಳಿ ಮಾಡಲು ಪಾಕ್ ಉಗ್ರರ ಸಂಚು; ಗಡಿಯಲ್ಲಿ ಭಾರೀ ಕಟ್ಟೆಚ್ಚರ

Share :

08-11-2023

    ಪ್ಯಾರಾಚೂಟ್‌ಗಳ ಮೂಲಕ ಹಾರಿಕೊಂಡು ಬಂದ ಹಮಾಸ್ ಉಗ್ರರು

    ಹಮಾಸ್ ಮಾದರಿಯಲ್ಲೇ ಭಾರತದ ಮೇಲೆ ದಾಳಿ ಮಾಡಲು ಸಂಚು

    ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್ ಉಗ್ರರು ಭಯಾನಕ ಪ್ಲಾನ್

ನವದೆಹಲಿ: ಇಸ್ರೇಲ್‌ ಮೇಲೆ ದಿಢೀರ್‌ ದಾಳಿ ಮಾಡಿದ ಹಮಾಸ್ ಬಂಡುಕೋರರು ಅಕ್ಷರಶಃ ನರಕ ಸೃಷ್ಟಿಸಿದರು. ಹಮಾಸ್ ಉಗ್ರರ ಅಟ್ಟಹಾಸಕ್ಕೆ ತಿರುಗೇಟು ಕೊಟ್ಟಿರುವ ಇಸ್ರೇಲ್‌ ಸೇನೆ ಗಾಜಾ ಪಟ್ಟಿಯಲ್ಲಿ ಸ್ಮಶಾನವನ್ನೇ ಸೃಷ್ಟಿಸಿದೆ. ಇಸ್ರೇಲ್-ಹಮಾಸ್ ಉಗ್ರರ ಈ ಘನಘೋರ ಯುದ್ಧ ಆರಂಭವಾಗಿ 32 ದಿನಗಳೇ ಕಳೆದಿದೆ. ಈ ಭಯಾನಕ್ಕೆ ಯುದ್ಧಕ್ಕೆ ಕದನ ವಿರಾಮ ಘೋಷಿಸಬೇಕು ಅನ್ನೋ ಒತ್ತಡ ಇದ್ರೂ ಇಸ್ರೇಲ್ ಯಾರ ಮಾತನ್ನು ಕೇಳುತ್ತಿಲ್ಲ.

ಇಸ್ರೇಲ್, ಹಮಾಸ್‌ ಉಗ್ರರ ಯುದ್ಧದ ಕಾರ್ಮೋಡ ಎಲ್ಲೆಡೆ ಕವಿದಿರೋ ಮಧ್ಯೆ ಭಾರತದ ಗಡಿಯಿಂದ ಸ್ಫೋಟಕ ಸುದ್ದಿ ಹೊರ ಬಂದಿದೆ. ಇಸ್ರೇಲ್‌ ಮೇಲೆ ಹಮಾಸ್ ಉಗ್ರರು ಮಾಡಿದ ದಾಳಿ ಪಾಕಿಸ್ತಾನದ ಉಗ್ರ ಸಂಘಟನೆಗಳಿಗೆ ಪ್ರೇರಣೆಯಾಗಿದೆ. ಅದೇ ಮಾದರಿಯಲ್ಲಿ ಭಾರತದ ಮೇಲೆ ದಾಳಿ ಗಡಿಯಲ್ಲಿ ಭಯೋತ್ಪಾದಕರು ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ.

ಕಾಶ್ಮೀರದ ಅಜ್ಞಾತ ಸ್ಥಳದಲ್ಲಿ 60 ಉಗ್ರರು! 

ರಾಷ್ಟ್ರೀಯ ಸುದ್ದಿ ಸಂಸ್ಥೆಗಳ ವರದಿ ಪ್ರಕಾರ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಗಳು ಹಮಾಸ್ ಮಾದರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಮೇಲೆ ದಾಳಿ ಮಾಡಬಹುದು ಎನ್ನಲಾಗಿದೆ. ಅಂದ್ರೆ, ಹಮಾಸ್ ಉಗ್ರರು ಪ್ಯಾರಾಚೂಟ್‌ಗಳ ಮೂಲಕ ಹಾರಿಕೊಂಡು ಬಂದು ಇಸ್ರೇಲ್‌ ಮೇಲೆ ಭಯಾನಕ ದಾಳಿ ಮಾಡಿದ್ದರು. ಇದೀಗ ಹಮಾಸ್ ಮಾದರಿಯಲ್ಲೇ ಭಾರತದ ಮೇಲೆ ದಾಳಿ ಮಾಡಲು ಪಾಕ್ ಉಗ್ರರು ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.

ಭಾರತದ ಗಡಿ ರೇಖೆಯಲ್ಲಿ ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ಉಗ್ರರು ಸಕ್ರಿಯರಾಗಿದ್ದಾರೆ. ಕಳೆದ ತಿಂಗಳು ಗಡಿಯಲ್ಲಿ ಡ್ರೋನ್ ಹಾರಾಟಗಳು ಕಂಡು ಬಂದಿದೆ. ಆದರೆ ಪಾಕಿಸ್ತಾನದ ಆಂತರಿಕ ಬಿಕ್ಕಟ್ಟಿನಿಂದ ಹಣಕಾಸಿನ ನೆರವು ಸಾಧ್ಯವಾಗುತ್ತಿಲ್ಲ. ತೆಹ್ರಿಕ್-ಎ-ಜಿಹಾದ್ ಪಾಕಿಸ್ತಾನ್ (ಟಿಜೆಪಿ) ಮತ್ತು ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ದಾಳಿಯಿಂದ ಹಿನ್ನಡೆ ಅನುಭವಿಸುತ್ತಿದ್ದಾರೆ. ಆದರೂ 60 ವಿದೇಶಿ ಮೂಲಕ ಉಗ್ರರು ಕಾಶ್ಮೀರದ ಅಜ್ಞಾತ ಜಾಗಗಳಲ್ಲಿ ಕಾಯುತ್ತಿದ್ದಾರೆ ಅನ್ನೋ ವರದಿ ಗುಪ್ತಚರ ಇಲಾಖೆಗೆ ಲಭ್ಯವಾಗಿದೆ.

ಲಷ್ಕರ್-ಎ-ತೊಯ್ಬಾ ಕಮೆಂಡರ್ ಖ್ವಾಜಾ ಶಾಹಿದ್ ಅಲಿಯಾಸ್ ಮಿಯಾ ಮುಜಾಹಿದ್

ಈ ಎಲ್ಲಾ ಬೆಳವಣಿಗೆಯ ಮಧ್ಯೆ ಲಷ್ಕರ್-ಎ-ತೊಯ್ಬಾ ಕಮೆಂಡರ್ ಖ್ವಾಜಾ ಶಾಹಿದ್ ಅಲಿಯಾಸ್ ಮಿಯಾ ಮುಜಾಹಿದ್ ಸಾವನ್ನಪ್ಪಿರೋ ಬಗ್ಗೆ ವರದಿಯಾಗಿದೆ. ಈತ ಭಾರತಕ್ಕೆ ಮೋಸ್ಟ್ ವಾಂಟೆಂಡ್ ಉಗ್ರನಾಗಿದ್ದು, 2018ರ ಸುಂಜುವಾನ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದಾನೆ. ಎಲ್‌ಒಸಿಯ ಅತ್ಮುಕಾಮ್ ಸೆಕ್ಟರ್‌ನಲ್ಲಿ ಈ ಭಯೋತ್ಪಾದಕನ ಶವ ಪತ್ತೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತದ ಮೇಲೆ ಹಮಾಸ್ ರೀತಿ ದಾಳಿ ಮಾಡಲು ಪಾಕ್ ಉಗ್ರರ ಸಂಚು; ಗಡಿಯಲ್ಲಿ ಭಾರೀ ಕಟ್ಟೆಚ್ಚರ

https://newsfirstlive.com/wp-content/uploads/2023/11/Pak-Terror-on-Pakistan.jpg

Load More