newsfirstkannada.com

ಭಾರತ-ಪಾಕ್ ವಿಶ್ವಕಪ್‌ ಪಂದ್ಯ​ ನಡೆಯಲ್ವಾ?; ಮತ್ತೆ ಖ್ಯಾತೆ ತೆಗೆದ ಬದ್ಧವೈರಿಗೆ ಬುದ್ಧಿ ಕಲಿಸಲು BCCI ಪ್ಲಾನ್​- B ರೆಡಿ

Share :

10-07-2023

    ಭಾರತ-ಪಾಕ್ ಪಂದ್ಯ​ ನೋಡಲು ಹೋಟೆಲ್​ಗಳಿಗೆ ಡಿಮ್ಯಾಂಡ್

    ಪಾಕ್​ ಸರ್ಕಾರದ ನಿರ್ಧಾರದಿಂದ ಫ್ಯಾನ್ಸ್​ಗೆ ಮೋಸ ಆಗುತ್ತಾ..?

    ಇಂಡೋ- ಪಾಕಿಸ್ತಾನ​​ ಕ್ರಿಕೆಟ್​ ಕದನ ನಡೆಯೋದು ಅನುಮಾನ

ಏಕದಿನ ವಿಶ್ವಕಪ್​ ಷೆಡ್ಯೂಲ್​ ಅನೌನ್ಸ್​ ಆಗಿ 2 ವಾರಗಳೇ ಕಳೆದಿವೆ. ಬಿಸಿಸಿಐ & ಐಸಿಸಿ ಸಿದ್ಧತೆ ಆರಂಭಿಸಿದೆ. ಇದರ  ನಡುವೆ ಪಾಕಿಸ್ತಾನ ಮತ್ತೆ ಖ್ಯಾತೆ ತಗೆದಿದೆ. ಇದ್ರಿಂದಾಗಿ, ಇಂಡೋ- ಪಾಕ್​ ಹೈವೋಲ್ಟೆಜ್​ ಕದನ ನಡೆಯುತ್ತಾ, ನಡಿಯಲ್ವಾ ಅನ್ನೋ ಅನುಮಾನ ಅಭಿಮಾನಿಗಳಲ್ಲಿ ಹುಟ್ಟಿದೆ.

ಅಕ್ಟೋಬರ್​​ 15 ಈ ಒಂದು ದಿನಕ್ಕಾಗಿ ವಿಶ್ವಾದ್ಯಂತ ಕ್ರಿಕೆಟ್​ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಯಾಕಂದ್ರೆ, ಅಂದು ಬ್ಯಾಟಲ್ ಫೀಲ್ಡ್​ನಲ್ಲಿ ಮುಖಾಮುಖಿ ಆಗೋದು ಭಾರತ -ಪಾಕಿಸ್ತಾನ. ಈ ಪ್ರತಿಷ್ಟೆಯ ಕದನದಲ್ಲಿ ಉಭಯ ತಂಡಗಳಿಗೆ ಗೆಲುವೇ ಗುರಿ.

2 ತಿಂಗಳ ಮೊದಲೇ ಮುಗಿಲು ಮುಟ್ಟಿದ ಕ್ರೇಜ್​..!

ವಿಶ್ವಕಪ್​ ಫೈನಲ್​ ಪಂದ್ಯವನ್ನ ನೋಡ್ತಿವೋ ಇಲ್ವೋ ಗೊತ್ತಿಲ್ಲ. ಇಂಡೋ ಪಾಕ್​ ಪಂದ್ಯವನ್ನ ನೋಡಬೇಕು ಅನ್ನೋದು ವಿಶ್ವಾದ್ಯಂತ ಇರೋ ಅಭಿಮಾನಿಗಳ ಮಹದಾಸೆ. ಈಗಾಗಲೇ ಗುಜರಾತ್​​ ಅಹಮದಾಬಾದ್​ ನಗರದ ಹೋಟೆಲ್​ಗಳು, ಆ ಒಂದು ದಿನದ ವಾಸ್ತವ್ಯಕ್ಕೆ ಭಾರೀ ಬೆಲೆ ನಿಗದಿ ಪಡಿಸಿವೆ. 1 ದಿನಕ್ಕೆ 5 ಸಾವಿರ ಇದ್ದ ರೂಮ್​ ಬಾಡಿಗೆ ಈಗ 50 ಸಾವಿರದ ಗಡಿ ದಾಟಿದ್ಯಂತೆ. ಅಷ್ಟಾದ್ರೂ, ದಿನದಿಂದ ದಿನಕ್ಕೆ ಬುಕ್ಕಿಂಗ್​​ ಹೆಚ್ಚಾಗುತ್ತಲೇ ಇದೆ. ಇಂಡೋ- ಪಾಕ್​ ಪಂದ್ಯದ ಕ್ರೇಜ್​​ ಹೇಗಿದೆ ಅನ್ನೋದಕ್ಕೆ ಇದೇ ಸಾಕ್ಷಿ.

ಕಾದು ಕುಳಿತ ಫ್ಯಾನ್ಸ್​ಗೆ ಕಾದಿದ್ಯಾ ನಿರಾಸೆ..?

ಇಂಡೋ- ಪಾಕ್​ ವಾರ್​ ನೋಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಆದ್ರೆ, ಸದ್ಯದ ಸಿಚ್ಯುವೇಶನ್​ ಏನಾಗಿದೆ ಅಂದ್ರೆ, ಪಾಕಿಸ್ತಾನ ವಿಶ್ವಕಪ್​ ಟೂರ್ನಿಯಲ್ಲಿ ಆಡೋದೆ ಅನುಮಾನವಾಗಿ ಬಿಟ್ಟಿದೆ. ಭಾರತಕ್ಕೆ ಬರೋ ವಿಚಾರದಲ್ಲಿ ಪಾಕ್​ ಹೊಸ ತಗಾದೆ ತೆಗೆದಿದೆ. ಭಾರತ ಏಷ್ಯಾಕಪ್​ ಆಡಲು ಪಾಕಿಸ್ತಾನಕ್ಕೆ ಬರಲ್ಲ ಅಂದ್ರೆ ನಾವೂ ವಿಶ್ವಕಪ್​ ಆಡೋಕೆ ಭಾರತಕ್ಕೆ ಬರಲ್ಲ ಅಂತಾ ಖ್ಯಾತೆ ತೆಗೆದಿದೆ.

ಯೂ ಟರ್ನ್​ ಹೊಡೆದಿದ್ಯಾಕೆ ಪಾಕಿಸ್ತಾನ.?

ಏಷ್ಯಾಕಪ್​ ಆಯೋಜನೆ ಸಂಬಂಧಿಸಿದಂತೆ ಆರಂಭದಿಂಲೇ ಹಗ್ಗ ಜಗ್ಗಾಟ ನಡೆದಿತ್ತು. ಭದ್ರತಾ ಕಾರಣದಿಂದ ಟೀಮ್​ ಇಂಡಿಯಾ ಪಾಕ್​ಗೆ ಬರಲ್ಲ ಅಂದ್ರೆ, ಪಾಕ್​ ಬರಲೇ ಬೇಕು ಪಟ್ಟು ಹಿಡಿದಿತ್ತು. ಅಂತಿಮವಾಗಿ ಈ ಹಿಂದಿನ ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​ನ ಮಾಜಿ​​ ಅಧ್ಯಕ್ಷ ನಜಮ್​ ಸೇಥಿ, ಹೈಬ್ರಿಡ್​ ಮಾದರಿಗೆ ಒಪ್ಪಿದ್ರು. ಇದರ ಪ್ರಕಾರ ಏಷ್ಯಾಕಪ್​ ಟೂರ್ನಿಯ ಕೆಲ ಪಂದ್ಯಗಳು ಪಾಕ್​ನಲ್ಲಿ, ಇನ್ನು ಕೆಲವು ಶ್ರೀಲಂಕಾದಲ್ಲಿ ನಡೆಯಲಿವೆ. ಭಾರತ ಎಲ್ಲ ಪಂದ್ಯಗಳನ್ನೂ ತಟಸ್ಥ ಸ್ಥಳ ಶ್ರೀಲಂಕಾದಲ್ಲಿ ಆಡಲಿದೆ. ಆದ್ರೆ, ಈಗ ಪಿಸಿಬಿ ಚಿಂದಿ ಚಿತ್ರಾನ್ನಾ ಆಗಿದ್ದು, ಹೊಸ ಮ್ಯಾನೇಜ್​ಮೆಂಟ್​ ಮತ್ತೆ ಖ್ಯಾತೆ ತೆಗೆದಿದೆ.

ಸದ್ಯ ಪಿಸಿಬಿ ಎಲೆಕ್ಷನ್​ ಕಾನೂನಾತ್ಮಕ ಸಮಸ್ಯೆಗೆ ತುತ್ತಾಗಿದೆ. ಹೀಗಾಗಿ ಸರ್ಕಾರದ ಅಧೀನಕ್ಕೆ ಕ್ರಿಕೆಟ್​ ಬೋರ್ಡ್​ ಒಳಪಟ್ಟಿದೆ. ಝಾಕಾ ಅಶ್ರಪ್​ ನೇತೃತ್ವದ 10 ಮಂದಿಯ ಸದಸ್ಯರನ್ನ ಪಾಕ್​ ಪ್ರೈಮ್​ ಮಿನಿಸ್ಟರ್​​, ಮ್ಯಾನೇಜ್​ಮೆಂಟ್​ ಸಮಿತಿಯನ್ನಾಗಿ ನೇಮಿಸಿದ್ದಾರೆ. ಹಾಗಿದ್ರೂ, ಎಲ್ಲ ಅಧಿಕಾರ ಸರ್ಕಾದ ಕೈಯಲ್ಲಿದ್ದು ಕ್ರೀಡಾ ಸಚಿವ ಹೊಸ ಖ್ಯಾತೆ ತೆಗೆದಿದ್ದಾರೆ.

‘ತಟಸ್ಥ ಸ್ಥಳದಲ್ಲಿ ವಿಶ್ವಕಪ್​ ಆಡ್ತೇವೆ’

‘ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​​​ ನನ್ನ ಸಚಿವಾಲಯದ ವ್ಯಾಪ್ತಿಯಲ್ಲಿ ಬರುತ್ತದೆ. ನನ್ನ ವೈಯಕ್ತಿಕ ಅಭಿಪ್ರಾಯ ಏನಂದ್ರೆ, ಭಾರತ ಏಷ್ಯಾಕಪ್​ ಟೂರ್ನಿಯನ್ನ ತಟಸ್ಥ ಸ್ಥಳದಲ್ಲಿ ಆಡಲು ನಿರ್ಧರಿಸಿದ್ರೆ, ನಾವೂ ಕೂಡ ವಿಶ್ವಕಪ್​ ಟೂರ್ನಿಯನ್ನ ತಟಸ್ಥ ಸ್ಥಳದಲ್ಲಿ ಆಡಲಿದ್ದೇವೆ’

ಎಹ್ಸಾನ್​ ಮಜಾರಿ, ಪಾಕಿಸ್ತಾನ ಕ್ರೀಡಾ ಸಚಿವ

ಒಂದೆಡೆ ಏಷ್ಯಾಕಪ್​ಗೆ ನೀವು ಬರದಿದ್ರೆ, ವಿಶ್ವಕಪ್​ ಆಡೋಕೆ ನಾವು​ ಬರಲ್ಲ ಅಂತಿರೋ ಪಾಕ್​ ಬೋರ್ಡ್​ ಇನ್ನೊಂದೆಡೆ ಸೆಕ್ಯೂರಿಟಿ ಪರಿಶೀಲನೆಗೆ ಭಾರತಕ್ಕೆ ಒಂದು ಟೀಮ್​ ಕಳಿಸಿದ್ಯಂತೆ. ಅದು ನೀಡೋ ರಿಪೋರ್ಟ್​ ಆದಾರದಲ್ಲಿ ನಿರ್ಧಾರ ತೆಗೆದುಕೊಳ್ಳೋದು ಪಾಕ್​ ಬೋರ್ಡ್​ನ ಲೆಕ್ಕಾಚಾರವಾಗಿದೆ.

ಪಾಕ್​ ಬರಲಿಲ್ಲ ಅಂದ್ರೂ ನಡೆಯುತ್ತೆ ವಿಶ್ವಕಪ್​.!

ಪಾಕ್​ ಬೋರ್ಡ್​​ ವಿಶ್ವಕಪ್​ಗೆ ಬರಲ್ಲ ಅಂದ್ರೆ, ಬಿಸಿಸಿಐ ತಲೆ ಕೆಡಿಸಿಕೊಳ್ಳೋ ಲೆಕ್ಕಾಚಾರದಲ್ಲಿ ಇದ್ದಂತಿಲ್ಲ. ಈಗಾಗಲೇ ಒಂದು ವೇಳೆ ಪಾಕ್​ ಟೂರ್ನಿಯಿಂದ ಹಿಂದೆ ಸರಿದ್ರೆ, ಬಿಸಿಸಿಐ ಪ್ಲಾನ್​- ಬಿ ಅನ್ನೂ ರೆಡಿಯಿಟ್ಟುಕೊಂಡಿದೆ ಎನ್ನಲಾಗ್ತಿದೆ. ಪಾಕ್​ ಅಂತಿಮ ನಿರ್ಧಾರ ಪ್ರಕಟಿಸಿದ ಬಳಿಕ ಐಸಿಸಿ ಜೊತೆ ಚರ್ಚಿಸಿ ಪ್ಲಾನ್​ ಬಿ ಎಕ್ಸಿಕ್ಯೂಟ್​ ಮಾಡಲು ಬಿಸಿಸಿಐ ಸಜ್ಜಾಗಿದೆ ಅನ್ನೋದು ಮೂಲದ ಮಾಹಿತಿಯಾಗಿದೆ.

ರಾಜಕೀಯ ಮೇಲಾಟಕ್ಕೆ ಕ್ರಿಕೆಟ್​ ಬಲಿಯಾಗುತ್ತಾ.?

ಉಭಯ ರಾಷ್ಟ್ರಗಳ ಸರ್ಕಾರಗಳು ಪಟ್ಟು ಸಡಿಸುವಂತೆ ಕಾಣ್ತಿಲ್ಲ. ರಾಜಕೀಯ ಗುದ್ದಾಟಕ್ಕೆ ಕ್ರಿಕೆಟ್​ ಬಲಿಯಾಗುವ ಸಾಧ್ಯತೆಯೇ ದಟ್ಟವಾಗಿದೆ. ಇಂಡೋ- ಪಾಕ್ ಮುಖಾಮುಖಿ ಆಗಲಿಲ್ಲ ಅಂದ್ರೆ, ಏಷ್ಯಾಕಪ್​- ವಿಶ್ವಕಪ್​ ಎರಡೂ ಟೂರ್ನಿಗಳು ಕ್ರೇಜ್​ ಕುಂದಲಿದೆ. ಇಡೀ ಟೂರ್ನಿ ಸಪ್ಪೆಯಾಗಲಿದೆ. ಫ್ಯಾನ್ಸ್​​ಗೆ ಆಗೋ ನಿರಾಸೆಯನ್ನ ಪದಗಳಲ್ಲಿ ಹೇಳೋಕೆ ಸಾಧ್ಯವಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಭಾರತ-ಪಾಕ್ ವಿಶ್ವಕಪ್‌ ಪಂದ್ಯ​ ನಡೆಯಲ್ವಾ?; ಮತ್ತೆ ಖ್ಯಾತೆ ತೆಗೆದ ಬದ್ಧವೈರಿಗೆ ಬುದ್ಧಿ ಕಲಿಸಲು BCCI ಪ್ಲಾನ್​- B ರೆಡಿ

https://newsfirstlive.com/wp-content/uploads/2023/06/IND_PAK.jpg

Load More