newsfirstkannada.com

VIDEO: ವಿರಾಟ್ v/s ಬಾಬರ್​.. ಪಾಕ್ ಯುವತಿ ಕೊಟ್ಟ ಕ್ಯೂಟ್ ಆನ್ಸರ್‌ಗೆ ಕೊಹ್ಲಿ ಫ್ಯಾನ್ಸ್ ಫಿದಾ

Share :

04-09-2023

  ವಿರಾಟ್​ ಕೊಹ್ಲಿ ಅಭಿಮಾನಿಗಳ ಹೃದಯ ಗೆದ್ದ ಪಾಕ್ ಫ್ಯಾನ್‌!

  ಭಾರತ-ಪಾಕ್ ಮ್ಯಾಚ್​ನಲ್ಲಿ ಯುವತಿಗೆ ನಿರಾಸೆ ಮೂಡಿಸಿದ ಕೊಹ್ಲಿ

  ಯುವತಿಯ ಕೆನ್ನೆ ಮೇಲೆ ಭಾರತದ ತ್ರಿವರ್ಣ, ಹೃದಯದಲ್ಲಿ ವಿರಾಟ್​

ಕ್ರಿಕೆಟ್ ಹಾಗೂ ಆಟಗಾರರ ಮೇಲಿನ ಪ್ರೀತಿಗೆ ನಿಜಕ್ಕೂ ಗಡಿ ಇಲ್ಲ. ಬದ್ಧವೈರಿ ದೇಶ ಅನ್ನೋದು ಇಲ್ಲ. ಇದಕ್ಕೆಲ್ಲ ಮೀರಿದ್ದು ಅನ್ನೋದು ಮತ್ತೊಮ್ಮೆ ಫ್ರೂವ್ ಆಗಿದೆ. ಅದಕ್ಕೆ ಬೆಸ್ಟ್​ ಎಕ್ಸಾಂಪಲ್.. ಇಂಡೋ-ಪಾಕ್ ಮ್ಯಾಚ್.

ಇಂಡೋ-ಪಾಕ್​ ತಂಡಗಳ ಕಾದಾಟ ಅಂದ್ರೆ, ಅದು ಬರೀ ಆಟ ಅಲ್ಲ. ಯುದ್ಧ.. ಕ್ರಿಕೆಟ್ ಪ್ರೇಮಿಗಳ ಮನಸ್ಸಲ್ಲಿ ಉಂಟಾಗುವ ಉನ್ಮಾದ ಮತ್ತು ಢವ ಢವ ಅಷ್ಟಿಷ್ಟಲ್ಲ. ಹೀಗಾಗಿಯೇ ಪಾಕಿಸ್ತಾನದ ಜೊತೆಗಿನ ಮ್ಯಾಚ್ ಅಂದ್ರೆ, ಕ್ರಿಕೆಟ್ ಅಭಿಮಾನಿ ಕಣ್ಣಿಗೆ ಹಬ್ಬ. ರಣಾಂಗಣದಲ್ಲಿ ವೀರಾ ಸೇನಾನಿಗಳಂತೆ ಹೋರಾಡುವ ಹೋರಾಟ. ಒಂದೇ ಒಂದು ಎಸೆತ ಬಿಡದಂತೆ ಪಂದ್ಯ ವೀಕ್ಷಿಸುವ ಗಮ್ಮತ್ತೇ ಬೇರೆ.

ಪಾಕಿಸ್ತಾನದ ಯುವತಿ ಹಾಗೂ ವಿರಾಟ್ ಕೊಹ್ಲಿ

ಬದ್ಧವೈರಿಗಳ ಕದನ ಅಂದ್ರೆನೇ ಹಾಗೆ. ಆ ಪಂದ್ಯ ಹೈವೋಲ್ಟೇಜ್​ನಿಂದ ಕೂಡಿರುತ್ತೆ. ಮೈದಾನದಲ್ಲಿ ಮಾತಿನ ಸಮರ, ಜಿದ್ದಾಜಿದ್ದಿ ಹೋರಾಟ, ಸ್ಲೆಡ್ಜಿಂಗ್, ಎಲ್ಲವವನ್ನು ಇಂಡೋ-ಪಾಕ್​ ಮ್ಯಾಚ್​ನಲ್ಲಿ ನಿರೀಕ್ಷಿಸಲಾಗುತ್ತದೆ. ಇದಕ್ಕೆ ಕಾರಣ ಈ ಹಿಂದಿನಿಂದ ನಡೆದು ಬಂದ ಸ್ಟಾರ್ ವಾರ್ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಆದ್ರೀಗ ಇದೆಲ್ಲವೂ ಮಾಯವಾಗಿದೆ.

ನಿರೀಕ್ಷೆ ಹುಸಿಯಾಗಿಸಿದ ಇಂಡೋ-ಪಾಕ್ ಮ್ಯಾಚ್..!

ಬದ್ಧವೈರಿಗಳ ಕಾದಾಟ ಸಹಜವಾಗೇ ನಿರೀಕ್ಷೆ ಹೆಚ್ಚಿಸಿತ್ತು. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 4 ವರ್ಷಗಳ ಬಳಿಕ ಆಗಿದ್ದ ಮುಖಾಮುಖಿ, ಎಕ್ಸ್​ಪೆಕ್ಟೇಷನ್ಸ್​ನ ಡಬಲ್ ಮಾಡಿತ್ತು. ಆದ್ರೆ, ದುರಾದೃಷ್ಟವಶಾತ್, ಮಳೆರಾಯನ ಅವಕೃಪೆಗೆ ತುತ್ತಾದ ಈ ಹೈವೋಲ್ಟೇಜ್​ ಮ್ಯಾಚ್, ಫ್ಯಾನ್ಸ್​ ನಿರೀಕ್ಷೆ ಹುಸಿಯಾಗಿಸಿತ್ತು.

ಹೈವೋಲ್ಟೇಜ್​ ಮ್ಯಾಚ್​ನಲ್ಲಿ ನಿರಾಸೆ ಮೂಡಿಸಿದ ಕೊಹ್ಲಿ..!

ಮಳೆಯಿಂದಾಗಿದ್ದ ಜಸ್ಟ್​ ರದ್ದಾಗಿದ್ದು, ಜಸ್ಟ್​ ಉಭಯ ದೇಶಗಳ ಅಭಿಮಾನಿಗಳಿಗೆ ಮಾತ್ರವಲ್ಲ. ವಿರಾಟ್​ ಕೊಹ್ಲಿ ಅಭಿಮಾನಿಗಳಿಗೂ ಭಾರೀ ನಿರಾಸೆಗೆ ಕಾರಣವಾಗಿತ್ತು. ಇದಕ್ಕೆ ಕಾರಣ ಈ ಹೈವೋಲ್ಟೇಜ್ ಮ್ಯಾಚ್​ನಲ್ಲಿ ವಿರಾಟ್, ಕೇವಲ ನಾಲ್ಕೇ 4 ರನ್​ಗೆ ಪೆವಿಲಿಯನ್ ಸೇರಿದ್ದು. ಇದು ಜಸ್ಟ್​ ಭಾರತೀಯ ಅಭಿಮಾನಿಗಳಿಗೆ ಮಾತ್ರವೇ ಅಲ್ಲ.. ಪಾಕ್​ ಅಭಿಮಾನಿಗೂ ನಿರಾಸೆಗೂ ಕಾರಣವಾಗಿತ್ತು. ಇದು ಅಚ್ಚರಿ ಎನಿಸಿದರೂ ಸತ್ಯ.

ಟೀಮ್ ಇಂಡಿಯಾದ ಗೆಲುವಿನ ಜೊತೆಗೆ ಕೊಹ್ಲಿಯ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ಪಲ್ಲೆಕೆಲ್ಲೆಯಲ್ಲಿ ಅಭಿಮಾನಿಗಳ ದಂಡೇ ನೆರೆದಿತ್ತು. ಈ ಪೈಕಿ ಪಾಕ್​ ಮೂಲದ ಯುವತಿಯೂ ಒಬ್ಬರು. ಈಕೆ ಕಟ್ಟಾ ಪಾಕ್ ಅಭಿಮಾನಿಯೇ ಆಗಿದ್ರೂ, ಪಾಕ್​ನಿಂದ ದೂರದ ದ್ವೀಪರಾಷ್ಟ್ರಕ್ಕೆ ಬಂದಿದ್ದು ಮಾತ್ರ ವಿರಾಟ್​ ಕೊಹ್ಲಿಯ ಬ್ಯಾಟಿಂಗ್ ಸೊಬಗು ಕಣ್ತುಂಬಿಕೊಳ್ಳಲು.

ವಿರಾಟ್ ಕೊಹ್ಲಿ ನನ್ನ ಫೇವರಿಟ್ ಪ್ಲೇಯರ್. ಕೊಹ್ಲಿ ಆಟ ನೋಡಲೆಂದೇ ನಾನು ಇಲ್ಲಿಗೆ ಬಂದಿದ್ದೇನೆ. ವಿರಾಟ್​ ಶತಕ ಬಾರಿಸುವ ನಿರೀಕ್ಷೆ ಮಾಡಿದ್ದೆ. ಆದರೆ, ನನ್ನ ಹೃದಯ ಛಿದ್ರವಾಯಿತು.

ಕೊಹ್ಲಿ ಸೆಂಚೂರಿ ಕಣ್ತುಂಬಿಕೊಳ್ಳಲು ನಿರೀಕ್ಷೆ ಹುಸಿಯಾಯ್ತು ನಿಜ. ಆದ್ರೆ, ಕೆನ್ನೆಯ ಮೇಲೆ ಪಾಕ್ ಹಾಗೂ ಭಾರತದ ತ್ರಿವರ್ಣ ಧ್ವಜ ಹೊಂದಿದ್ದ ಈ ಯುವತಿ ಕೊಟ್ಟ ಒಂದೇ ಒಂದು ಹೇಳಿಕೆ ನಿಜಕ್ಕೂ ಭಾರತೀಯರ ಮನ ಗೆಲ್ಲುವಲ್ಲಿ ಯಶಸ್ವಿಯಾಯ್ತು.

ಪಾಕಿಸ್ತಾನದ ಯುವತಿ ಹಾಗೂ ವಿರಾಟ್ ಕೊಹ್ಲಿ

ನೀವು ಬಾಬರ್ ಆಜಂ ಅಥವಾ ಕೊಹ್ಲಿಯಲ್ಲಿ ಯಾರನ್ನ ಆಯ್ಕೆ ಮಾಡುತ್ತೀರಿ? ಎಂದು ಕೇಳಿದ ಪ್ರಶ್ನೆಗೆ ಕ್ಷಣಾಮಾತ್ರದಲ್ಲೇ ವಿರಾಟ್ ಕೊಹ್ಲಿ ಎಂದು ಉತ್ತರಿಸಿದರು.

ಪಾಕ್​​ ತಂಡಕ್ಕೆ ಈಕೆ ಸಂಪೋರ್ಟ್​ ಮಾಡಿದ್ರೂ, ಈಕೆ ಮನದಲ್ಲಿದ್ದಿದ್ದು ವಿರಾಟ್​ ಕೊಹ್ಲಿ.. ಅಷ್ಟೇ ಅಲ್ಲ, ಕಿಂಗ್ ಕೊಹ್ಲಿ ಜೊತೆ ಪಾಕ್​ ಆಟಗಾರರು ಆತ್ಮೀಯವಾಗಿ ಸ್ನೇಹಿತರಂತೆ ಮಾತನಾಡ್ತಿದ್ದ ಪರಿ ನಿಜಕ್ಕೂ ಗ್ರೇಟ್​.

ಅದೇನೇ ಆಗಲಿ, ವಿರಾಟ್​ ಕೊಹ್ಲಿಯ ಬ್ಯಾಟಿಂಗ್​ ಪ್ರದರ್ಶನಕ್ಕೆ ಮನಸೋಲದವರಿಲ್ಲ. ಬದ್ಧ ವೈರಿ ದೇಶಗಳ ಕ್ರಿಕೆಟ್ ಅಭಿಮಾನಿಗಳೂ ಕೂಡ ವೈರತ್ವ ಮರೆತು ಕೊಹ್ಲಿ​ ಆಟ ನೋಡ್ತಾರೆ ಅನ್ನೋದನ್ನ ಇದೇ ಬೆಸ್ಟ್​ ಎಕ್ಸಾಂಪಲ್.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

VIDEO: ವಿರಾಟ್ v/s ಬಾಬರ್​.. ಪಾಕ್ ಯುವತಿ ಕೊಟ್ಟ ಕ್ಯೂಟ್ ಆನ್ಸರ್‌ಗೆ ಕೊಹ್ಲಿ ಫ್ಯಾನ್ಸ್ ಫಿದಾ

https://newsfirstlive.com/wp-content/uploads/2023/09/VIRAT_PAK_GIRL.jpg

Load More