newsfirstkannada.com

India-Pakistan: ಭಾರತದ ಜೊತೆ ಮಾತುಕತೆ ಬಯಸಿದ ಪಾಕಿಸ್ತಾನ; ಕೊನೆಗೂ ಕೆಟ್ಟ ಮೇಲೆ ಬುದ್ಧಿಬಂತಾ..

Share :

03-08-2023

    ಅಮೆರಿಕ ಹೇಳಿಕೆ ಬೆನ್ನಲ್ಲೇ ಬಣ್ಣ ಬದಲಿಸಿದ ಪಾಕ್

    ಮಾತುಕತೆಗೆ ಸಿದ್ಧ ಎಂದ ಪ್ರಧಾನಿ ಶಹಬಾಜ್ ಶರೀಫ್

    ಆರ್ಥಿಕ ಬಿಕ್ಕಟ್ಟಿನಿಂದ ದಿಕ್ಕೆಟ್ಟು ಕೂತಿರುವ ಪಾಕಿಸ್ತಾನ

ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವ ಕಳವಳಕಾರಿ ವಿಷಯಗಳ ಬಗ್ಗೆ ಉಭಯ ದೇಶಗಳು ಕೂತು ನೇರವಾಗಿ ಮಾತನಾಡಿದ್ರೆ ನಮ್ಮ ಬೆಂಬಲ ಇದ್ದೇ ಇರುತ್ತದೆ ಎಂದು ಅಮೆರಿಕ ನಿನ್ನೆ ಹೇಳಿತ್ತು.

ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ್ದ ಅಮೆರಿಕ ವಿದೇಶಾಂಗ ವ್ಯವಹಾರಗಳ ವಕ್ತಾರ ಮ್ಯಾಥ್ಯೂ ಮಿಲ್ಲರ್, ಈ ಬಗ್ಗೆ ನಾವು ಹಿಂದೆಯೇ ಹೇಳಿದಂತೆ, ಭಾರತ ಮತ್ತು ಪಾಕಿಸ್ತಾನ Issues of concern ಬಗ್ಗೆ ಕೂತು ಮಾತನಾಡಬೇಕು. ಹಿಂದಿನಿಂದಲೂ ನಮ್ಮ ನಿಲುವು ಅದೇ ಆಗಿದೆ ಎಂದು ಹೇಳಿದ್ದರು.

ಅಮೆರಿಕಾದ ಈ ಹೇಳಿಕೆ ಬೆನ್ನಲ್ಲೇ, ಪಾಕಿಸ್ತಾನ ಪ್ರಧಾನಮಂತ್ರಿ ಶಹಬಾಜ್ ಶರೀಫ್, ಭಾರತದ ಜೊತೆಗೆ ಮಾತುಕತೆ ಬಯಸಿದ್ದಾರೆ. ಇಸ್ಲಾಮಾಬಾದ್​ನಲ್ಲಿ ನಡೆದ ಸಮಾವೇಶ ಒಂದರಲ್ಲಿ ಪತ್ರಕರ್ತನೊಬ್ಬ ಕೇಳಿದ ಪ್ರಶ್ನೆಗೆ ಶರೀಫ್ ಉತ್ತರಿಸಿದ್ದಾರೆ. ಭಾರತದ ಜೊತೆಗೆ ಮಾತುಕತೆ ನಡೆಸಲು ನಿವು ಇಶ್ಚಿಸುತ್ತಿರಾ’ ಎಂಬ ಪ್ರಶ್ನೆಗೆ ಹೌದೆಂದು ಹೇಳಿದ್ದಾರೆ.

ಭಾರತವು ಗಂಭೀರ ವಿಷಯಗಳನ್ನು ಪರಿಹರಿಸಲು ಸಿದ್ಧವಿದ್ದರೆ, ಎರಡು ದೇಶಗಳ ಸಮಸ್ಯೆಗಳ ಬಗ್ಗೆ ನಾವು ಮಾತನಾಡಲು ಸಿದ್ಧರಿದ್ದೇವೆ. 1947 ಸಮಯದಿಂದಲೂ ಎರಡು ದೇಶಗಳ ಮಧ್ಯೆ ವಿವಾದಗಳಿವೆ. ಹೀಗಾಗಿ ನಾವು ಮಾತುಕತೆಗೆ ತಯಾರಿದ್ದೇವೆ. ಪಾಕಿಸ್ತಾನ ನ್ಯೂಕ್ಲಿಯರ್ ಪವರ್ ಹೊಂದಿದೆ. ಅದು ಬೇರೆಯವರ ಮೇಲೆ ಆಕ್ರಮಣ ಮಾಡಲು ಅಲ್ಲ. ನಮ್ಮ ರಕ್ಷಣೆಗಾಗಿ ನಾವು ಮಾಡಿಕೊಂಡಿದ್ದೇವೆ. ನಾವು ಕಳೆದ 75 ವರ್ಷದಲ್ಲಿ ಮೂರು ಯುದ್ಧಗಳನ್ನು ಮಾಡಿದ್ದೇವೆ.

ದೇಶದಲ್ಲಿ ಬಡತನ, ನಿರುದ್ಯೋಗ, ಸಂಪನ್ಮೂಲಗಳ ಕೊರತೆ, ಹಣಕಾಸು, ಶಿಕ್ಷಣ, ಅನಾರೋಗ್ಯದಂತಹ ಸಮಸ್ಯೆಗಳು ಎದುರಾಗಿವೆ. ಬಡತನ ಮತ್ತು ನಿರುದ್ಯೋಗದ ವಿರುದ್ಧ ಹೋರಾಡುತ್ತಿರುವ ಎರಡೂ ದೇಶಗಳಿಗೆ ಯುದ್ಧವು ಆಯ್ಕೆ ಅಲ್ಲ. ಬಾಕಿ ಇರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ಧರಿದ್ದೇವೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

India-Pakistan: ಭಾರತದ ಜೊತೆ ಮಾತುಕತೆ ಬಯಸಿದ ಪಾಕಿಸ್ತಾನ; ಕೊನೆಗೂ ಕೆಟ್ಟ ಮೇಲೆ ಬುದ್ಧಿಬಂತಾ..

https://newsfirstlive.com/wp-content/uploads/2023/08/MODI_PAK.jpg

Load More