ನಿಗೂಢ ಸ್ಥಳದಲ್ಲಿ ಪಾಕ್ನ ಸೀಮಾ ಹೈದರ್, ಪ್ರಿಯತಮನ ವಿಚಾರಣೆ
ಪಾಕಿಸ್ತಾನದ ಐಎಸ್ಐ ಲಿಂಕ್ ಇರುವ ಅನುಮಾನ ಹಿನ್ನೆಲೆಯಲ್ಲಿ ತನಿಖೆ
ನೋಯ್ಡಾದ ನಿಗೂಢ ಸ್ಥಳದಲ್ಲಿ ಯುಪಿ ATS ಅಧಿಕಾರಿಗಳಿಂದ ವಿಚಾರಣೆ
ಪ್ರೀತಿ, ಪ್ರೇಮದ ಹೆಸರಲ್ಲಿ ಭಾರತಕ್ಕೆ ಅಕ್ರಮವಾಗಿ ಬಂದಿರುವ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಮೇಲೆ ಹಲವು ಅನುಮಾನಗಳು ಶುರುವಾಗಿವೆ. ಪಾಕಿಸ್ತಾನದ ಐಎಸ್ಐ ಲಿಂಕ್ ಇರುವ ಶಂಕೆ ಮೇಲೆ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ಘಟಕ (Anti-Terrorism Squad) ತೀವ್ರ ತನಿಖೆ ನಡೆಸಿದೆ.
ಸೀಮಾ, ಆಕೆಯ ಪ್ರಿಯಕರ ಸಚಿನ್ ಮತ್ತು ಆತನ ತಂದೆಯನ್ನು ವಶಕ್ಕೆ ಪಡೆದಿದ್ದ ಎಟಿಎಸ್, ನೋಯ್ಡಾದ ನಿಗೂಢ ಸ್ಥಳ ಒಂದರಲ್ಲಿ ವಿಚಾರಣೆ ನಡೆಸಿದೆ. ಬರೋಬ್ಬರಿ 6 ಗಂಟೆಗೂ ಹೆಚ್ಚು ಕಾಲ ವಿವಾರಣೆ ನಡೆಸಲಾಗಿದೆ. ಇತ್ತೀಚೆಗೆ ಈ ಮೂವರನ್ನು ಬಂಧನಕ್ಕೆ ಒಳಪಡಿಸಲಾಗಿತ್ತು. ಕೋರ್ಟ್ನಿಂದ ಜಾಮೀನು ಸಿಕ್ಕ ಬೆನ್ನಲ್ಲೇ, ಎಟಿಎಸ್ ಅಧಿಕಾರಿಗಳು ಎಂಟ್ರಿಯಾಗಿ ತನಿಖೆ ಮಾಡಿದ್ದಾರೆ.
ಕೋರ್ಟ್ ಸೀಮಾಗೆ ಷರತ್ತುಬದ್ಧ ಜಾಮೀನು ನೀಡಿದೆ. ಭಾರತ ಬಿಟ್ಟು ಹೋಗುವುದಾದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಮನೆಯ ವಿಳಾಸ ಬದಲಾಯಿಸಬೇಕು ಅಂದರೂ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದೆ.
ಸೀಮಾ ಮತ್ತು ಆಕೆಯ ಪಾರ್ಟ್ನರ್ ಸಚಿನ್ನನ್ನು ಹರಿಯಾಣದಲ್ಲಿ ಜುಲೈ 4 ರಂದು ಬಂಧಿಸಲಾಗಿತ್ತು. ಜುಲೈ 8 ರಂದು ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿ ಬಿಡುಗಡೆ ಮಾಡಿದೆ.
ಏನಿದು ಕತೆ..?
ಉತ್ತರ ಪ್ರದೇಶದ ಸಚಿನ್ ಎನ್ನುವ ಯುವಕನನ್ನು ಹುಡುಕಿಕೊಂಡು ಪಾಕ್ ಮೂಲದ ಸೀಮಾ ಗುಲಾಮ್ ಹೈದರ್ ಭಾರತಕ್ಕೆ ಬಂದಿದ್ದರು. ಪಬ್ಜೀ ಆಡುವಾಗ ಮೂಡಿದ ಪ್ರೀತಿ ಇವರಿಬ್ಬರನ್ನು ಎರಡು ದೇಶಗಳ ಗಡಿ ದಾಟಿ ಒಂದಾಗುವಂತೆ ಮಾಡಿತ್ತು. ಹೀಗೆ ಒಂದಾಗಿದ್ದ ಈ ಜೋಡಿ ನೋಯ್ಡಾದ ಅಪಾರ್ಟ್ಮೆಂಟ್ನಲ್ಲಿ ಯಾರಿಗೂ ಗೊತ್ತಿಲ್ಲದಂತೆ ತಮ್ಮ ನಾಲ್ವರು ಮಕ್ಕಳೊಂದಿಗೆ ವಾಸವಿದ್ದರು. ವೀಸಾ ಇಲ್ಲದೇ ಅಕ್ರಮವಾಗಿ ಭಾರತಕ್ಕೆ ಬಂದಿದ್ದರಿಂದ ಜುಲೈ 4ರಂದು ಪೊಲೀಸರು ಸೀಮಾಳನ್ನು ಬಂಧಿಸಿ, ಆಕೆಗೆ ಆಶ್ರಯ ನೀಡಿದ್ದಕ್ಕೆ ಸಚಿನ್ ಅನ್ನು ಕೂಡ ಅರೆಸ್ಟ್ ಮಾಡಿದ್ದರು.
ಇವರಿಬ್ಬರ ಮಧ್ಯೆ ಪಬ್ ಜೀ ಪ್ರೀತಿಯೆಂದು ನಂಬಿದ್ದ ನೋಯ್ಡಾ ಪೊಲೀಸರು ವಿಚಾರಣೆ ನಡೆಸಿ ಕಳುಹಿಸಿದ್ದರು. ಆದ್ರೀಗ ಸೀಮಾ ಹೈದರ್ ಮೇಲೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿವೆ. ಸೀಮಾ ಹೈದರ್ ಬರೀ ಪ್ರೇಮಿಯಲ್ಲ. ಪಾಕಿಸ್ತಾನದ ಐಎಸ್ಐ ಏಜೆಂಟ್ ಆಗಿರುವ ಶಂಕೆ ವ್ಯಕ್ತವಾಗಿದೆ. ಯಾಕಂದ್ರೆ ಸೀಮಾ ಹೈದರ್, ಪಾಕಿಸ್ತಾನದಿಂದ ದುಬೈ, ದುಬೈನಿಂದ ನೇಪಾಳದ ಮೂಲಕ ಭಾರತ ಪ್ರವೇಶಿಸಿದ್ದರು. ಹೀಗಾಗಿ ಸೀಮಾ ಹೈದರ್ ಮೇಲೆ ಈಗ ಭಾರತದ ಇಂಟಲಿಜೆನ್ಸ್ ಏಜೆನ್ಸಿ, ಯುಪಿ ಎಟಿಎಸ್ ತೀವ್ರ ನಿಗಾ ಇಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ