newsfirstkannada.com

ಕಾಂಗ್ರೆಸ್​ನಿಂದ ‘ಪ್ಯಾನ್ ಇಂಡಿಯಾ ಸಿದ್ದರಾಮಯ್ಯ’ ಪ್ಲಾನ್; ದೇಶದ ರಾಜಕೀಯದಲ್ಲಿ ಬೀಸುತ್ತಾ ಹೊಸ ಬಿರುಗಾಳಿ..!?

Share :

26-06-2023

    ಸಿದ್ದರಾಮಯ್ಯರ ವರ್ಚಸ್ಸು ಬಳಸಿಕೊಳ್ಳಲು ಮೆಗಾ ಪ್ಲಾನ್​

    ಸಿದ್ದರಾಮಯ್ಯ ಹೆಸರು ಕೇಳಿಬರಲು ಇದೆ 8 ಕಾರಣಗಳು

    ಯೋಗಿ ಮಾಡೆಲ್​​ನಂತೆ ಸದ್ದು ಮಾಡುತ್ತಾ ‘ಸಿದ್ದು ಮಾದರಿ’..!

ಬೆಂಗಳೂರು: ದೇಶದಲ್ಲಿ ಚುನಾವಣೆಯ ಗಾಳಿ ಬೀಸಲು ಶುರುವಾಗುತ್ತಿದ್ದಂತೆ ಪ್ರಮುಖವಾಗಿ ಯೋಗಿ ಮಾಡೆಲ್, ಗುಜರಾತ್ ಮಾಡೆಲ್, ದೆಹಲಿ ಮಾಡೆಲ್​ ಹಾಗೂ ಮೋದಿ ಮೇನಿಯಾ, ಯೋಗಿ ಹವಾ, ಕೇಜ್ರಿವಾಲ್ ಹವಾ ಎಂಬ ವಿಚಾರಗಳು ಚರ್ಚೆಯ ಕೇಂದ್ರಬಿಂದು ಆಗುತ್ತವೆ. ಇನ್ಮುಂದೆ ಚುನಾವಣಾ ಸಂದರ್ಭದಲ್ಲಿ ಈ ಎಲ್ಲಾ ಚರ್ಚಾ ವಿಷಯಗಳ ಜೊತೆಗೆ ಸಿದ್ದರಾಮಯ್ಯ ಅವರ ಹೆಸರು ಕೂಡ ಕೇಳಿಬಂದರೂ ಅಚ್ಚರಿ ಇಲ್ಲ!

ರಾಜಕೀಯ ವಿಶ್ಲೇಷಕರ ವಾದ..!

ಮಾರ್ಚ್​ 10 ರಂದು ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಈ ವೇಳೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್​ ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಕಾಂಗ್ರೆಸ್​ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯರಿಗಿದ್ದ ವರ್ಚಸ್ಸು ಹಾಗೂ ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ‘ಗ್ಯಾರಂಟಿ ಯೋಜನೆಗಳು’ ಅನ್ನೋದು ರಾಜಕೀಯ ವಿಶ್ಲೇಷಕರ ವಾದ.

ಪ್ಯಾನ್ ಇಂಡಿಯಾ ಸಿದ್ದರಾಮಯ್ಯ..!

ಇದೀಗ ಸಿದ್ದರಾಮಯ್ಯ ಅವರ ಇಮೇಜ್ ಇಟ್ಟುಕೊಂಡೇ ದೇಶದಾದ್ಯಂತ ಚುನಾವಣೆ ಎದುರಿಸಲು ಕಾಂಗ್ರೆಸ್​ನಲ್ಲಿ ಪ್ಲಾನ್ ನಡೀತಿದೆ ಎನ್ನಲಾಗುತ್ತಿದೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ಎದುರಾಗಲಿದೆ. ಈ ಚುನಾವಣೆಯಲ್ಲಿ ಸಿದ್ದರಾಮಯ್ಯರ ‘ಮಾದರಿ ಆಡಳಿತ’ವನ್ನು ದೇಶದ ಜನರ ಮುಂದೆ ಇಟ್ಟು ಮತದಾರರ ಎನ್​ಕ್ಯಾಶ್​ ಮಾಡಲು ಕಾಂಗ್ರೆಸ್​ ನಿರ್ಧರಿಸಿದ್ಯಂತೆ. ಇತರೆ ರಾಜ್ಯಗಳಲ್ಲೂ ಸಿದ್ದರಾಮಯ್ಯರ ಆಡಳಿತದ ಹೆಸರಲ್ಲೇ ಚುನಾವಣೆ ಎದುರಿಸಬೇಕು ಅನ್ನೋದು ಕಾಂಗ್ರೆಸ್​ನ ಹಲವು ನಾಯಕರ ಅಭಿಪ್ರಾಯ ಎನ್ನಲಾಗುತ್ತಿದೆ.

ಕಾಂಗ್ರೆಸ್​ ಪ್ಲಾನ್ ಏನು..?

  • ಕಾಂಗ್ರೆಸ್ ಪ್ಲಾನ್ 1: ಸಿದ್ದರಾಮಯ್ಯರನ್ನು ರಾಷ್ಟ್ರ ಮಟ್ಟದಲ್ಲಿ ಪ್ರಚಾರಕ್ಕೆ ಬಳಸಿಕೊಳ್ಳುವುದು
  • ಕಾಂಗ್ರೆಸ್ ಪ್ಲಾನ್ 2: ಸಿಎಂ ಸಿದ್ದರಾಮಯ್ಯ ಅಹಿಂದ ವರ್ಗಗಳ ಜನಪ್ರಿಯ, ಮಾಸ್ ನಾಯಕ
  • ಕಾಂಗ್ರೆಸ್ ಪ್ಲಾನ್ 3: ಕಳಂಕ ರಹಿತರಾಗಿರುವ ಕಾರಣಕ್ಕೆ ಹೆಚ್ಚು ಜನಪ್ರಿಯತೆ ಹೊಂದಿದ್ದಾರೆ
  • ಕಾಂಗ್ರೆಸ್ ಪ್ಲಾನ್ 4: ಪ್ರಧಾನಿ ಮೋದಿಯನ್ನ ಪರಿಣಾಮಕಾರಿಯಾಗಿ ಎದುರಿಸುವ ಛಾತಿ ಇದೆ
  • ಕಾಂಗ್ರೆಸ್ ಪ್ಲಾನ್ 05: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿ ಕೊಟ್ಟು ಗೆಲುವು
  • ಕಾಂಗ್ರೆಸ್ ಪ್ಲಾನ್ 6: ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್​ಗಢ, ರಾಜಸ್ಥಾನ, ಮಹಾರಾಷ್ಟ್ರ ಎಲೆಕ್ಷನ್
  • ಕಾಂಗ್ರೆಸ್ ಪ್ಲಾನ್ 7: ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರಕ್ಕೆ ಸಿದ್ದರಾಮಯ್ಯ
  • ಕಾಂಗ್ರೆಸ್ ಪ್ಲಾನ್ 8: ನಿನ್ನೆಯಷ್ಟೇ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದ ಸಮಾವೇಶದಲ್ಲಿ ಸಿಎಂ ಭಾಗಿ

ಒಟ್ಟಾರೆ ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣ​ ನೆಲಸಮ ಆಗುತ್ತಿದೆ ಅನ್ನೋ ಹೊತ್ತಿನಲ್ಲಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೊಸ ಸಂದೇಶವನ್ನು ರವಾನಿಸಿದ್ದಾರೆ. ಪ್ರತಿ ಚುನಾವಣೆಯಲ್ಲೂ ಸೋಲನ್ನು ಕಂಡು ಹಂತಾಶೆಗೆ ಒಳಗಾಗಿದ್ದ ಕಾಂಗ್ರೆಸ್​ ಹೈಕಮಾಂಡ್​ಗೆ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಹೊಸ ಆಸೆಯನ್ನು ಚಿಗುರಿಸಿದೆ. ಕರ್ನಾಟಕದಲ್ಲಿ ಗೆಲುವು ಸಾಧಿಸಿದಲು ಪ್ರಯೋಗಿಸಿದ ಅಸ್ತ್ರವನ್ನೇ ಮುಂದಿಟ್ಟುಕೊಂಡು ಲೋಕಸಭೆ ಚುನಾವಣೆ ಎದುರಿಸಲು ಕಾಂಗ್ರೆಸ್​ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. ಆದರೆ ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೋ ಅನ್ನೋದ ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​ನಿಂದ ‘ಪ್ಯಾನ್ ಇಂಡಿಯಾ ಸಿದ್ದರಾಮಯ್ಯ’ ಪ್ಲಾನ್; ದೇಶದ ರಾಜಕೀಯದಲ್ಲಿ ಬೀಸುತ್ತಾ ಹೊಸ ಬಿರುಗಾಳಿ..!?

https://newsfirstlive.com/wp-content/uploads/2023/06/SIDDU-24.jpg

Load More