/newsfirstlive-kannada/media/post_attachments/wp-content/uploads/2023/11/chikkaballapura-1.jpg)
ಚಿಕ್ಕಬಳ್ಳಾಪುರ: ನಕಲಿ ಖಾತೆ ಸೃಷ್ಟಿಸಿ ಇಡೀ ಗ್ರಾಮವನ್ನೇ ಮಾರಾಟ ಮಾಡಲು ಮುಂದಾದ ಪ್ರಕರಣವೊಂದು ಚಿಕ್ಕಬಳ್ಳಾಪುರ ತಾಲ್ಲೂಕಿನ ಅವಲಗುರ್ಕಿ ಗ್ರಾಮಪಂಚಾಯತಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಪಂಚಾಯತಿ ಬಿಲ್ ಕಲೆಕ್ಟರನ್ನು​ ಸಸ್ಪೆಂಡ್ ಮಾಡಲಾಗಿದೆ.
ಇಶಾ ಫೌಂಡೇಶನ್ ಬಳಿ ಇರುವ ಸರ್ಕಾರಿ ಗ್ರಾಮ ಠಾಣ್​ ಸ್ಥಳವನ್ನು ಅಕ್ರಮ ಮಾರಾಟ ಮಾಡಲು ಪಂಚಾಯತಿ ಸದಸ್ಯರು ಹಾಗೂ ಸಿಬ್ಬಂದಿ ಮುಂದಾಗಿದ್ದರು. ನನಗೊಂದು ನನ್ನ ಹೆಂಡತಿ ಮಕ್ಕಳಿಗೊಂದು ಅಂತ ಸೈಟ್ ಗಳನ್ನ ಹಂಚಿಕೊಂಡಿದ್ದರು. ಈ ವಿಚಾರ ತಿಳಿದಂತೆ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಸಿಇಓ ಪ್ರಕಾಶ್ ಜಿ ನಿಟ್ಟಾಲಿ ತನಿಖೆಗೆ ಆದೇಶಿಸಿದ್ದರು.
/newsfirstlive-kannada/media/post_attachments/wp-content/uploads/2023/11/Chikkaballapura-1-1.jpg)
ತನಿಖೆಯಲ್ಲಿ ಮೊದಲು ಗ್ರಾಮ ಪಂಚಾಯ್ತಿ PDO ಎಂ.ಸಿ. ವೆಂಕಟೇಶ ನನ್ನ ಅಮಾನತು ಮಾಡಲಾಗಿತ್ತು. ನಂತರ ಗ್ರಾ.ಪಂ ಅಧ್ಯಕ್ಷೆ ನಾಗಮಣಿ ಅನುಮತಿ ಮೇರೆಗೆ ಪಿಡಿಒ ಅರುಣ ಗೋಪಿ ಆದೇಶ ಹೊರಡಿಸಿದ್ದು, ಅವಲಗುರ್ಕಿ ಗ್ರಾಮಪಂಚಾಯತಿ ಬಿಲ್ ಕಲೆಕ್ಟರ್ ಪ್ರಕಾಶ್​ನನ್ನು ಸಸ್ಪೆಂಡ್ ಮಾಡಲಾಗಿದೆ.
/newsfirstlive-kannada/media/post_attachments/wp-content/uploads/2023/11/Chikkaballapur.jpg)
ಇದು ನ್ಯೂಸ್ ಫಸ್ಟ್ ಇಂಪಾಕ್ಟ್
ಸರ್ಕಾರಿ ಗ್ರಾಮ ಠಾಣ್ ಸ್ಥಳದಲ್ಲಿ 55 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿತ್ತು. 55 ನಿವೇಶನಗಳ ಖಾತೆ ರದ್ದು ಮಾಡಿ ಎಂದು ತಾ.ಪಂ ಇಒ ಜಿ.ಆರ್.ಮಂಜುನಾಥ್​ ಆದೇಶ ಹೊರಡಿಸಿದ್ದಾರೆ. ಸದ್ಯ ಈ ಪ್ರಕರಣದ ಹೆಚ್ಚು ಹೆಚ್ಚು ತಿರುವು ಪಡೆದುಕೊಳ್ಳುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us