ಒನ್ಡೇ ವಿಶ್ವಕಪ್ಗೆ ಸಿದ್ಧಗೊಳಿಸಲು ಪಣತೊಟ್ಟ BCCI ಬಿಗ್ಬಾಸ್ಗಳು ..!
ವಿಶ್ವಕಪ್ಗೆ ಟೆರರ್ ಬ್ಯಾಟ್ಸ್ಮನ್ ಫುಲ್ ಫಿಟ್ ಆಗೋದು ಗ್ಯಾರಂಟಿನಾ?
ಮನೆಯಲ್ಲಿನ ಮೆಟ್ಟಿಲುಗಳನ್ನು ಮೆಲ್ಲಗೆ ಏರಲು ಪ್ರಾರಂಭಿಸಿದ ರಿಷಬ್ ಪಂತ್
ತಂಡದಲ್ಲಿ ಈ ಬಹುದ್ದೂರ್ ಗಂಡು ಇಲ್ಲವಾಗಿದ್ದೇ ಟೀಮ್ ಇಂಡಿಯಾ ಜಗತ್ತಿನ ಮುಂದೆ ತಲೆ ತಗ್ಗಿಸುವಂತಾಯ್ತು. ಮತ್ತೆ ಮಾನ ಕಳೆದುಕೊಳ್ಳಲು ಸಿದ್ಧವಿಲ್ಲದ ಬಿಸಿಸಿಐ ಹರಿದ್ವಾರದ ಸಿಡಿಗುಂಡನ್ನ ಟಾರ್ಗೆಟ್ ಮಾಡಿದೆ. ಈ ಸಿಡಿಗುಂಡೇನಾದ್ರು ತಂಡವನ್ನ ಸೇರಿಬಿಟ್ರೆ ಹೋದ ಮಾನ ಏಕದಿನ ವಿಶ್ವಕಪ್ನಲ್ಲಿ ಮರಳಿಬರೋದು ಪಕ್ಕಾ.
ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಸೋಲಿನಿಂದ ಬಿಸಿಸಿಐ ಎಚ್ಚೆತ್ತುಕೊಂಡಿದೆ. ಈ ವರ್ಷಾಂತ್ಯದಲ್ಲಿ ನಡೆಯುವ ಏಕದಿನ ವಿಶ್ವಕಪ್ ಬಿಗ್ಬಾಸ್ಗಳ ನೆಕ್ಸ್ಟ್ ಟಾರ್ಗೆಟ್. ಆದ್ರೆ ಈ ಟಾರ್ಗೆಟ್ ರೀಚಿಂಗ್ ಸುಲಭವಿಲ್ಲ. ಯಾಕಂದ್ರೆ ಕಳೆದ 10 ವರ್ಷದಿಂದ 9 ಐಸಿಸಿ ಟ್ರೋಫಿಗಳನ್ನ ಕೈಚೆಲ್ಲಿ ಕುಗ್ಗಿ ಹೋಗಿದೆ. ಬಟ್ ಫಾಸ್ಟ್ ಇಸ್ ಫಾಸ್ಟ್. ಎಲ್ಲ ಕಹಿ ಮರೆತು ಒನ್ಡೇ ವಿಶ್ವಕಪ್ ಗೆದ್ದೇ ತೀರಲು ಬಿಸಿಸಿಐ ಪಣ ತೊಟ್ಟಿದೆ. ಅದಕ್ಕಾಗಿ ಹರಿದ್ವಾರದ ಸಿಡಿಗುಂಡನ್ನ ಟಾರ್ಗೆಟ್ ಮಾಡಿದೆ. ಈ ಸ್ಟ್ರಾಂಗೆಸ್ಟ್ ಸಿಡಿಗುಂಡನ್ನೇ ಇಟ್ಟುಕೊಂಡ ವಿಶ್ವಕಪ್ಅನ್ನ ಗೆಲ್ಲಲು ಹೊರಟಿದೆ. ಅಷ್ಟಕ್ಕೂ ಹರಿದ್ವಾರದ ಆ ಡೇಂಜರಸ್ ಸಿಡಿಗುಂಡು ಮತ್ಯಾರು ಅಲ್ಲ, ಅವರೇ ರಿಷಬ್ ಪಂತ್.
‘ಬಹದ್ದೂರ್ ಗಂಡು’ ಪಂತ್ ಬೆನ್ನು ಬಿದ್ದ ಬಿಸಿಸಿಐ
ಸತತ ಐಸಿಸಿ ಟೂರ್ನಿಗಳ ವೈಫಲ್ಯಗಳಿಂದ ಬಿಸಿಸಿಐ ಪಾಠ ಕಲಿತಂತೆ ಕಾಣಿಸ್ತಿದೆ. ಹಾಗಾಗಿನೇ ರಿಷಬ್ ಪಂತ್ ಬೆನ್ನು ಬಿದ್ದಿದೆ. ವಿಶ್ವಮಟ್ಟದಲ್ಲಿ ಮಾನ ಕಳೆದುಕೊಂಡಿರೋ ಬಿಸಿಸಿಐ ಮರಳಿ ಪಡೆಯಲು ಟೆರರ್ ಬ್ಯಾಟ್ಸ್ಮನ್ ಕಡೆ ಗಮನ ಹರಿಸಿದೆ. ಅಂದ್ರೆ ಗಾಯಗೊಂಡಿರೋ ಪಂತ್ರನ್ನ ಮುಂದಿನ ವಿಶ್ವಕಪ್ ಅಲ್ಲಿ ಆಡಿಸಿಯೇ ತೀರಲು ಪಣತೊಟ್ಟಿದೆ.
ಬಿಸಿಸಿಐ ಪಾಲಿನ ಕೊನೆ ಭರವಸೆ ಅಂದ್ರೆ ಅದು ಡೇರಿಂಗ್ ಬ್ಯಾಟ್ಸ್ಮನ್ ರಿಷಬ್ ಪಂತ್. ಸಂಕಷ್ಟದಲ್ಲಿ ಆಕ್ರಮಣಕಾರಿ ಆಟಕ್ಕೆ ಎತ್ತಿದ ಕೈ. ಘಟಾನುಘಟಿ ಬೌಲರ್ಗಳ ಎದುರು ನಿರ್ಭೀತಿ ಆಟ. ಮೊದಲ ಎಸೆತದಿಂದಲೇ ಅಟ್ಯಾಕಿಂಗ್ ಗೇಮ್. ಈ ಎಲ್ಲವನ್ನ ಬಿಸಿಸಿಐ ತುಂಬಾನೇ ಮಿಸ್ ಮಾಡಿಕೊಳ್ತಿದೆ. ಹೀಗಾಗಿ ಪಂತ್ ಬೆನ್ನುಬಿದ್ದಿರೋ ಬಿಸಿಸಿಐ ಅವರನ್ನ ಒನ್ಡೇ ವಿಶ್ವಕಪ್ನಲ್ಲಿ ಕಣಕ್ಕಿಳಿಸಲು ಶಪಥ ಗೈದಿದೆ.
ನಿರೀಕ್ಷಿತ ಸಮಯಕ್ಕಿಂತ ಮೊದಲೇ ಪಂತ್ ರಿಕವರಿ..!
ಕಳೆದ ವರ್ಷ ಡೆಡ್ಲಿ ಕಾರು ಆಕ್ಸಿಡೆಂಟ್ನಲ್ಲಿ ಪಂತ್ ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದಿದ್ರು. ಸದ್ಯ ಇವರು ಬೆಂಗಳೂರಿನ ಎನ್ಸಿಎಯಲ್ಲಿದ್ದು, ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಿದ್ದಾರೆ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು ನಿರೀಕ್ಷೆಗೂ ಮೊದಲೇ ಎಡಗೈ ಬ್ಯಾಟ್ಸ್ಮನ್ ರಿಕವರಿ ಆಗಲಿದ್ದಾರೆ ಎಂದು ಬಿಸಿಸಿಐ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಅಂದುಕೊಂಡಂತೆ ನಡೆದು ಬಿಟ್ರೆ 2023ರ ಏಕದಿನ ವಿಶ್ವಕಪ್ನಲ್ಲಿ ಪಂತ್ ಅಬ್ಬರ ಕಣ್ತುಂಬಿಕೊಳ್ಳುವ ಕೋಟ್ಯಾನುಕೋಟಿ ಅಭಿಮಾನಗಳ ಮಹಾದಾಸೆ ಈಡೇರಲಿದೆ.
ಬಿಸಿಸಿಐ ಕನಸು ನನಸಾಗಿಸಲು ಸರ್ವ ಪ್ರಯತ್ನ..!
ಒಂದೆಡೆ ಬಿಸಿಸಿಐ ಪಂತ್ರನ್ನ ಬೇಗನೇ ಗುಣಮುಖ ಮಾಡಲು ಹಠಕ್ಕೆ ಬಿದ್ದಿದೆ. ಇನ್ನೊಂದೆಡೆ ರಿಷಬ್ ಕೂಡ ವಿಶ್ವಕಪ್ ಆಡುವ ಬಿಗ್ಬಾಸ್ಗಳ ಕನಸನ್ನ ನನಸಾಗಿಸಲು ಎಲ್ಲ ಪ್ರಯತ್ನ ನಡೆಸಿದ್ದಾರೆ. ಫಿಸಿಯೋ ಎಸ್ ರಜನಿಕಾಂತ್ ಅವರ ಮಾರ್ಗದರ್ಶನದಲ್ಲಿ ಕ್ರಚಸ್ ಇಲ್ಲದೇ ನಡಿಗೆ ಜೊತೆ ಯಾರ ಸಹಾಯವಿಲ್ಲದೇ ಮೆಟ್ಟಿನಿಲ್ಲುಗಳನ್ನ ಹತ್ತಲು ಆರಂಭಿಸಿದ್ದಾರೆ.
ಏಷ್ಯಕಾಪ್ ಟೂರ್ನಿಗೆ ಬುಮ್ರಾ-ಶ್ರೇಯಸ್ ಲಭ್ಯ
ಇನ್ನು ಜಸ್ಪ್ರೀತ್ ಬುಮ್ರಾ ಹಾಗೂ ಶ್ರೇಯಸ್ ಅಯ್ಯರ್ ಮೇಲೂ ಬಿಸಿಸಿಐ ಹೆಚ್ಚು ಗಮನ ಹರಿಸಿದೆ. ಯಾಕಂದ್ರೆ ತಂಡಕ್ಕೆ ಇಬ್ಬರ ಅಲಭ್ಯತೆ ಕಾಡ್ತಿದೆ. ಬುಮ್ರಾಗೆ ಬೆನ್ನು ನೋವು ಕಾಡ್ತಿದ್ದು ಐಪಿಎಲ್ ಹಾಗೂ WTC ಫೈನಲ್ನಿಂದ ಹೊರಗುಳಿದಿದ್ರು. ಇನ್ನು ಶ್ರೇಯಸ್ ಇದೇ ವರ್ಷ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನ ತಪ್ಪಿಸಿಕೊಂಡಿದ್ರು. ಸದ್ಯ ಸ್ಟಾರ್ ಆಟಗಾರರಿಬ್ಬರು ಎನ್ಸಿಎಯಲ್ಲಿದ್ದು, ಮುಂಬರೋ ಏಷ್ಯಾಕಪ್ ಟೂರ್ನಿಗೆ ಫುಲ್ ಫಿಟ್ ಆಗಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ರಿಷಬ್ ಪಂತ್, ಬುಮ್ರಾ ಹಾಗೂ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ಸ್. ಈ ತ್ರಿಮೂರ್ತಿಗಳು ಬೇಗನೆ ಗುಣಮುಖರಾಗಲಿ. ಮತ್ತೆ ಬ್ಲೂ ಜರ್ಸಿಯಲ್ಲಿ ಅಬ್ಬರಿಸಿ, ಅಭಿಮಾನಿ ದೇವರುಗಳನ್ನ ರಂಜಿಸುವಂತಾಗಲಿ ಎಂಬುದು ಆಶಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
Not bad yaar Rishabh ❤️❤️😂. Simple things can be difficult sometimes 😇 pic.twitter.com/XcF9rZXurG
— Rishabh Pant (@RishabhPant17) June 14, 2023