ವಾಘ್ ಬಕ್ರೀ ಟೀ ಗ್ರೂಪ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಪರಾಗ್ ದೇಸಾಯಿ
ಮನೆ ಬಳಿ ನಿಂತಿದ್ದಾಗ ಪರಾಗ್ ದೇಸಾಯಿ ಮೇಲೆ ಬೀದಿ ನಾಯಿಗಳ ದಾಳಿ
ಉದ್ಯಮಿ ಪರಾಗ್ ದೇಸಾಯಿ ಅವರ ಸಾವಿಗೆ ದಿಗ್ಭ್ರಮೆ ವ್ಯಕ್ತಪಡಿಸಿದ ಗಣ್ಯರು
ಅಹಮದಾಬಾದ್: ವಾಘ್ ಬಕ್ರೀ ಟೀ ಗ್ರೂಪ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಪರಾಗ್ ದೇಸಾಯಿ ಅವರು ಸಾವನ್ನಪ್ಪಿದ್ದಾರೆ. ತಮ್ಮ ಮನೆ ಬಳಿ ನಿಂತಿದ್ದಾಗ ಪರಾಗ್ ದೇಸಾಯಿ ಅವರು ಬೀದಿ ನಾಯಿಗಳ ದಾಳಿಗೆ ತುತ್ತಾಗಿದ್ದರು. ಬೀದಿ ನಾಯಿಗಳು ದಾಳಿ ಮಾಡಿದಾಗ ಪರಾಗ್ ದೇಸಾಯಿ ಅವರು ಕೆಳಗೆ ಬಿದ್ದು, ತಲೆಗೆ ಗಂಭೀರ ಗಾಯವಾಗಿತ್ತು. ಬಳಿಕ ಬ್ರೇನ್ ಹೆಮರೇಜ್‌ನಿಂದ 49 ವರ್ಷದ ಪರಾಗ್ ದೇಸಾಯಿ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಪರಾಗ್ ದೇಸಾಯಿ ಅವರು ಕಳೆದ ಅಕ್ಟೋಬರ್ 15ರಂದು ಮನೆ ಬಳಿ ನಿಂತಿದ್ದಾಗ ಬೀದಿ ನಾಯಿಗಳು ದಾಳಿ ಮಾಡಿದ್ದವು. ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದರು. ಈ ದಾಳಿಯನ್ನು ಗಮನಿಸಿ ಸೆಕ್ಯೂರಿಟಿ ಗಾರ್ಡ್ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಕೂಡಲೇ ಪರಾಗ್ ದೇಸಾಯಿ ಅವರನ್ನು ಸ್ಥಳೀಯ ಶೆಲ್ಬಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಬೀದಿ ನಾಯಿಯ ದಾಳಿಯಲ್ಲು ಹಲವು ಗಂಭೀರ ಗಾಯಗಳಾಗಿದ್ದು, ಬ್ರೇನ್ ಹೆಮರೇಜ್‌ಗೆ ತುತ್ತಾಗಿದ್ದರು. ಶೆಲ್ಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ದೇಸಾಯಿ ಅವರನ್ನು ಝೈಡಸ್ ಆಸ್ಪತ್ರೆಗೆ ಶಿಫ್ಟ್ ಮಾಡಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಬ್ರೇನ್ ಹೆಮರೇಜ್‌ನಿಂದ ಉದ್ಯಮಿ ಪರಾಗ್ ದೇಸಾಯಿ ಅವರು ಗುಣಮುಖರಾಗದೆ ಸಾವನ್ನಪ್ಪಿದ್ದಾರೆ.
ಪರಾಗ್ ದೇಸಾಯಿ ಅವರು 2 ಸಾವಿರ ಕೋಟಿ ರೂಪಾಯಿ ವಹಿವಾಟಿನ ವಾಘ್ ಬಕ್ರೀ ಟೀ ಗ್ರೂಪ್ ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದರು. ಗುಜರಾತ್‌ನಲ್ಲಿ ವಾಘ್ ಬಕ್ರೀ ಟೀ ಗ್ರೂಪ್ ಅನ್ನೋ ಬ್ರಾಂಡ್ ಹಾಗೂ ಕಂಪನಿಯನ್ನು ಕಟ್ಟಿ ಬೆಳೆಸಿದವರಲ್ಲಿ ಪರಾಗ್ ಅವರು ಪ್ರಮುಖರು. ಪರಾಗ್ ದೇಸಾಯಿ ಅವರ ಸಾವು ಎಲ್ಲರಿಗೂ ದಿಗ್ಭ್ರಮೆಯನ್ನ ಮೂಡಿಸಿದೆ. ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಶಕ್ತಿಸಿಂಹ ಗೋಹಿಲ್ ಅವರು ಸೇರಿದಂತೆ ಹಲವು ಗಣ್ಯರು ತಮ್ಮ ಸಂತಾಪವನ್ನು ಸೂಚಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ